ಬೆಂಗಳೂರು:ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಪೊಲೀಸ್ ವಾದ್ಯ ಮೇಳದ ಗೌರವಕ್ಕೆ ವಿಧಾನ ಸೌಧ ಮಹಾದ್ವಾರದ ಮೆಟ್ಟಿಲು ಬುಧವಾರ ವೇದಿಕೆಯಾಯಿತು. ರಾಜ್ಯೋತ್ಸವ, ಕರ್ನಾಟಕ-50 ಸುವರ್ಣ ಮಹೋತ್ಸವ, ಕರ್ನಾಟಕ ಪೊಲೀಸ್ ಧ್ವಜದ ಸುವರ್ಣ ಸಂಭ್ರಮಕ್ಕೆ ಪೊಲೀಸ್ ಸಮೂಹ ವಾದ್ಯ ಮೇಳ ವೈಭವದ ಸ್ಪರ್ಶ ನೀಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಶಿವರಾಜ ತಂಗಡಗಿ, ಶಾಸಕರು, ಅಧಿಕಾರಿಗಳಾದಿಯಾಗಿ ಗಣ್ಯರು, ಭಾರಿ ಜನಸ್ತೋಮ ಹೃನ್ಮನ ತುಂಬುವ ಕ್ಷಣಗಳಿಗೆ ಸಾಕ್ಷಿಯಾದರು, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ನೇಸರನ ಕಿರಣಗಳಿಗೆ ಹೊನ್ನಿನ ಹೊಳಪು, ಮುಸ್ಸಂಜೆಯ ಚಾಪು ಮೂಡಿಸುವ ಹೊತ್ತಿಗೆ ಅಶ್ವಾರೋಹಿ ದಳದ ಕುರಪುಟಗಳ ಗತ್ತು, ನೋಡುಗರ ಕುತೂಹಲದ ಕಣ್ಣಗಲಿಸಿತ್ತು.ನಾಡಗೀತೆಯ ಹಾಡಿನ ಮುಖೇನ ಪೊಲೀಸ್ ಸಮೂಹ ವಾದ್ಯಮೇಳ ಭೋರ್ಗರೆತದಲ್ಲಿ ಸಾಮಾನ್ಯರಂತೆ ಸಿಎಂ, ಡಿಸಿಎಂ, ಸಚಿವರು ಹಾಗೂ ರಾಜ್ಯೋತ್ಸವ ಮೈಮೆರೆತರು.ವಿಧಾನಸೌಧದ ಆವರಣ ಪ್ರವೇಶಿಸಲು ಸಾಧ್ಯವಾಗದವರು ಹೊರಗೆ ರಸ್ತೆಯುದ್ದಕ್ಕೂ ಸೊಬಗಿನ ದೃಶ್ಯ ಕಣ್ತುಂಬಿಕೊಂಡರು, ತಂಪಿನ ಗಳಿಗೆಯಲ್ಲಿ ಇಂಪಾದ ವಾದ್ಯದ ಅಲೆಯನ್ನು ಕಿವಿತುಂಬಿಕೊಂಡರು.
ಸೂರ್ಯ ನಿಧಾನವಾಗಿ ಮರೆಯಾಗುತ್ತಿದ್ದಂತೆ ವಿದ್ಯುದ್ದೀಪಗಳ ಬೆಳಕಿನ ಚಿತ್ತಾರ, ವರ್ಣರಂಜಿತ ಅಲಂಕಾರ ಮುನ್ನೆಲೆಗೆ ಬಂದು ನೋಡುಗರಿಗೆ ಮತ್ತೊಂದು ಅನಿರ್ವಚನೀಯ ಅನುಭವ ನೀಡಿತು.ಈ ಬಾರಿ ವಿಧಾನಸೌಧ ಪೂರ್ತಿ ವರ್ಣರಂಜಿತ ವಿದ್ಯುದ್ದೀಪಗಳ ಆವರಿಸಿದ್ದಲ್ಲ. ಬದಲಿಗೆ ಕಾರಿಡಾರ್ ರಾಷ್ಟ್ರದ ತ್ರಿವರ್ಣ ಸೂಚಕ, ಮಧ್ಯೆ ನಾಡಿನ ಹಳದಿ-ಕೆಂಪು ಬಣ್ಣ ಬಿಂಬಿಸುವ ದೀಪಗಳು ಬೆಳಗಿದವು.
ಮೇಲ್ಭಾಗದಲ್ಲಿ ಕಣ್ಣುಕೋರೈಸುವ ಪ್ರಕಾಶಮಾನವಾದ ವಿದ್ಯುತ್ ಬಲ್ಬಗಳು, ಪೊಲೀಸ್ ವಾದ್ಯ ಮೇಳದ ಗಾಯನ ತಕ್ಕಂತೆ ಲಾಸ್ಯ ಹಾಗೂ ವಿಧಾನಸೌಧ ಮುಂಬದಿ ತಿರಂಗಾ, ನಾಡ ಬಾವುಟ ಬಿಂಬಿಸುವ ಬೆಳಕಿನಾಟ ಹಿನ್ನೆಲೆಯು ಕನ್ನಡ ಹಬ್ಬದ ಹರ್ಷೋಲ್ಲಾಸ ಇಮ್ಮಡಿಗೊಳಿಸಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
