ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಪಾದರಾಯನಪುರ ಮತ್ತು ಬಾಪೂಜಿನಗರದಲ್ಲಿ ಸೀಲ್​ಡೌನ್ ಹೇರಿದ್ದರೂ ಜನ ಮಾತ್ರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅನವಶ್ಯಕವಾಗಿ ರಸ್ತೆಗೆ ಇಳಿದು ಮತ್ತಷ್ಟು ಕರೊನಾ ಆತಂಕ ಹೆಚ್ಚಿಸುತ್ತಿದ್ದಾರೆ.
ಭಾನುವಾರ (ಏ.12) ಮಧ್ಯಾಹ್ನ ಜೆ.ಜೆ. ನಗರದ ಕನಕನಗರದಲ್ಲಿ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದ ಕರೊನಾ ಸೋಂಕು ಶಂಕಿತ ವ್ಯಕ್ತಿಯೊಬ್ಬ ಹೊರಗಡೆ ಓಡಾಡಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹೋಂ ಕ್ವಾರಂಟೈನ್ ಎನ್​ಫೋರ್ಸ್​ವೆುಂಟ್ ದಳದ ಸಿಬ್ಬಂದಿ ಕರೆಸಿ ಸೋಂಕು ಶಂಕಿತನನ್ನು ವಶಕ್ಕೆ ಪಡೆದು ಆಂಬುಲೆನ್ಸ್ ಮೂಲಕ ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿ ಕ್ಯಾಮರಾಗಳಿಂದ ನಿಗಾ:ಸೀಲ್​ಡೌನ್ ನಡುವೆಯೂ ಜನರು ಅನವಶ್ಯಕವಾಗಿ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅಂತವರ ಮೇಲೆ ನಿಗಾವಹಿಸಲು ಪೊಲೀಸರು ಸಿಸಿ ಕ್ಯಾಮರಾ ಮೊರೆ ಹೋಗಿದ್ದಾರೆ. ಪಾದರಾಯನಪುರ ಮತ್ತು ಬಾಪೂಜಿನಗರದ ಪ್ರಮುಖ ರಸ್ತೆಗಳಲ್ಲಿ ಕೆಲವೆಡೆ ಸಿಸಿ ಕ್ಯಾಮರಾ ಅಳಡಿಸಿ ಕಣ್ಣಿಟ್ಟಿದ್ದಾರೆ. ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಆಧರಿಸಿ ಅನವಶ್ಯಕವಾಗಿ ಓಡಾಡುವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಒಟ್ಟು 31 ವಿದೇಶಿಗರು:ಇಂಡೋನೇಷ್ಯಾ, ಕಿರ್ಗಿಸ್ತಾನ್ ಮತ್ತು ಕಜಕಿಸ್ತಾನ್ ದೇಶದ 31 ಪ್ರಜೆಗಳು ಮಾರ್ಚ್​ನಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದಾರೆ. ಬೆಂಗಳೂರು ಸೇರಿ ದೇಶದ ವಿವಿಧೆಡೆ ನಡೆದ ತಬ್ಲಿಘಿ ಧಾರ್ವಿುಕ ಪ್ರಚಾರದಲ್ಲಿ ಪಾಲ್ಗೊಂಡು ಪಾದರಾಯನಪುರದ ಸುಬಾನಿಯ ಮಸೀದಿಗೆ ಬಂದು ನೆಲೆಸಿರುವುದು ಬಯಲಾಗಿದೆ. ಇವರನ್ನು ಮಸೀದಿಗೆ ಬಂದು ಹೋಗಿರುವ ಜನರು ಸಂರ್ಪಸಿರುವ ಸಾಧ್ಯತೆ ಇದ್ದು, ಕರೊನಾ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಸೋಂಕಿತರ ಪತ್ತೆಗೆ ಪ್ರತ್ಯೇಕ ತಂಡಗಳ ರಚನೆ- 12 ಗಂಟೆಯೊಳಗೆ ಪ್ರಾಥಮಿಕ ಸಂಪರ್ಕಿತರ ಪತ್ತೆ ಸಾಧ್ಯ | ನಾಲ್ವರು ಐಎಎಸ್ ಅಧಿಕಾರಿಗಳ ಬಳಕೆ

ಸಾವು ಕಣ್ಮುಂದೆ ಕುಣೀತಿತ್ತು- ಆದ್ರೂ ಬದುಕಿ ಉಳಿದೆ..

VIDEO & PHOTOS: ಚಿಟ್ಟೆಯಲ್ಲ ಇದು, ಹೆಣ್ಣಿನ ಬೆತ್ತಲೆ ದೇಹದ ಮೇಲೆ ಸೃಷ್ಟಿಯಾದ ಭ್ರಮೆ; ದಿಟ್ಟಿಸಿ ನೋಡಿ ನಗ್ನ ಯುವತಿಯನ್ನು ಕಾಣುತ್ತೀರಿ…!

ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 − 7 =
Remember me
