ಆನೇಕಲ್:ಇನ್​ಸ್ಟಾಗ್ರಾಂ ಮೂಲಕ ಯುವಕನಿಗೆ ಗಾಳ ಹಾಕಿ ಹನಿಟ್ರ್ಯಾಪ್​​ ಬಲೆಗೆ ಬೀಳಿಸಿ, ಸುಲಿಗೆ ಮಾಡಿದ್ದ ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಯುವತಿಯೊಬ್ಬಳು ಇನ್​ಸ್ಟಾಗ್ರಾಂನಲ್ಲಿ ಶಶಾಂಕ್ ಎಂಬುವವರಿಗೆ ಪದೇ ಪದೆ ಮೆಸೇಜ್​ ಮಾಡುತ್ತಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಆಮಿಷವೊಡ್ಡಿ ಶಶಾಂಕ್​ರನ್ನು ಬನ್ನೇರುಘಟ್ಟ ಸಮೀಪದ ಬಂಡೆಯೊಂದರ ಬಳಿ ಕರೆಸಿಕೊಂಡಿದ್ದಳು. ಇದೇ ವೇಳೆ ಉಳಿದ ಆರೋಪಿಗಳು ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ:ಮಾಡಾಳ್​ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಅಧಿಕಾರಿಗಳ ಡ್ರಿಲ್! ಉತ್ತರಿಸಲು ತಡಬಡಾಯಿಸುತ್ತಿರುವ ಶಾಸಕ

ಒಬ್ಬಂಟಿ ಹುಡುಗಿ ಜತೆ ಏನು ಮಾಡುತ್ತಿದ್ದೀಯ ಎಂದು ಅವಾಜ್ ಹಾಕಿದ ಆರೋಪಿಗಳು ದೊಣ್ಣೆಯಿಂದ ಹಲ್ಲೆ ನಡೆಸಿ, ಶಶಾಂಕ್​ ಬಳಿ ಇದ್ದ ಐಪೋನ್ ಮತ್ತು ಚಿನ್ನಾಭರಣವನ್ನು ಕಳವು ಮಾಡಿದ್ದರು. ವೃತ್ತಿಯಲ್ಲಿ ಪೌರೋಹಿತ್ಯ ಮಾಡುತ್ತಿದ್ದ ಶಶಾಂಕ್, ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ ಅಂತ ಆರೋಪಿಗಳು ಭಾವಿಸಿದ್ದರು. ಆದರೆ, ವಂಚನೆ ಬಗ್ಗೆ ಬನ್ನೇರುಘಟ್ಟ ಪೊಲೀಸರಿಗೆ ಶಶಾಂಕ್​ ದೂರು ನೀಡಿದ್ದರು.
ದೂರು ಆಧರಿಸಿ ತನಿಖೆಗೆ ಇಳಿದ ಬನ್ನೇರುಘಟ್ಟದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರುತೀಕ್ ಅಲಿಯಾಸ್​ ವಿಷ್ಣು, ಮಹಮದ್ ಆಸೀಫ್​, ಯಾಸೀನ್ ಪಾಷಾ, ಸಮೀರ್ ಮತ್ತು ಶಾಹಿದ್ ಅಲಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ನ್ಯಾಯದೇವತೆ: ಹೆಂಡತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆ ಬದುಕಿರುವಾಗ ಗಂಡನಿಗೆ ಹಕ್ಕು ಇರುತ್ತದೆಯೇ?

ಹನಿಟ್ರ್ಯಾಪ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದವಳು ಯುವತಿ ಎನ್ನಲಾಗಿತ್ತು. ಆದರೆ, ಬಂಧಿಸಿದಾಗಲೇ ಆಕೆ ಅಪ್ರಾಪ್ತೆ ಎಂದು ತಿಳಿದುಬಂದಿದೆ. ಆಕೆಯನ್ನು ಬಾಲಾಪರಾಧಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಐಪಿಸಿ 397 ಅಡಿಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಲಾಗಿದೆ.(ದಿಗ್ವಿಜಯ ನ್ಯೂಸ್​)
ಮೋದಿಯ ಫೋಟೋ ಹರಿದ ಕಾಂಗ್ರೆಸ್ ಶಾಸಕ; ದಂಡ ವಿಧಿಸಿದ ನ್ಯಾಯಾಲಯ

ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಬಂಧನ: ಪಟಾಕಿ ಸಿಡಿಸಿ ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ

ಹಾವು ಕಚ್ಚಿದರೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿನಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
