ಬೆಂಗಳೂರು:ರಾಜ್ಯದಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ 32,647 ಜನರನ್ನು ಹೋಂ ಕ್ವಾರಂಟೈನ್​ನಲ್ಲಿರಿಸಿ ವೈದ್ಯಕೀಯ ನಿಗಾ ವಹಿಸಲಾಗಿದೆ. ಇವರಲ್ಲಿ ಎಷ್ಟು ಜನರಿಗೆ ಕರೊನಾ ಸೋಂಕು ತಗುಲಬಹುದು ಎಂಬ ಭೀತಿ ಆರೋಗ್ಯ ಇಲಾಖೆಗಿದೆ. ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಿದ ದೇಶ, ವಿದೇಶದ ಪ್ರಜೆಗಳ ಸಂಖ್ಯೆಯೇ 23,350 ಇದೆ. ಇವರ ಜತೆ 1,469 ಮಂದಿ ಪ್ರಥಮ ಸಂಪರ್ಕ ಹೊಂದಿದ್ದರೆ, 5,165 ಜನರು ದ್ವಿತೀಯ ಹಂತದ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಇವರನ್ನೂ ಪತ್ತೆಹಚ್ಚಿ ಹೋಂ ಕ್ವಾರಂಟೈನ್​ನಲ್ಲಿ ನಿಗಾ ಇರಿಸಲಾಗಿದೆ. 5543 ಜನರ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದ ರಲ್ಲಿ 5037 ಜನರಿಗೆ ನೆಗೆಟಿವ್ ವರದಿ ಬಂದಿವೆ.
406 ಜನರಿಗೆ ಐಸೋಲೇಷನ್​ನಲ್ಲಿ ಚಿಕಿತ್ಸೆ:ಕರೊನಾ ರೋಗ ಲಕ್ಷಣ ಕಂಡು ಬಂದಿರುವ 406 ಜನರನ್ನು ಆಯಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 53, ದಕ್ಷಿಣ ಕನ್ನಡದಲ್ಲಿ 47 ಹಾಗೂ ತುಮಕೂರಿನಲ್ಲಿ 30 ಜನರನ್ನು ಐಸೋಲೇಷನ್​ಲ್ಲಿ ಇರಿಸಿ ನೋಡಿಕೊಳ್ಳಲಾಗುತ್ತಿದೆ. ಉಳಿದಂತೆ ಬೀದರ್-34, ಕೊಪ್ಪಳ-33, ಮೈಸೂರು-28, ಬಳ್ಳಾರಿ-25, ಉಡುಪಿ-24, ಬಾಗಲಕೋಟೆ-23, ಉತ್ತರ ಕನ್ನಡ-20, ಕೊಡಗು-16, ಕಲಬುರಗಿ-14, ಶಿವಮೊಗ್ಗ-13, ಧಾರವಾಡ-12, ಚಿಕ್ಕಬಳ್ಳಾಪುರ-5, ಕೋಲಾರ-4, ದಾವಣಗೆರೆ-4, ವಿಜಯಪುರ-3, ಹಾಸನ-2, ಯಾದಗಿರಿ-2, ಚಿತ್ರದುರ್ಗ-2, ಗದಗ-2, ರಾಮನಗರದಲ್ಲಿ ಒಬ್ಬರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.
ಆತ್ಮಸ್ಥೈರ್ಯ ತುಂಬಿದ ವೈದ್ಯರು:ಸಪ್ತಗಿರಿ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಡೀನ್ ಡಾ. ಜಯಂತಿ ಸಪ್ತಗಿರಿ, ಆಸ್ಪತ್ರೆಯ ಮಾನಸಿಕ ತಜ್ಞರಾದ ಶೋಯಿಬ್ ಮತ್ತು ಸಂತೋಷ್ ಉನ್ನಿ 14 ದಿನಗಳ ಸಮಾಲೋಚನೆ ನಡೆಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು. ಅಲ್ಲದೆ, ಪ್ರಯಾಣಿಕರ ಸಂಬಂಧಿಗಳಿಗೆ ಪ್ರತಿ ಹಂತದಲ್ಲಿ ಸೂಕ್ತ ಮಾಹಿತಿ ಒದಗಿಸಲಾಯಿತು. ಎಲ್ಲರಿಗೂ ಅವರ ಅಭಿರುಚಿಗೆ ತಕ್ಕಂತೆ ಊಟ ವ್ಯವಸ್ಥೆ ಕಲ್ಪಿಸಲಾಯಿತು.
ದೂರವಾಣಿ, ಅಂತರ್ಜಾಲ, ವಿವಿಧ ಆಟೋಟಗಳ ವ್ಯವಸ್ಥೆ ಕಲ್ಪಿಸಲಾಯಿತು. ಉತ್ತಮ ಚಿಕಿತ್ಸೆಯಿಂದ ಸಂತಸಗೊಂಡ ಪ್ರಯಾಣಿಕರು ವೈದ್ಯರಿಗೆ ಹೂಗುಚ್ಛ ನೀಡಿ ಸಂತಸ ವ್ಯಕ್ತಪಡಿಸಿದರು. ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ, ತಾಲೂಕು ಆರೋಗ್ಯಾ ಧಿಕಾರಿ, ಆಸ್ಪತ್ರೆಯ ಸಿಬ್ಬಂದಿಯ ಕಾರ್ಯ ಶ್ಲಾಘನೀಯವಾಗಿತ್ತು.
14 ದಿನ ಕ್ವಾರಂಟೈನ್
ನಿಯೋಜಿತ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು ಹಾಗೂ ಶಂಕಿತರನ್ನು ಕನಿಷ್ಠ 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಪಾಸಿಟಿವ್ ಪ್ರಕರಣಗಳಲ್ಲಿ ಸರಣಿ ಮಾದರಿ ಗಳು ನೆಗೆಟಿವ್ ಎಂದು ಸಾಬೀತಾ ಗುವ ತನಕ ಅಥವಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸೂಚನೆವರೆಗೆ ಬಿಡುಗಡೆ ಮಾಡುವುದಿಲ್ಲ. ಶಂಕಿತರನ್ನು 14 ದಿನಗಳ ಕಾಲ ನಿಗಾ ವಹಿಸಲಾಗು ತ್ತದೆ. ಈ ಅವಧಿ ಯಲ್ಲಿ ರೋಗ ಲಕ್ಷಣ ಕಂಡು ಬರದಿದ್ದರೆ ಅಂತರ ಕಾಯ್ದುಕೊಳ್ಳುವ ಸಲಹೆ ಕೊಟ್ಟು ಬಿಡಲಾಗುತ್ತದೆ.
ಕ್ವಾರಂಟೈನ್​ನಲ್ಲಿದ್ದ 47 ಮಂದಿ ಬಿಡುಗಡೆ
ಕರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದ 47 ಮಂದಿ ಭಾನುವಾರ ಬಿಡುಗಡೆ ಆಗಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ ಸೇರಿ ಆರು ದೇಶಗಳಿಂದ ಬಂದಿದ್ದ 47 ಪ್ರಯಾಣಿಕರನ್ನು ಕರೊನಾ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ 16 ದಿನ ಕ್ವಾರೆಂಟೈನ್​ನಲ್ಲಿ ಇಡಲಾಗಿತ್ತು. ಆಸ್ಪತ್ರೆ ಸೇರಿದ್ದ ಸಂದರ್ಭ ಇವರೆಲ್ಲರಿಗೆ ಸಣ್ಣ ಪ್ರಮಾಣದಲ್ಲಿ ಶೀತ-ಜ್ವರ ಇತ್ತು. ಹೀಗಾಗಿ, ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಎಲ್ಲರನ್ನೂ ವಿಶೇಷ ಐಸೋಲೇಷನ್ ವಾರ್ಡ್​ಗೆ ದಾಖಲಿಸಿ ಆಸ್ಪತ್ರೆಯ ತಜ್ಞ ವೈದ್ಯಕೀಯ ಸಿಬ್ಬಂದಿ 24 ಗಂಟೆಗಳ ಕಾಲ ಚಿಕಿತ್ಸೆ ನೀಡಿ ಆರೈಕೆ ಮಾಡಿದರು.
ಲಾಕ್​ಡೌನ್​​ ಲೆಕ್ಕಿಸದೇ ಸಾಮೂಹಿಕ ನಮಾಜ್​: ಗಡಿಯಲ್ಲಿ ಆತಂಕದ ವಾತಾವರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 12 =
Remember me
