ವ್ಯವಸ್ಥೆಯ ಕೊರತೆಗಳನ್ನು ನಿವಾರಿಸಲು, ಅಪಸವ್ಯಗಳನ್ನು ಹೊಗಲಾಡಿಸಲು ಪ್ರಭುತ್ವವು ಪ್ರಾಮಾಣಿಕವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಸ್ಪಂದಿಸಬೇಕು. ಸರಿಯಾದ ಸಮಯಕ್ಕೆ ಸ್ಪಂದನೆ ಸಿಗದಿದ್ದರೆ ಅಸಮಾಧಾನವು ಆಕ್ರೋಶದ ರೂಪ ತಳೆಯುತ್ತದೆ ಹಾಗೂ ಅದು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹಾಗಾಗಿಯೇ, ಅಧಿಕಾರಶಾಹಿ ನಿರ್ಲಕ್ಷ್ಯ ಭಾವನೆ ತೋರದೆ ಸಮಸ್ಯೆಗೆ ಪರಿಹಾರ ಒದಗಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
ಪೊಲೀಸ್ ದಂಪತಿ ವರ್ಗಾವಣೆ ಸಮಸ್ಯೆಯ ಬಗ್ಗೆ ಸರ್ಕಾರ ಕೊನೆಗೂ ಸ್ಪಂದಿಸಿರುವುದು ಸಮಾಧಾನಕರ. ಪತಿ-ಪತ್ನಿ ಪ್ರಕರಣಗಳಲ್ಲಿ ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಅಸ್ತು ಎಂದಿರುವ ಸರ್ಕಾರ, ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನವೇ ಅರ್ಹ ಪೊಲೀಸರ ವರ್ಗಾವಣೆ ಪ್ರಸ್ತಾವನೆಗಳ ಬಗ್ಗೆ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರೇ ಲಿಖಿತ ರೂಪದಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಅವರಿಗೆ ಸೂಚನೆ ಕೊಟ್ಟಿರುವುದರಿಂದ, ಈ ಬಾರಿಯಾದರೂ ವರ್ಗಾವಣೆಯ ಆಶ್ವಾಸನೆ ಈಡೇರಲಿದೆ ಎಂಬ ಭರವಸೆ ಸಿಬ್ಬಂದಿಯಲ್ಲಿ ಮೂಡಿದೆ.
ವರ್ಗಾವಣೆ ಮಾಡುವುದಾಗಿ ಪದೇಪದೆ ಸುಳ್ಳು ಭರವಸೆಗಳನ್ನು ಕೊಟ್ಟು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಪೊಲೀಸ್ ವಲಯದಲ್ಲಿ ಆಕ್ರೋಶ ಭುಗಿಲೆದ್ದು, ‘ವರ್ಗಾವಣೆ ಮಾಡಿ ಇಲ್ಲವೇ ದಯಾಮರಣ ಕೊಡಿ’ ಎಂದು ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಪತ್ರ ಬರೆಯಲು ನಿರ್ಧರಿಸಿದ್ದ ಸಿಬ್ಬಂದಿ, ಸಹಿ ಸಂಗ್ರಹ ಪ್ರಕ್ರಿಯೆ ಆರಂಭಿಸಿದ್ದರು. ಈ ಬಗ್ಗೆ ಫೆ. 23ರಂದು ವಿಜಯವಾಣಿ ವಿಶೇಷ ವರದಿ ಪ್ರಕಟಿಸಿ, ಒಟ್ಟಿಗೆ ಬಾಳಲಾಗದೆ ಗಂಡ-ಹೆಂಡತಿ ಅನುಭವಿಸುತ್ತಿರುವ ಸಾಂಸಾರಿಕ ಕಷ್ಟಗಳ ಕುರಿತು ವಿವರಿಸಿತ್ತು. ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವರು ಸಂಬಂಧಪಟ್ಟವರಿಗೆ ಸೂಚಿಸಿರುವುದು ಸ್ವಾಗತಾರ್ಹ ಕ್ರಮ.
ಮತ್ತೊಂದು ಬೆಳವಣಿಗೆಯಲ್ಲಿ, 545 ಸಬ್ ಇನ್ಸ್​ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಕೆಇಎ ಮರು ಪರೀಕ್ಷೆ ನಡೆಸಿತ್ತು. ಈ ವೇಳೆ ಕರೆಪತ್ರದಲ್ಲಿ ಗೊಂದಲ ಸೃಷ್ಟಿಯಾಗಿ ಸೇವಾನಿರತ ಕಾನ್​ಸ್ಟೆಬಲ್​ಗಳಿಗೆ ಅನ್ಯಾಯವಾಗಿತ್ತು. ಹೀಗಾಗಿ ಮುಂದಿನ 402 ಎಸ್​ಐ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಪರೀಕ್ಷೆ ವೇಳೆ ಇನ್​ಸರ್ವೀಸ್ ಕರೆಪತ್ರ ನೀಡಬೇಕೆಂದು ಕಾನ್​ಸ್ಟೆಬಲ್​ಗಳು ಮನವಿ ಮಾಡಿದ್ದರು. ಈ ಬಗ್ಗೆ ‘ವಿಜಯವಾಣಿ’ ಫೆ. 26ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ, ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಅವರಿಗೆ ಪತ್ರ ಬರೆದು ಗೊಂದಲ ಸರಿಪಡಿಸಲು ಸೂಚಿಸಿರುವುದು ಶ್ಲಾಘನೀಯ. ಮೂರು ವರ್ಷದಿಂದ ಬಾಕಿ ಇರುವ 402 ಎಸ್​ಐ ಹುದ್ದೆಗಳ ನೇಮಕಾತಿಗೆ ಶೀಘ್ರ ಪರೀಕ್ಷೆ ನಡೆಸಬೇಕು. ಎರಡು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಇನ್​ಸರ್ವೀಸ್ ನೇಮಕಾತಿಯಡಿ ಕರೆಪತ್ರಗಳನ್ನು ಕೊಡಬೇಕೆಂಬ ಕಾನ್​ಸ್ಟೆಬಲ್​ಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸಿ, ಹಿಂದೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಒಟ್ಟಾರೆ, ಪೊಲೀಸ್ ಇಲಾಖೆ ಯನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವ ದಿಟ್ಟ ಕ್ರಮಗಳಿಗೆ ಗೃಹ ಇಲಾಖೆ ಮುಂದಾಗಬೇಕು.
ಆಂಧ್ರದಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ 5000 ರೂ. ಘೋಷಣೆ: ಕರ್ನಾಟಕದಲ್ಲೂ ಈ ಮೊತ್ತ ಹೆಚ್ಚಸಲಿದೆಯೇ ಕಾಂಗ್ರೆಸ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
