ಬೆಂಗಳೂರು:ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದ ಬಾಲಕನನ್ನು ಸಮಯ ಪ್ರಜ್ಞೆಯಿಂದ ಉಳಿಸಿದ ಸುಖಿ ವಿ. ಉಪಾಧ್ಯೆ ಹಾಗೂ ಬೀದಿ ನಾಟಕದ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಬಿ.ಆರ್. ಪ್ರತ್ಯಕ್ಷ ಅವರನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಗರದ ಬಾಲಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಬಾಲಕಿಯರನ್ನು ಸನ್ಮಾನಿಸಿ ಪುರಸ್ಕರಿಸಿದರು.
ಬೆಳಗಾವಿ ಜಿಲ್ಲೆಯ ರಾಯಬಾಗದ ಖಾಸಗಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿರುವ ಏಳೂವರೆ ವರ್ಷದ ಸುಖಿ ಬೇಸಿಗೆ ರಜೆಯಲ್ಲಿ ಶಿಖಾರಿಪುರದಲ್ಲಿ ನಡೆಯುತ್ತಿದ್ದ ಯೋಗ ಶಿಬಿರ ಸೇರಿದ್ದಳು. ಶಿಬಿರದಲ್ಲಿ ಸಹಪಾಠಿ ಬಾಲಕನೊಬ್ಬ ವಿದ್ಯುತ್ ಸ್ಪರ್ಶದಿಂದ ಕೆಳಗೆ ಬಿದ್ದಿದ್ದ. ಸಮಯಪ್ರಜ್ಞೆಯಿಂದ ಬಾಲಕನ ಶರ್ಟ್ ಕಾಲರ್ ಹಿಡಿದು ಎಳೆದುಕೊಳ್ಳುವ ಮೂಲಕ ಆತನ ಪ್ರಾಣ ಉಳಿಸಿದ್ದಳು.
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಪ್ರತ್ಯಕ್ಷ ಬೀದಿ ನಾಟಕ (ಏಕಪಾತ್ರಾಭಿನಯ)ದ ಮೂಲಕ ಜನರಲ್ಲಿ ಶೌಚಗೃಹದ ಮಹತ್ವ ಹಾಗೂ ಸ್ವಚ್ಛತೆಯ ಅರಿವು ಮೂಡಿಸಿದ್ದಾಳೆ. ನಾಟಕದಿಂದ ಸಂಗ್ರಹವಾದ ಹಣವನ್ನು ‘ಸ್ವಚ್ಛತಾ ಅಭಿಯಾನ’ಕ್ಕೆ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಸಮರ್ಪಿಸಿ, ಅವರಿಂದ ಉಡುಗೊರೆಯಾಗಿ ವಾಚ್ ಪಡೆದುಕೊಂಡಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − five =
Remember me
