ಹುಬ್ಬಳ್ಳಿ: ಕೈ ಸಿ ಕೆಟಗರಿ ಸೀಲ್ ಹಾಕಿಸಿಕೊಂಡಿದ್ದ ವ್ಯಕ್ತಿಯೊಬ್ಬ ಯುಗಾದಿ ದಿನವಾದ ನಿನ್ನೆ ಓಣಿಯಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಿಂದ ವರದಿಯಾಗಿದೆ. ಈ ವ್ಯಕ್ತಿ ಆರು ದಿನಗಳ ಕೆಳಗೆ ಬಾಂಗ್ಲಾದಿಂದ ಬಂದವನಾಗಿದ್ದು, ಆತನ ಕೈಗೆ ಸಿ ಕೆಟಗರಿ ಸೀಲ್ ಹಾಕ್ ಹೋಂ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚಿಸಲಾಗಿತ್ತು.
ಆದರೆ, ಆತ ಬುಧವಾರ ಸರ್ಕಾರದ ಸೂಚನೆ ಮೀರಿ ಕುಂದಗೋಳದ ಕುಂಬಾರ ಓಣಿಯಲ್ಲಿ ಅಡ್ಡಾಡಿದ್ದಾನೆ. ಕೈಯ ಮೇಲೆ ಸೀಲ್ ಕಂಡ ಜನರು ಆತನ ಓಡಾಟವನ್ನು ಪ್ರತಿರೋಧಿಸಿದರು. ಅಲ್ಲದೇ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ, ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಅಧಿಕಾರಿಗಳು ಆತನ ಆರೋಗ್ಯ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಮುಂದುವರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಪೊಲೀಸರು ಕೂಡ ಆತನಿಗೆ ಕಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಮೂವತ್ತೇಳು ವರ್ಷದ ಈ ವ್ಯಕ್ತಿ ಮಾರ್ಚ್​ 20ರಂದು ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸಿದ್ದರು. ಶರೀರದ ಉಷ್ಣತೆಯಲ್ಲಿ ಏರುಪೇರು ಕಂಡುಬಂದ ಕಾರಣ ಹೋಂ ಕ್ವಾರಂಟೈನ್​ಗೆ ವೈದ್ಯಾಧಿಕಾರಿಗಳು ಸೂಚಿಸಿದ್ದರು.
ಹಾಸನದಲ್ಲಿ ವರ್ಷ ತೊಡಕು ಹಿನ್ನೆಲೆ ಮಾಂಸ ಖರೀದಿಗೆ ಸಾಲಿನಲ್ಲಿ ನಿಂತ ಸಾವಿರಾರು ಜನರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
