ಕರೊನಾವೈರಸ್ ಕಾಣಿಸಿಕೊಂಡ ನಂತರ ದೇಶದಲ್ಲಿ ವಿಧಿಸಲಾಗಿದ್ದ ಲಾಕ್​ಡೌನ್​ನಿಂದ ಕಾರ್ವಿುಕರು ಸೇರಿ ಬಹುತೇಕ ದಿನಗೂಲಿ ಆಧರಿಸಿದ ಕೋಟ್ಯಂತರ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸಿವೆ. ಈಗ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತಗಳು ಮೇ 1ರಿಂದ ವಲಸೆ ಕಾರ್ವಿುಕರನ್ನು ಅವರ ಊರುಗಳಿಗೆ ಹೋಗಲು ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ಉಚಿತ ವ್ಯವಸ್ಥೆ ಮಾಡಿಕೊಟ್ಟಿವೆ. ಹೊರ ರಾಜ್ಯಗಳಿಂದಲೂ ವಲಸಿಗರು ಆಗವಿಸಿದ್ದಾರೆ. ಇದುವರೆಗೂ ಒಂದು ಲಕ್ಷ ಕಾರ್ವಿುಕರು ರಾಜಧಾನಿ ಬಿಟ್ಟಿದ್ದು, 3500 ಬಸ್​ಗಳ ಮೂಲಕ ಊರು ಸೇರಿಕೊಂಡಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಕಾರ್ವಿುಕರೆಲ್ಲರ ಕೈಗಳಿಗೆ ಮುದ್ರೆ ಹಾಕಲಾಗಿದ್ದು, 14 ದಿನಗಳ ಹೋಮ್ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ಇದರಿಂದ ಲಾಕ್​ಡೌನ್ ವೇಳೆ ದುಡಿಮೆ ಇಲ್ಲದೆ ಮಲಗಿದವರ ಪಾಡು, ಊರು ತಲುಪಿದ ನಂತರವೂ ಅದೇ ಆಗಿದೆ. ಸಮಾಧಾನಕರ ಸಂಗತಿ ಎಂದರೆ, ಕೆಲ ಜಿಲ್ಲಾಡಳಿತಗಳು ಪಡಿತರ ವಿತರಿಸಿ ತಾತ್ಕಾಲಿಕ ನೆಮ್ಮದಿ ಒದಗಿಸಿವೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.
ಬಳ್ಳಾರಿ
ಬೆಂಗಳೂರಿನಿಂದ ಬಳ್ಳಾರಿಗೆ ಸುಮಾರು 2,680 ಜನರು ಬಂದಿದ್ದಾರೆ. ಆಂಧ್ರದಿಂದ 63, ಉತ್ತರಾಖಂಡದಿಂದ 14, ಗುಜರಾತ್​ನಿಂದ ಬಂದಿರುವ ಐವರು ಇವರಲ್ಲಿ ಸೇರಿದ್ದಾರೆ.
ಬೆಳಗಾವಿ
ಬೆಂಗಳೂರಿನಿಂದ ಜಿಲ್ಲೆಗೆ ಈವರೆಗೆ 2,100 ಕಾರ್ವಿುಕರು ಆಗಮಿಸಿದ್ದಾರೆ. ಅವರಿಗೆಲ್ಲ ಉಳಿದುಕೊಳ್ಳಲು ನಾಲ್ಕು ಕಡೆ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ 900 ಕಾರ್ವಿುಕರು ಬಂದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಕಂಡುಬಂದವರನ್ನು ಬೆಳಗಾವಿ ನಗರದಲ್ಲಿಯೇ ಕ್ವಾರೈಂಟೈನ್ ಮಾಡಲಾಗುತ್ತಿದೆ. ಹಳ್ಳಿಗಳಿಗೆ ಹೋಗುತ್ತಿರುವವರ ಆರೋಗ್ಯದ ಮೇಲೆ ನಿಗಾ ವಹಿಸಲು ಸ್ಥಳೀಯ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ.
ಬಾಗಲಕೋಟೆ
ಸುಮಾರು 26,000ಕ್ಕೂ ಅಧಿಕ ಕಾರ್ವಿುಕರು ಬಸ್​ಗಳಲ್ಲಿ ಹಿಂದಿರುಗಿದ್ದಾರೆ. ಅವರನ್ನೆಲ್ಲ ಜಿಲ್ಲಾಡಳಿತ ಥರ್ಮಲ್ ಟೆಸ್ಟಿಂಗ್​ಗೆ ಒಳಪಡಿಸಿ, ಅವರವರ ಊರುಗಳಿಗೆ ಕಳುಹಿಸಿಕೊಟ್ಟಿದೆ. ಬೆಂಗಳೂರಿಂದ ಬಾಗಲಕೋಟೆಗೆ ಬಂದವರ ಸಂಖ್ಯೆ 4 ಸಾವಿರಕ್ಕೂ ಅಧಿಕ. ನಿತ್ಯ ಬಾಗಲಕೋಟೆಯಿಂದ ಹಳ್ಳಿ ಹಳ್ಳಿಗೆ 30ಕ್ಕೂ ಅಧಿಕ ಬಸ್​ಗಳನ್ನು ಕಳಿಸಲಾಗುತ್ತಿದೆ. ಇದೇ ರೀತಿ ಬೆಂಗಳೂರಿಗೆ ಹಿಂದಿರುಗುವವರ ಸಂಖ್ಯೆಯೂ ಅಧಿಕವಾಗಿದೆ.
ಮಂಡ್ಯ
ಹೊರ ಜಿಲ್ಲೆಗಳಿಂದ ಮಂಡ್ಯ ಜಿಲ್ಲೆಗೆ ಎರಡು ದಿನದಲ್ಲಿ 84 ಕಾರ್ವಿುಕರು ಆಗಮಿಸಿದ್ದಾರೆ. ಸೋಮವಾರ ಆಗಮಿಸಿದ 34 ಮತ್ತು ಮಂಗಳವಾರ ಆಗಮಿಸಿದ 50 ಕಾರ್ವಿುಕರನ್ನು ಮದ್ದೂರು ತಾಲೂಕಿನ ನಿಡಘಟ್ಟ ಚೆಕ್​ಪೋಸ್ಟ್ ಬಳಿ ಪರಿಶೀಲಿಸಿದ ಬಳಿಕ ಪ್ರವೇಶ ನೀಡಲಾಗಿದೆ.
ಚಾಮರಾಜನಗರ
33 ಬಸ್​ಗಳು ಹಾಗೂ 8 ಮಿನಿ ಬಸ್​ಗಳಲ್ಲಿ ಒಟ್ಟು 1340 ಕಾರ್ವಿುಕರು ಜಿಲ್ಲೆಗೆ ಬಂದಿದ್ದಾರೆ. ಬೆಂಗಳೂರಿನಿಂದ 659, ಹಾಸನದಿಂದ 6, ಕೊಡಗಿನಿಂದ 139 ಜನ ಆಗಮಿಸಿದ್ದಾರೆ.
ಮೈಸೂರು
ಜಿಲ್ಲೆಗೆ ಇದುವರೆಗೆ 1600ಕ್ಕೂ ಹೆಚ್ಚು ಜನರು ಹೊರ ಜಿಲ್ಲೆಗಳಿಂದ ಆಗಮಿಸಿದ್ದು, ಬೆಂಗಳೂರಿನಿಂದ ಬಂದವರ ಸಂಖ್ಯೆಯೇ ಅಧಿಕ. ಜಿಲ್ಲೆಗೆ ಆಗಮಿಸಿದವರನ್ನು ಜಿಲ್ಲಾಡಳಿತ ಕಾರ್ವಿುಕರು ಹಾಗೂ ಸಾಮಾನ್ಯ ಜನರೆಂದು ವಿಂಗಡಣೆ ಮಾಡಿಲ್ಲ.
ಇದನ್ನೂ ಓದಿಮೆಟ್ಟಿಲಿನಿಂದ ಉರುಳಿ ಬಿದ್ದು ಆಸ್ಪತ್ರೆ ಸೇರಿದ ಬಾಲಿವುಡ್ ಸಿನಿಮಾಟೋಗ್ರಾಫರ್
ಧಾರವಾಡ
ಬೆಂಗಳೂರಿನಿಂದ ಜಿಲ್ಲೆಗೆ 1013 ಕಾರ್ವಿುಕರು ವಾಪಸಾಗಿದ್ದಾರೆ. ಅವರಿಗೆ ಹುಬ್ಬಳ್ಳಿ-ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಆಹಾರದ ವ್ಯವಸ್ಥೆ ಮಾಡಲಾಯಿತು.
ಯಾದಗಿರಿ
ಬೆಂಗಳೂರಿನಿಂದ 6000 ಕಾರ್ವಿುಕರು ಜಿಲ್ಲೆಗೆ ಮರಳಿದ್ದಾರೆ. ಗ್ರಾಮೀಣ ಭಾಗದಲ್ಲಿ ವಲಸಿಗರನ್ನು ಕಂಡು ಜನತೆ ಹೆದರುತ್ತಿದ್ದು, ಹೋಂ ಕ್ವಾರಂಟೈನ್ ಅವಧಿ ಮುಗಿಸುವಂತೆ ಜನರೇ ಒತ್ತಡ ತರುತ್ತಿದ್ದಾರೆ. ಬೆಂಗಳೂರಿನಲ್ಲಿ ತೊಂದರೆಗೆ ಸಿಲುಕಿದ್ದವರು ಇದೀಗ ತಮ್ಮೂರಲ್ಲೂ ಸ್ವಯಂ ಬಹಿಷ್ಕಾರಕ್ಕೆ ಒಳಗಾಗುವ ಅನಿವಾರ್ಯತೆ ಎದುರಾಗಿದೆ. ಇವರೆ ಲ್ಲರಿಗೂ ಪಡಿತರ ವಿತರಿಸ ಲಾಗುತ್ತಿದೆ.
ಚಿತ್ರದುರ್ಗ
ಲಾಕ್​ಡೌನ್ ವೇಳೆ ಜಿಲ್ಲೆಯ ಲ್ಲಿದ್ದ ರಾಜ್ಯದ ಅನ್ಯ ಜಿಲ್ಲೆಗಳ 135 ಕಾರ್ವಿುಕರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ರಾಜಸ್ಥಾನದ 31 ಜನ ಡಿಸಿ ಕಚೇರಿಗೆ ತೆರಳಿ ಊರಿಗೆ ಕಳಿಸುವಂತೆ ಕೋರಿ ಕೊಂಡಿದ್ದಾರೆ. ಗುಜರಾತ್​ನಿಂದ 16 ಕಾರ್ವಿುಕರು ಜಿಲ್ಲೆಗೆ ಬಂದಿದ್ದಾರೆ. ತಮ್ಮೂರಿಗೆ ತೆರಳಲು ಸೇವಾಸಿಂಧು ಪೋರ್ಟಲ್​ನಲ್ಲಿ 275 ಹೊರ ರಾಜ್ಯದ ಕಾರ್ವಿುಕರು ಅರ್ಜಿ ಹಾಕಿದ್ದಾರೆ. ಬೇರೆ ರಾಜ್ಯದಿಂದ ಜಿಲ್ಲೆಗೆ 108 ಕಾರ್ವಿುಕರು ಬರಬೇಕಿದೆ.
ಬೀದರ್
ಬೆಂಗಳೂರು ಸೇರಿ ವಿವಿಧೆಡೆಯಿಂದ 2005 ಜನರು ಗಡಿ ಜಿಲ್ಲೆ ಬೀದರ್​ಗೆ ಬಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಕಾರ್ವಿುಕರು. ಇವರೆಲ್ಲರಿಗೂ ಸದ್ಯಕ್ಕೆ ಕೆಲಸವಿಲ್ಲದ ಕಾರಣ ಸಮಸ್ಯೆ ಎದುರಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಡಿತರ ಸಿಕ್ಕಿರುವುದು ಇವರ ಹಸಿವು ನೀಗಿಸಿದೆ.
ಇದನ್ನೂ ಓದಿಕುಡಿದ ಮತ್ತಿನಲ್ಲಿ ಹಾವನ್ನೇ ಕಚ್ಚಿ ಕೊಂದವ ಏನಾದ ಗೊತ್ತಾ?
ಚಿಕ್ಕಬಳ್ಳಾಪುರ
ಈವರೆಗೆ 58 ಮಂದಿ ಬಂದಿದ್ದು, ಎಲ್ಲರ ಮೇಲೂ ಜಿಲ್ಲಾಡಳಿತ ನಿಗಾ ಇರಿಸಿದೆ.
sಕೊಪ್ಪಳ: ಕೊಪ್ಪಳಕ್ಕೆ ಒಟ್ಟು 911 ಜನ ಆಗಮಿಸಿದ್ದಾರೆ. ಅವರಿಗೆಲ್ಲ ವಿವರ ಸಂಗ್ರಹಣೆ, ಆರೋಗ್ಯ ಪರೀಕ್ಷೆ ಬಳಿಕ ಅವರ ಗ್ರಾಮಕ್ಕೆ ಸಾರಿಗೆ ಬಸ್ ಮೂಲಕ ಕಳಿಸಿಕೊಡಲಾಗಿದೆ. ಬಂದವರಿಗೆಲ್ಲ ಬಸ್ ನಿಲ್ದಾಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಾಕ್​ಡೌನ್ ಸಡಿಲಿಕೆ ಆದಾಗಿನಿಂದ ಜಿಲ್ಲೆಗೆ ವಿವಿಧ ಜಿಲ್ಲೆಗಳಿಂದ ಒಟ್ಟು 2,908 ಜನರು ಆಗಮಿಸಿದ್ದಾರೆ.
ರಾಯಚೂರು
ಬೆಂಗಳೂರಿನಿಂದ ಎರಡು ದಿನಗಳಲ್ಲಿ 3,947 ಜನ ರಾಯಚೂರು ಜಿಲ್ಲೆಗೆ ಆಗಮಿಸಿದ್ದಾರೆ. ಹೊರ ರಾಜ್ಯಗಳಿಂದ ಮಂಗಳವಾರ 94 ಜನ ಆಗಮಿಸಿದ್ದಾರೆ.
ಕಲಬುರಗಿ
ಬೆಂಗಳೂರಿನಿಂದ 6500 ಕಾರ್ವಿುಕರು ಜಿಲ್ಲೆಗೆ ವಾಪಸಾಗಿದ್ದು, ಪ್ರತಿಯೊಬ್ಬರನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಿ ಅವರ ಊರುಗಳಿಗೆ ಕಳಿಸಲಾಗಿದೆ. 81 ಬಸ್​ಗಳಲ್ಲಿ ಮಂಗಳವಾರ 2477 ಜನ ಆಗಮಿಸಿದ್ದಾರೆ. ಜಿಲ್ಲಾಡಳಿತ ವಲಸೆ ಕಾರ್ವಿುಕರ ಆರೋಗ್ಯದ ಮೇಲೆ ನಿಗಾ ಇರಿಸಿದ್ದು, ಪಡಿತರ ಧಾನ್ಯ ವಿತರಿಸಲಾಗುತ್ತಿದೆ.
ತುಮಕೂರು
ಬೇರೆ ಬೇರೆ ಜಿಲ್ಲೆಗಳಿಂದ 420 ಕಾರ್ವಿುಕರು ಬಂದಿದ್ದು, ಆಯಾ ತಾಲೂಕು ಆಡಳಿತ ಕಾರ್ವಿುಕರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಮಾಹಿತಿ ಪಡೆದು ಹೋಂ ಕ್ವಾರಂಟೈನ್​ಗೆ ಸೂಚಿಸಿದೆ.
ವಿಜಯಪುರ
ಒಟ್ಟು 87 ಬಸ್​ಗಳು ವಿವಿಧ ಭಾಗಗಳಿಂದ ಜಿಲ್ಲೆಗೆ ಆಗಮಿಸಿವೆ. ಪ್ರತಿ ಬಸ್​ನಲ್ಲಿ 28-30 ಜನ ಬಂದಿದ್ದಾರೆ. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನೋಂದಣಿ ಮಾಡಿಕೊಂಡು, ಸ್ವಗ್ರಾಮಗಳಿಗೆ ತೆರಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ಅಲ್ಲಿ ಅವರಿಗೆ ಗೃಹ ಬಂಧನದಲ್ಲಿ ಇರಿಸಲಾಗುತ್ತಿದೆಯಾ? ವಸತಿ ಹೇಗೆ? ಎಂಬಿತ್ಯಾದಿ ಕಾಳಜಿ ಬಗ್ಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.
ಗದಗ
ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ 1500ಕ್ಕೂ ಅಧಿಕ ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಒಟ್ಟು 55 ಬಸ್​ಗಳು ನಗರಕ್ಕೆ ಬಂದಿವೆ. ನಗರಕ್ಕೆ ಆಗಮಿಸಿದವರ ಪೈಕಿ ಬಹುತೇಕರು ಕಾರ್ವಿುಕರಿದ್ದಾರೆ. ಅಲ್ಲದೆ, ಕಾರ್ಯನಿಮಿತ್ತ ಬೆಂಗಳೂರು ಸೇರಿ ವಿವಿಧ ಜಿಲ್ಲೆಗೆ ತೆರಳಿದ ಜನರೂ ವಾಪಸಾಗಿದ್ದಾರೆ. ಅವರೆಲ್ಲರಿಗೂ ಬಸ್ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಜಿಲ್ಲಾಡಳಿತವು ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಅವರ ಊರುಗಳಿಗೆ ತಲುಪಿಸಿದೆ.
ಇದನ್ನೂ ಓದಿಪಶ್ಚಿಮ ಬಂಗಾಳದ ಜನರಿಗೆ ಕೇಂದ್ರ ಸರ್ಕಾರ ನೀಡಿದ ಎಚ್ಚರಿಕೆ ಏನು?
ಕೋಲಾರ
ಮಂಗಳೂರಿನಿಂದ ಮುಳಬಾಗಿಲು ತಾಲೂಕಿಗೆ 20, ಹಾಸನದ ಬೇಲೂರಿನಿಂದ ಜಿಲ್ಲೆಯ ವಿವಿಧ ಭಾಗಗಳಿಗೆ 30 ಕಾರ್ವಿುಕರು ಬಂದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ 200ಕ್ಕೂ ಹೆಚ್ಚು ಕಾರ್ವಿುಕರು ಕೆಜಿಎಫ್​ಗೆ ಬಂದಿದ್ದಾರೆ. 600ಕ್ಕೂ ಹೆಚ್ಚು ಕಾರ್ವಿುಕರು ವಾಪಸ್ ಬರಲು ಸೇವಾಸಿಂಧು ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದು, ಪರಿಶೀಲನೆ ಪ್ರಗತಿಯಲ್ಲಿದೆ.
ರಾಮನಗರ
ಜಿಲ್ಲೆಗೆ ವಾಪಸ್ ಕರೆಸಿಕೊಳ್ಳುವಂತೆ ಪ್ರವಾಸಿಗರು, ಕಾರ್ವಿುಕರು ಸೇರಿ 214 ಮಂದಿ ಸೇವಾಸಿಂಧು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈವರೆಗೆ ಮಂಡ್ಯದಿಂದ 9 ಮಂದಿ ಬಂದಿರುವ ಅಧಿಕೃತ ಮಾಹಿತಿಯಷ್ಟೇ ಜಿಲ್ಲಾಡಳಿತ ಬಳಿ ಲಭ್ಯ.
ಹಾಸನ
ಬೆಂಗಳೂರಿನಿಂದ ಜಿಲ್ಲೆಗೆ 2,630 ಕಾರ್ವಿುಕರು ಬಂದಿದ್ದಾರೆ. ಭಾನುವಾರ 550, ಸೋಮವಾರ 700 ಮತ್ತು ಮಂಗಳವಾರ 650 ಜನರು ಜಿಲ್ಲೆ ಪ್ರವೇಶಿಸಿದ್ದಾರೆ. ಆರೋಗ್ಯ, ಪೊಲೀಸ್ ಸಿಬ್ಬಂದಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ, ಜಿಲ್ಲೆಗೆ ಬಿಟ್ಟುಕೊಂಡರು.
ಹಾವೇರಿ
ಜಿಲ್ಲೆಗೆ 428 ಕಾರ್ವಿುಕರು ಹೊರ ಜಿಲ್ಲೆಗಳಿಂದ ಬಂದಿದ್ದಾರೆ. ಮಾಕನೂರು ಚೆಕ್​ಪೋಸ್ಟ್, ರಾಣೆಬೆನೂರು, ಹಾವೇರಿ ಹಾಗೂ ಶಿಗ್ಗಾಂವಿಯಲ್ಲಿ ಇಳಿಸಿಕೊಂಡು ಅಲ್ಲಿಂದ ಕ್ವಾರೆಂಟೈನ್ ವಾಚ್ ಆಪ್​ನಲ್ಲಿ ನೋಂದಾಯಿಸಿಕೊಳ್ಳಲಾಯಿತು. ಕೈಗೆ ಹಾಕಿರುವ ಸೀಲ್, ಆರೋಗ್ಯ ಇಲಾಖೆ ಪ್ರಮಾಣಪತ್ರ ಪರಿಶೀಲಿಸಿ ಹೊರಗಿನಿಂದ ಬಂದವರನ್ನು ಗ್ರಾಮದೊಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಅಲ್ಲದೆ, ಕ್ವಾರಂಟೈನ್​ನಲ್ಲಿ ಇರುವಂತೆ ಗ್ರಾಮಸ್ಥರೇ ಸೂಚನೆ ನೀಡುತ್ತಿದ್ದಾರೆ.
ಶಿವಮೊಗ್ಗ
ಬೆಂಗಳೂರಿನಿಂದ ಜಿಲ್ಲೆಗೆ ಇದುವರೆಗೆ 865 ಮಂದಿ ಆಗಮಿಸಿದ್ದಾರೆ. ಇವರೆಲ್ಲರನ್ನೂ ಜಿಲ್ಲೆಯ ಗಡಿ ಕಾರೇಹಳ್ಳಿಯಲ್ಲಿ ತಪಾಸಣೆ ನಡೆಸಿ ಜಿಲ್ಲೆಯೊಳಗೆ ಬಿಡಲಾಗಿದೆ. ಸ್ವಗ್ರಾಮಕ್ಕೆ ಆಗಮಿಸಿರುವವರು ಮನೆಯಲ್ಲೇ ಇದ್ದಾರೆ. ನೆರೆಹೊರೆಯವರು ಏನು ಹೇಳುವರೋ? ಎಂಬ ಅಳುಕಿನಲ್ಲೇ ಯಾರೂ ಮನೆಯಿಂದ ಹೊರಹೋಗುತ್ತಿಲ್ಲ. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಇದನ್ನೂ ಓದಿVIDEO: ಹಂದಿಗಳು ಸಾರ್​ ಹಂದಿಗಳಿವು, ಕಲ್ಲು ತೂರಿದ್ರೆ ಸುಮ್ನೆ ಬಿಟ್ಟಾವೆ?
ಉತ್ತರ ಕನ್ನಡ
ಬೆಂಗಳೂರಿನಿಂದ ಕಾರವಾರಕ್ಕೆ 493 ಕಾರ್ವಿುಕರು 16 ಬಸ್​ಗಳಲ್ಲಿ ವಾಪಸಾಗಿದ್ದಾರೆ. ಗೋವಾದಿಂದ ಕಾರವಾರಕ್ಕೆ 10 ಬಸ್​ಗಳ ಮೂಲಕ 308 ಕಾರ್ವಿುಕರು ವಾಪಸಾಗಿದ್ದಾರೆ. ಆರೋಗ್ಯ ತಪಾಸಣೆ ಮಾಡಿದ ಬಳಿಕ ಜಿಲ್ಲಾಡಳಿತ ಅವರವರ ಗ್ರಾಮಗಳಿಗೆ ತಲುಪಿದೆ.
ಕೊಡಗು
ಸಂಪಾಜೆ ಗೇಟ್ ಮುಖಾಂತರ 195 ಹಾಗೂ ಕುಶಾಲನಗರ ಗಡಿಯ ಕೊಪ್ಪ ಮೂಲಕ 1396 ಕಾರ್ವಿುಕರು ಆಗಮಿಸಿದ್ದು. ಹೊರ ರಾಜ್ಯಗಳೂ ಸೇರಿ ಒಟ್ಟು 2248 ಕಾರ್ವಿುಕರು ಕೊಡಗು ಜಿಲ್ಲೆಗೆ ಬಂದಿದ್ದಾರೆ.
ಚಿಕ್ಕಮಗಳೂರು
ಹೊರ ಜಿಲ್ಲೆಯಿಂದ ಜಿಲ್ಲೆಗೆ 754 ಮಂದಿ ಬಂದಿದ್ದು, ಇವರಲ್ಲಿ ಶೇ.50 ಕಾರ್ವಿುಕರು. ಉಳಿದವರು ಬಂಧುಗಳ ಮನೆಯಲ್ಲಿ ಉಳಿದವರು ಮತ್ತು ಕಾರಣಾಂತರದಿಂದ ಸಿಲುಕಿಕೊಂಡಿದ್ದವರು. ಭಾನುವಾರ 8 ಬಸ್​ಗಳಲ್ಲಿ 272, ಸೋಮವಾರ 14 ಬಸ್​ಗಳಲ್ಲಿ 352, ಮಂಗಳವಾರ ಸಂಜೆ 4 ಗಂಟೆಯವರೆಗೆ 5 ಬಸ್​ಗಳಲ್ಲಿ 130 ಮಂದಿ ಆಗಮಿಸಿದ್ದಾರೆ. ಅವರನ್ನು ಸ್ಕ್ರೀನಿಂಗ್​ಗೆ ಒಳಪಡಿಸಿ 28 ದಿನಗಳ ಹೋಂ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಿ ಕಳಿಸಲಾಗಿದೆ. ಹೊರರಾಜ್ಯದಿಂದ ಬರಲು ಇಚ್ಛಿಸಿ ಸಲ್ಲಿಕೆಯಾಗಿರುವ 200 ಅರ್ಜಿಗಳಲ್ಲಿ 100 ಪರಿಗಣಿತವಾಗಿದೆ.
ದಾವಣಗೆರೆ
ಜಿಲ್ಲೆಗೆ ಒಟ್ಟು 561 ಮಂದಿ ಮರಳಿ ಬಂದಿದ್ದಾರೆ. 14 ಜನರನ್ನು ಸಾಂಸ್ಥಿಕ, ಉಳಿದೆಲ್ಲರೂ ಹೋಂ ಕ್ವಾರಂಟೈನ್​ನಲ್ಲಿದ್ದಾರೆ.
1.05 ಲಕ್ಷ ಕಾರ್ವಿುಕರು ಊರಿಗೆ
ವಲಸೆ ಕಾರ್ವಿುಕರನ್ನು ಊರಿಗೆ ತಲುಪಿಸುವ ಸಲುವಾಗಿ ಕೆಎಸ್​ಆರ್​ಟಿಸಿ ಶನಿವಾರದಿಂದ ವಿಶೇಷ ಬಸ್ ಸೇವೆ ನೀಡುತ್ತಿದೆ. ಅದರಂತೆ ಕಳೆದ 5 ದಿನಗಳಿಂದ 3,500 ಬಸ್​ಗಳಲ್ಲಿ ತಲಾ 30 ಕಾರ್ವಿುಕರಂತೆ 1.05 ಲಕ್ಷ ಕಾರ್ವಿುಕರನ್ನು ಕೊಂಡೊಯ್ಯಲಾಗಿದೆ. ಅದೇ ರೀತಿ ಹೊರರಾಜ್ಯದ ಕಾರ್ವಿುಕರಿಗಾಗಿ ನೈಋತ್ಯ ರೈಲ್ವೆಯಿಂದ ಶ್ರಮಿಕ್ ವಿಶೇಷ ರೈಲು ಸೇವೆ ನೀಡಲಾಗಿದ್ದು, ಭಾನುವಾರದಿಂದ ಮಂಗಳವಾರದವರೆಗೆ ರಾಜ್ಯದಿಂದ 10,583 ಕಾರ್ವಿುಕರು ತೆರಳಿದ್ದಾರೆ.
VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × four =
Remember me
