ಮಹದೇವಪುರ: ಕಳೆದ ವರ್ಷ ಆಗಸ್ಟ್​ನಲ್ಲಿ ಬೆಂಗಳೂರಿನ ಹೂಡಿ ಗ್ರಾಮದಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೆ ತಲೆಯ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ ಮಾಡಿದ್ದ ರಾಮಭಕ್ತ ಹೂಡಿ ಮಂಜುನಾಥ್ ಮತ್ತವರ ತಂಡ ಸಂಭ್ರಮದಲ್ಲಿದೆ. ಅದಕ್ಕೆ ಕಾರಣ, ಸರಿಯಾಗಿ ಒಂದು ವರ್ಷದ ನಂತರ ಬುಧವಾರ (ಆ.5) ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುತ್ತಿರುವುದು.
ಅಯೋಧ್ಯೆಯಲ್ಲಿ 500 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮರ ಮಂದಿರ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಹಾಗೂ ಉತ್ತರ ಪ್ರದೇಶದ ಮೂಲಕ 66 ದಿನಗಳಲ್ಲಿ 2,060 ಕಿ.ಮೀ. ಪಾದಯಾತ್ರೆ ಮಾಡಿದ್ದರು ಹೂಡಿ ಮಂಜುನಾಥ್ ಅವರು ಯಾತ್ರೆ ಮುಗಿಸಿದ 18 ದಿನಗಳಲ್ಲಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ಹಿಂದುಗಳ ಪರ ಬಂದಿದ್ದ ತೀರ್ಪು ಕೋಟ್ಯಾನುಕೋಟಿ ಜನರನ್ನು ಸಂತೋಷದಲ್ಲಿ ತೇಲಿಸಿತ್ತು.
ಇದನ್ನೂ ಓದಿ:ಆದಾಯ ತೆರಿಗೆ ಇಲಾಖೆಗೆ ಇನ್ನು ಭೇಟಿಕೊಡಬೇಕಾಗಿಲ್ಲ…
‘ರಾಮಾಯಣ’, ‘ಮಹಾಭಾರತ’ ಮಹಾಕಾವ್ಯ ಗಳನ್ನು ಓದಿದ್ದ ನನಗೆ, ಅಡ್ವಾಣಿಯವರ ಆತ್ಮಚರಿತ್ರೆ ‘ನನ್ನ ದೇಶ, ನನ್ನ ಜೀವನ’ ಕೃತಿ ಓದುತ್ತಿದ್ದಾಗ ಅವರು ರಾಮಮಂದಿರಕ್ಕಾಗಿ ಮಾಡಿದ ಹೋರಾಟ ಮೈನವಿರೇಳಿಸುವಂತೆ ಮಾಡಿತ್ತು. ಶ್ರೀರಾಮ ನನ್ನ ಕನಸಿನಲ್ಲಿ ಬರುತ್ತಿದ್ದರು.|ಹೂಡಿ ಮಂಜುನಾಥ್ಶ್ರೀರಾಮ ಭಕ್ತ
ಪಾದಯಾತ್ರೆ ನಂತರ ಸುಪ್ರೀಂ ತೀರ್ಪ:ರಾಮಭಕ್ತ ಹೂಡಿ ಮಂಜುನಾಥ್ ಕಳೆದ ವರ್ಷ ಆ.16ರಂದು ಪಾದಯಾತ್ರೆ ಆರಂಭಿಸಿದ್ದರು. ಹೂಡಿ ಗ್ರಾಮದಿಂದ ಸಾರ್ವಜನಿಕರ ಸಮ್ಮುಖದಲ್ಲಿ ಸಾಗಿದ ಅವರಿಗೆ ‘ಗುರಿ ತಲುಪುತ್ತೇನೆ ಇಲ್ಲವೋ’ ಎನ್ನುವ ಭಯ ಕಾಡಿತ್ತು. ತಲೆ ಮೇಲೆ ‘ಜೈ ಶ್ರೀರಾಮ್ ಎಂದು ಬರೆದಿದ್ದ ಇಟ್ಟಿಗೆ ಹೊತ್ತು ಸಾಗಿದ ಮಂಜುನಾಥ್ ಮತ್ತವರ ತಂಡ ಕಷ್ಟ- ನಷ್ಟಗಳಿಗೆ ಎದೆಗುಂದದೆ ಮುನ್ನಡೆದಿತ್ತು. ಯಾತ್ರೆ ಅಯೋಧ್ಯೆಗೆ ತಲುಪಿದ್ದು ಅ. 21ರಂದು. ಬೆಂಗಳೂರಿಗೆ ಮರಳಿದ್ದು ಅ. 23ರಂದು. ಇಲ್ಲಿ ಆಗಮಿಸಿದ ಬಳಿಕ ನ. 9ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿತ್ತು.
ಇದನ್ನೂ ಓದಿ:ಅಯೋಧ್ಯೆ ರಾಮನಿಗೆ ಮೀಸೆ ಇರಲಿ ಎಂದ ಹಿಂದುತ್ವ ಪ್ರತಿಪಾದಕ..
ಇಟ್ಟಿಗೆ ಬಳಸಿಕೊಳ್ಳಲು ಮನವಿ ಹೂಡಿ ಮಂಜುನಾಥ್ ಪಾದಯಾತ್ರೆ ವೇಳೆ ಅಯೋಧ್ಯೆವರೆಗೆ ತಲೆ ಮೇಲೆ ಹೊತ್ತು ಸಾಗಿದ್ದ ಇಟ್ಟಿಗೆಯನ್ನು ಶ್ರೀರಾಮ ಜನ್ಮಭೂಮಿ ಅಡಿಗಲ್ಲು ಸಮಾರಂಭದಲ್ಲಿ ಬಳಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇಟ್ಟಿಗೆಯನ್ನು ಶ್ರೀರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್​ಗೆ ನೀಡಲಾಗಿದೆ. ಇದನ್ನು ಬಳಸಿಕೊಂಡರೆ ತಮ್ಮ ಪರಿಶ್ರಮ ಫಲಿಸಿದಂತಾಗುತ್ತದೆ ಎಂಬುದು ಮಂಜುನಾಥ್ ಮತ್ತವರ ತಂಡದ ಹೆಬ್ಬಯಕೆ. ರಾಷ್ಟ್ರಪತಿ ರಾಮನಾಥ ಕೋವಿಂದ, ಕೇಂದ್ರ ಗೃಹಸಚಿವ ಆಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮ ಜನ್ಮಭೂಮಿ ಟ್ರಸ್ಟ್, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗಳಿಗೂ ಪತ್ರದ ಮೂಲಕ ತಮ್ಮ ಇಟ್ಟಿಗೆಯನ್ನು ಬಳಸಿಕೊಳ್ಳುವಂತೆ ಮಂಜುನಾಥ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ಎರಡು ಗಂಟೆ ಕಾಲ ಇರಲಿದ್ದಾರೆ ಪ್ರಧಾನಿ ಮೋದಿ
ಪವಿತ್ರ ಕೆಲಸಕ್ಕೆ ಜತೆಯಾದವರು:ಅಯೋಧ್ಯೆವರೆಗೆ ಪಾದಯಾತ್ರೆ ಮಾಡಬೇಕು ಎಂಬ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ನಂತರ ಹೂಡಿ ಮಂಜುನಾಥ್​ಗೆ ಸಾಥ್ ನೀಡಿದ್ದು ಮಂಜಯ್ಯ ಚಾವಡಿ, ಕೇಬಲ್ ಮಂಜುನಾಥ್, ಕೆ.ಡಿ. ವೆಂಕಟೇಶ್, ಆರ್. ವೇಣು, ಮುನಿಕೃಷ್ಣ, ಆಂಜಿ, ರಕ್ಷಿತ್, ಜಯಮ್ಮ, ಪ್ರೇಮಮ್ಮ, ರಾಜೇಶ್ವರಿ ಅಮ್ಮ, ಚೈತ್ರಾ, ಶೋಭಕ್ಕ ಸಹಕಾರ ನೀಡಿದರು. ನಗರಾಭಿವೃದಿಟಛಿ ಸಚಿವ ಬೈರತಿ ಬಸವರಾಜ್ ಪತ್ನಿ ಪದ್ಮಾವತಿ ಕೂಡ ಒಂದು ದಿನ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ರಾಜಪಾಳ್ಯ ಮತ್ತು ತಿಗಳರಪಾಳ್ಯದ ಗ್ರಾಮಸ್ಥರು ಮತ್ತು ಹರಿಕೃಷ್ಣ ಯಾದವ್, ಶ್ರೀನಿವಾಸರಾಜು ಅವರ ಸಹಕಾರವನ್ನೂ ಮಂಜುನಾಥ್ ಸದಾ ಸ್ಮರಿಸುತ್ತಾರೆ. ಹೂಡಿಯ ರಾಮಭಕ್ತ ಮಂಜುನಾಥ್ ಅವರ ಸಂಪರ್ಕ ಸಂಖ್ಯೆ: 81239 99565.
ಶ್ರೀರಾಮ ಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಹಬ್ಬವಾಗಲಿ ಎಂದ ಕಾಂಗ್ರೆಸ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
