ಮದುವೆಯಾದಮಹಿಳೆಯರು ಮೊದಲೆಲ್ಲ ಹಿರಿಯರ ಕಾಲಿಗೆ ನಮಸ್ಕಾರ ಮಾಡಿದಾಗ ‘ಹತ್ತಾರು ಮಕ್ಕಳನ್ನು ಹೆತ್ತು ಸುಖವಾಗಿರು’ ಎಂದು ಆಶೀರ್ವಾದ ಮಾಡುತ್ತಿದ್ದರು. ‘ಮಕ್ಕಳಿರಲವ್ವ ಮನೆತುಂಬ’ ಎಂದು ನಮ್ಮ ಜನಪದರು ಹೇಳುತ್ತಿದ್ದರು. ಆದರೆ, ಆಧುನಿಕ ಯುಗ ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತಗೊಂಡಿದೆ. ಅದರಲ್ಲೂ ಅನೇಕ ಜನರಿಗೆ ಒಂದು ಮಗುವನ್ನು ಪಡೆಯುವುದಕ್ಕೂ ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಹತ್ತಾರು ಕಾರಣಗಳು ಇರಬಹುದು. ಇಂತಹ ಯಾವುದೇ ಕಾರಣಗಳನ್ನು ಬದಿಗೆ ಸರಿಸಿ ಮಕ್ಕಳಾಗದ ದಂಪತಿ ಮಗು ಪಡೆಯಬಹುದು, ಅದು ಕೂಡ ಚಿಕಿತ್ಸೆ ಮೂಲಕ ಎಂಬುದನ್ನು ಐವಿಎಫ್ ತೋರಿಸಿಕೊಟ್ಟಿದೆ. ಕೃತಕ ಗರ್ಭಧಾರಣೆ. ಸುಧಾರಿತ ವೈದ್ಯಕೀಯ ತಂತ್ರಜ್ಞಾನದ ಮೂಲಕ, ಸಂತಾನವಿಲ್ಲದ ದಂಪತಿ ಸುಲಭವಾಗಿ ಮಗುವಿಗೆ ಜನ್ಮ ನೀಡಬಹುದಾಗಿದೆ. ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ವಿಶ್ವ ಐವಿಎಫ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಜ್ಞ ವೈದ್ಯರಾದ ಡಾ. ಗೀತಾ ಉತ್ತೂರ ಅವರು ಕೇಳುಗರ ಪ್ರಶ್ನೆಗಳಿಗೆ ಪರಿಹಾರ ನೀಡಿದ್ದಾರೆ. ರಾಜ್ಯದ ಮೂಲೆಮೂಲೆಗಳಿಂದ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡು ಸಮಾಧಾನದ ಉತ್ತರ ಪಡೆದಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಆಧುನಿಕ ಜೀವನ ಶೈಲಿ, ಒತ್ತಡ ಮುಂತಾದ ಕಾರಣಗಳಿಂದಾಗಿ ಅನೇಕ ದಂಪತಿಗಳು ಮಕ್ಕಳಿಲ್ಲದೇ ಪರದಾಡುತ್ತಿದ್ದಾರೆ. ಹತ್ತಾರು ವರ್ಷ ಕಳೆದರೂ ಮಡಿಲಲ್ಲಿ ಒಂದು ಮಗು ಇಲ್ಲ ಎಂಬ ಕೊರಗು ಅನೇಕರನ್ನು ಕಾಡುತ್ತಿವೆ. ಮಡಿಲಲ್ಲಿ ತಮ್ಮದೇ ಮಗು ಹೊಂದಬೇಕೆಂಬ ಬಯಕೆ ಉಳ್ಳ ದಂಪತಿಗೆ ವೈದ್ಯಕೀಯ ಕ್ಷೇತ್ರ ಪರಿಹಾರ ನೀಡಿದೆ ಎಂಬುದನ್ನು ವಿಶ್ವ ಐವಿಎಫ್ ದಿನಾಚರಣೆ ಅಂಗವಾಗಿ ಕನ್ನಡದ ನಂಬರ್ ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮ ಮತ್ತೊಮ್ಮೆ ಸಾಬೀತುಪಡಿಸಿತು. ಧಾರವಾಡದ ನರ್ವೋದಯ ಸಂತಾನ ಸಾಫಲ್ಯ ಕೇಂದ್ರದ ತಜ್ಞ ವೈದ್ಯರೊಂದಿಗೆ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮವು ಸಂತಾನ ಬಯಸಿದ ಸಾವಿರಾರು ಜನರಿಗೆ ಹೊಸ ಭರವಸೆಯ ಬೆಳಕು ಮೂಡಿಸಿತು.
ಪ್ರಸೂತಿ, ಸ್ತ್ರೀರೋಗ ಮತ್ತು ಐವಿಎಫ್ ತಜ್ಞರಾದ ಡಾ. ಗೀತಾ ಭರತ್ (ಉತ್ತೂರ) ಹಾಗೂ ಪರಿಣತ ಭ್ರೂಣಶಾಸ್ತ್ರಜ್ಞರಾದ ಡಾ. ಗಾಯತ್ರಿ ಉದಗಟ್ಟಿ (ಉತ್ತೂರ) ಅವರು ನಡೆಸಿಕೊಟ್ಟ ಫೋನ್ ಇನ್ ಕಾರ್ಯಕ್ರಮ ರಾಜ್ಯದ ವಿವಿಧ ಕಡೆಗಳಿಂದ ಕರೆ ಮಾಡಿದ ಜನರಿಗೆ ಹೊಸ ಆಸೆ ಚಿಗುರುವಂತೆ ಮಾಡಿತು. ಸಂತಾನಕ್ಕಾಗಿ ಹಂಬಲಿಸುತ್ತಿರುವ ದಂಪತಿ ಹಾಗೂ ಅವರ ಕುಟುಂಬದ ಸದಸ್ಯರು ಅನೇಕರು ಫೋನ್ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡು ಅತ್ಯಂತ ಸೂಕ್ತ ಪರಿಹಾರಗಳನ್ನು ಕಂಡುಕೊಂಡರು. ಇನ್ ವಿಟ್ರೋ ಫರ್ಟಿಲೈಜೇಶನ್ (ಐವಿಎಫ್) ಪ್ರಣಾಳ ಶಿಶು ಚಿಕಿತ್ಸೆ ಯಾರು ಮಾಡಿಸಿಕೊಳ್ಳಬಹುದು, ಐವಿಎಫ್ ಯಶಸ್ಸಿನ ಪ್ರಮಾಣ. ಹೊಸ ಎಆರ್‌ಟಿ ಕಾಯಿದೆ, ಬಾಡಿಗೆ ತಾಯ್ತನ, ಫಲವತ್ತತೆ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಿದರು. ಮಾಹಿತಿ ಪಡೆದ ಅನೇಕರಿಗೆ ತಾವೂ ಸಂತಾನ ಹೊಂದಬಹುದೆಂಬ ಆಶಯ ಮೂಡಿತು. ವೈದ್ಯಕೀಯ ಕ್ಷೇತ್ರ ಸಾಕಷ್ಟು ಬೆಳೆದಿದೆ. ಅದರಲ್ಲೂ ಇಂದಿನ ಧಾವಂತದ ಬದುಕಿನಲ್ಲಿ ಮಕ್ಕಳಾಗದೇ ಇರುವುದಕ್ಕೆ ಹತ್ತಾರು ಕಾರಣಗಳಿರುತ್ತವೆ. ಹಾಗಾಗಿ ಪ್ರಣಾಳರಿತು ಇದಕ್ಕೆ ಸೂಕ್ತ ಪರಿಹಾರ, ಪುರುಷರು 55,50 ವರ್ಷ ಆಗುವುದರೊಳಗೆ ಐವಿಎಫ್ ಗೆ ಒಳಪಮವುದು ಅಗತ್ಯ. ಅದರಲ್ಲೂ 35 ವರ್ಷದ ನಂತರ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಹಾಗೂ ಗುಣಮಟ್ಟ ಕ್ಷೀಣಿಸುವುದರಿಂದ ಅಷ್ಟರೊಳಗೆ ಮಗು ಪಡೆಯುವುದು ಬಹಳ ಒಳ್ಳೆಯದು ಎಂದು ಸಲಹೆ ನೀಡಿದರು. ತಂತ್ರಜ್ಞಾನ ಬಹಳಷ್ಟು ಮುಂದುವರಿದಿರುವುದರಿಂದ ಯಾವುದಕ್ಕೂ ಅಂಜದೆ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆದು ಮಕ್ಕಳನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶ ಇದೆ ಎಂದು ಡಾ. ಗೀತಾ ಉತ್ತೂರ ಅಭಯ ನೀಡಿದರು. ಮಹಿಳೆಯ ಜೀವನದ ಎಲ್ಲ ಹಂತಗಳಲ್ಲಿ ಆರೋಗ್ಯ ಸಂಬಂಧಿ ಅವಶ್ಯತತೆಗಳನ್ನು ಒಂದೇ ಸೂರಿನಡಿ ಲಭ್ಯ ಮಾಡುವ ಧೈಯದೊಂದಿಗೆ ಸರ್ವೋದಯ ಮಹಿಳಾ ಆರೋಗ್ಯ ಕೇಂದ್ರದಲ್ಲಿ ಹಲವು ವಿಶೇಷ ವಿಭಾಗಗಳನ್ನು ಆರಂಭಿಸಿದ್ದಾರೆ.
ಎಆರ್‌ಟಿ ಕಾಯ್ದೆ 2021ರ ಪ್ರಮುಖ ಅಂಶಗಳುಕಾನೂನುಬಾಹಿರ ಮತ್ತು ಅನಿಯಂತ್ರಿತ ಎಆರ್‌ಟಿ ಚಿಕಿತ್ಸಾಲಯಗಳ ನಿಯಂತ್ರಣದ ಉದ್ದೇಶದಿಂದ ರೂಪಿತಗೊಂಡ ಈ ಕಾಯ್ದೆಯಿಂದ ಚಿಕಿತ್ಸಾ ವಿಧಾನದಲ್ಲಿ ಅನೇಕ ಬದಲಾವಣೆಗಳಾಗಿವೆ. ಪ್ರತಿ ಎಆರ್‌ಟಿ ಕ್ಲಿನಿಕ್ ಮತ್ತು ಬಾಡಿಗೆ ತಾಯ್ತನ ಕೇಂದ್ರಗಳು ರಾಷ್ಟ್ರೀಯ ನೋಂದಣಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಕಾಯ್ದೆಯ ಐವಿಎಫ್​ ಚಿಕಿತ್ಸಾಲಯಗಳು, ದಂಪತಿ, ಅಂಡಾಣು ದಾನ ಮತ್ತು ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿ ನಿಯಮಗಳನ್ನು ರೂಪಿಸಿದೆ. ಅದರ ಅನ್ವಯ ಮಹಿಳೆಗೆ 26ರಿಂದ 50 ವರ್ಷ ಹಾಗೂ ಪುರುಷನಿಗೆ 26ರಿಂದ 50 ವರ್ಷ ನಿಗದಿಪಡಿಸಲಾಗಿದೆ ಮಹಿಳೆ ಜೀವನಾವಧಿಯಲ್ಲಿ ಒಂದೇ ಬಾರಿ ಅಂಡಾಣು ದಾನ ಮಾಡಬಹುದು. (ಕಾಯ್ದೆ ಜಾರಿಗಿಂತ ಮೊದಲು ಹಲವು ಬಾರಿ ದಾನ ಮಾಡಬಹುದಾಗಿತ್ತು.) ವಾಣಿಜ್ಯ (ಕಮರ್ಷಿಯಲ್) ಬಾಡಿಗೆ ತಾಯ್ತನವು ಈ ಕಾನೂನಿನನ್ವಯ ನಿಷೇಧವಾಗಿದೆ. ಕೇವಲ ಪರಹಿತ ಚಿಂತನೆಯ (Altruistic) ಬಾಡಿಗೆ ತಾಯ್ತನ ಮಾತ್ರ ಕಾನೂನುಬದ್ದವಾಗಿದೆ.
ಮಗು ಆಗದಿರಲು ಕಾರಣಗಳುಇಂದಿನ ಒತ್ತಡದ ಜೀವನ, ದಂಪತಿಗಳಿಬ್ಬರ ಜೀವನ ಶೈಲಿ, ಸ್ಪೀಪ್ ಸೈಕಲ್ ಬದಲಾಗಿರುವುದು, ದಂಪತಿ ಹೆಚ್ಚು ಒಟ್ಟಿಗೆ ಇರದೇ ಇರುವುದು. ಮಹಿಳೆಯರಲ್ಲಿ ಟ್ಯೂಬ್ ಬ್ಲಾಕ್, ಪಿಸಿಒಡಿ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಂದ ಮಕ್ಕಳು ಆಗುವುದಿಲ್ಲ. ತಜ್ಞ ವೈದ್ಯರ ಬಳಿ ಬಂದರೆ ಇದಕ್ಕೆ ಸರಿಯಾದ ಕಾರಣ ತಿಳಿದು ಚಿಕಿತ್ಸೆ ನೀಡಬಹುದು. ತಡವಾಗಿ ಮದುವೆಯಾದರೂ 35 ವರ್ಷದೊಳಗೆ ಮಹಿಳೆಯರು ಬೇಕಿದ್ದರೆ ತಮ್ಮ ಆರೋಗ್ಯಕರ ಅಂಡಾಣು ಕಾದಿಡಬಹುದು. ಅಂತಹ ಅವಕಾಶವನ್ನು ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಪ್ರತಿಯೊಂದು ಸಮಸ್ಯೆಗೂ ಇಲ್ಲಿ ಚಿಕಿತ್ಸೆ ಇದೆ. ಹಾಗಾಗಿ ಮಕ್ಕಳಿಲ್ಲದವರು ಆತಂಕ ಪಡುವುದು ಬೇಡ ಎಂಬುದು ವೈದ್ಯರ ಅಭಿಪ್ರಾಯ.
ನಿಕಟ ಆರೋಗ್ಯ ಮತ್ತು ಸ್ತ್ರೀರೋಗ ಸೌಂದರ್ಯ ಶಾಸ್ತ್ರ ವಿಭಾಗ( ಇಂಟಿಮೇಟ್ ಹೆಲ್ತ್ ಹಾಗೂ ಕಾಸ್ಟೆಟಿಕ್ ಗೈನಾಕಾಲಜಿ ಕ್ಲಿನಿಕ್) ಮಹಿಳೆಯರ ಲೈಂಗಿಕ ಸಮಸ್ಯೆಗಳು, ಅನಿಯಂತ್ರಿತ ಮೂತ್ರ ವಿಸರ್ಜನೆಗೆ ಬೇಸರ ಚಿಕಿತ್ಸೆ. ಯೋನಿಯ ಪುನರ್ಯೌವನಗೊಳಿಸುವಿಕೆ. ಲಿಪೊಸಕ್ಷನ್ ಮತ್ತು ಇತರ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ,
ಬಾಡಿಗೆ ತಾಯಿ ಚಿಕಿತ್ಸೆ, ನಿಯಂತ್ರಣ ಕಾನೂನುಮಹಿಳೆಗೆ ಗರ್ಭಕೋಶದ ತೊಂದರೆ ಇದ್ದಾಗ, ತಾನೇ ಗರ್ಭಧರಿಸಲು ಸಾಧ್ಯವಾಗದಿದ್ದಾಗ, ಅಥವಾ ಗರ್ಭ ಧರಿಸುವುದರಿಂದ ವೈದ್ಯಕೀಯ ಸಮಸ್ಯೆಗಳಿಂದಾಗಿ ಜೀವಕ್ಕೆ ಅಪಾಯ ಇದ್ದಾಗ ಆ ದಂಪತಿ ಬಾಡಿಗೆ ತಾಯಿ ಚಿಕಿತ್ಸೆಯ ಮೊರೆ ಹೋಗಬಹುದು. 2022ರ ಬಾಡಿಗೆ ತಾಯಿ ನಿಯಂತ್ರಣ ಕಾಯ್ದೆಯ ಅನ್ವಯ ವಾಣಿಜ್ಯ ಬಾಡಿಗೆ ತಾಯಿ ಚಿಕಿತ್ಸೆಯನ್ನು ನಿಷೇಧಿಸಲಾಗಿದ್ದು, ಪರ ಹಿತ ಚಿಂತನೆಯ ಬಾಡಿಗೆ ತಾಯಿ ಚಿಕಿತ್ಸೆಗೆ ಮಾತ್ರ ಅವಕಾಶವಿದೆ. ದಂಪತಿ ಸೂಕ್ತ ಅಧಿಕಾರಿ ಹಾಗೂ ಸಮಿತಿಯಿಂದ ಪರವಾನಗಿ ಪಡೆದು ನೋಂದಾಯಿತ ಚಿಕಿತ್ಸಾ ಕೇಂದ್ರದಲ್ಲಿ ಬಾಡಿಗೆ ತಾಯಿ ಚಿಕಿತ್ಸೆ ಪಡೆಯಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಸರ್ವೋದಯ ಸಂತಾನ ಸಾಫಲ್ಯ ಕೇಂದ್ರವು ಬಾಡಿಗೆ ತಾಯಿ ಚಿಕಿತ್ಸೆಗೆ ನೋಂದಾಯಿತ ಕೇಂದ್ರವಾಗಿದೆ.
‘ಮಹಿಳೆ ಯಾವ ವಯಸ್ಸಿನಲ್ಲಿ ಅಂಡಾಣು ದಾನ ಮಾಡಬಹುದು?’ ಎಂಬ ಮಹಿಳೆಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಡಾ. ಗೀತಾ ಭರತ್ ಅವರು ರಕ್ತದಾನದಂತೆ ಅಂಡಾಣು ದಾನ ಕೂಡ ಪುಣ್ಯದ ಕೆಲಸ. ಒಬ್ಬ ಆರೋಗ್ಯವಂತ ಮಹಿಳೆ (ದಾನಿ) ಇನ್ನೊಬ್ಬ ಮಹಿಳೆಗೆ ದಾನವಾಗಿ ಕೊಟ್ಟು, ಐವಿಎಫ್.ಮುಖಾಂತರ ಮಹಿಳೆಗೆ ಸಂತಾನದ ಖುಷಿ ಕೊಟ್ಟು ತಾಯಿಯಾಗುವ ಕನಸು ನನಸು ಮಾಡಲು ಸಾಧ್ಯ. 1 ಅಥವಾ 2 ಮಕ್ಕಳಾಗಿರುವ 21ರಿಂದ 30 ವರ್ಷದೊಳಗಿನ ಆರೋಗ್ಯವಂತ ಮಹಿಳೆ ಅಂಡಾಣು ದಾನ ಮಾಡಿದರೆ ಉತ್ತಮ ಫಲಿತಾಂಶ ಸಾಧ್ಯ. 35 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಅಂಡಾಣುಗಳ ಸಂಖ್ಯೆ ಹಾಗೂ ಗುಣಮಟ್ಟ ತೀರ ಕಡಿಮೆ ಇರುತ್ತದೆ. ಅಂಥವರು ಸಂತಾನಹೀನರಾಗಿದ್ದರೆ ಅಂಡಾಣುಗಳನ್ನು ದಾನ ರೂಪದಲ್ಲಿ ಪಡೆಯುವುದು ಸೂಕ್ತ. ಯಾವ ಮಹಿಳೆಗೆ ತನ್ನ ಸ್ವಂತ ಅಂಡಾಣುಗಳಿಂದ ಗರ್ಭ ಧರಿಸಲು ಸಾಧ್ಯವಿಲ್ಲವೋ, ಉದಾಹರಣೆಗೆ ಅಂಡಾಶಯಗಳ ಬೆಳವಣಿಗೆ ಇಲ್ಲದಿರುವುದು, ಋತುಬಂಧದ ಅಥವಾ ಅವಧಿಪೂರ್ವ ಋತುಬಂಧದಿಂದ ತೊಂದರೆಗೆ ಈಡಾದವರು, ಅನುವಂಶಿಕ ರೋಗ ಪತ್ತೆಯಾಗಿ ತಮ್ಮ ಮಕ್ಕಳಿಗೂ ಅದು ಬರದಂತೆ ತಡೆಯಬೇಕೆನ್ನುವವರು ಅಂಡಾಣು ದಾನ ಸ್ವೀಕರಿಸಲು ಅರ್ಹರು ಎಂದು ಡಾ. ವಾಸು ಮಾಹಿತಿ ನೀಡಿದರು.
ಎಂಡೋಸ್ಕೋಪಿ ವಿಭಾಗ:ಮಹಿಳೆಯರಲ್ಲಿ ಅವಶ್ಯವಿರುವ ಅಂಡಾಶಯ ಮತ್ತು ಗರ್ಭಕೋಶದ ಎಲ್ಲ ಶಸ್ತ್ರ ಚಿಕಿತ್ಸೆಗಳನ್ನು ಉದರದರ್ಶಕದ ಮುಖಾಂತರ ಮಾಡಲಾಗುವುದು.
ಐವಿಎಫ್​ ಚಿಕಿತ್ಸೆಯಡಿ 126 ಮಕ್ಕಳು ಜನನ:ಸರ್ವೋದಯ ಈವರೆಗೆ ಐವಿಎಫ್ ಆಸ್ಪತ್ರೆಯ ತಜ್ಞ ವೈದ್ಯರಿಂದ ಚಿಕಿತ್ಸೆಯಡಿ 126 ಮಕ್ಕಳು ಜನಿಸಿವೆ. ಸದ್ಯ ಸುಮಾರು ಜನ ಮಹಿಳೆಯರು 80 ಕ್ಕೂ ಹೆಚ್ಚು ಗರ್ಭಾವಸ್ಥೆಯ ವಿವಿಧ ಹಂತದಲ್ಲಿದ್ದಾರೆ.ಸಂತಾನಕ್ಕಾಗಿ ಹಂಬಲಿಸುತ್ತಿದ್ದ ದಂಪತಿಯ ಮುಖದಲ್ಲಿ ಮಂದಹಾಸ ಮೂಡಿದೆ.
ತಜ್ಞ ವೈದ್ಯ ಸಹೋದರಿಯರುಸರ್ವೋದಯ ಆಸ್ಪತ್ರೆಯು ತಜ್ಞ ವೈದ್ಯರ ತಂಡವನ್ನು ಒಳಗೊಂಡಿದೆ. ಸಂಸ್ಥಾಪಕರಾದ ಡಾ. ಗೀತಾ ಭರತ್ (ಉತ್ತೂರ) ಅವರು ಮೂಲತಃ ರನ್ನನಗರಿ ಮುಧೋಳದವರು ಎಸ್ಸೆಸ್ಸೆಲ್ಸಿಯನ್ನು ಕನ್ನಡ ಮಾಧ್ಯಮದಲ್ಲಿ ಓದಿ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದವರು ನಂತರ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯು ವಿಜ್ಞಾನ ತೇರ್ಗಡೆಯಾದರು. ಬಳಿಕ ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ ನಲ್ಲಿ ಎಂಬಿಬಿಎಸ್ ಮತ್ತು ಎಂ.ಎಸ್. (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ಸ್ನಾತಕೋತ್ತರ ಪದವಿ ಪಡೆದರು. ಪ್ರತಿಷ್ಠಿತ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೈದ್ಯಕೀಯ ಸೇವೆ ಆರಂಭಿಸಿದ ಇವರು, ಅಲ್ಲಿ ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅನುಭವಿ. ಅನಂತರ 15 ವರ್ಷಗಳ ಕಾಲ ಧಾರವಾಡದಲ್ಲಿ ಪ್ರಸೂತಿ, ಸ್ತ್ರೀರೋಗ ತಜ್ಞರಾಗಿ ವೈದ್ಯಕೀಯ ಸೇವೆ నెల్లిసిద్దార. ರಾಜೀವ್​ ಗಾಂಧಿ ವಿಶ್ವವಿದ್ಯಾಲಯದಿಂದ ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದ ಹಿರಿಮೆ ಡಾ. ಗೀತಾ ಅವರದು. ಅಲ್ಲದೆ, 2008ರಲ್ಲಿ ಲಂಡನ್‌‌ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್​ ಅಬ್ಸ್ಟ್ರಿಯನ್​ ಅಂಡ್​ ಗೈನಕಾಲಜಿಸ್ಟ್​ obstetricians & gynecologists (FRCOG) ಸದಸ್ಯತ್ವ ಮತ್ತು ಫೆಲೋಶಿಪ್ ಪಡೆದ ಕೆಲವೇ ಕೆಲವು ಉತ್ತರ ಕರ್ನಾಟಕದ ವೈದ್ಯರಲ್ಲಿ ಡಾ.ಗೀತಾ ಒಬ್ಬರು. ಇವರು ಕೇರಳ, ಸಿಂಗಪುರ ಮತ್ತು ಜರ್ಮನಿಯಲ್ಲಿ ಪ್ರಣಾಳಶಿಶು ಚಿಕಿತ್ಸೆಯಲ್ಲಿ ತರಬೇತಿ ಪಡೆದಿದ್ದಾರೆ. ತಮ್ಮ ದಶಕದ ಅನುಭವವನ್ನು ಕ್ರೋಡೀಕರಿಸಿ 2014ರಲ್ಲಿ ಧಾರವಾಡದಲ್ಲಿ ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಸಂತಾನಹೀನತೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದ್ದಾರೆ. 2019ರಲ್ಲಿ ಗಿರಿನಗರದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಅತ್ಯಾಧುನಿಕ, ವಿಶ್ವ ದರ್ಜೆಯ ಪಣಾಳಶಿಶು ಚಿಕಿತ್ಸಾ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಆಗಿದ್ದಾರೆ.
ಡಾ.ಗೀತಾ ಉತ್ತೂರ ಸಹೋದರಿ ಡಾ.ಗಾಯತ್ರಿ ಎ. ಉದಗಟ್ಟಿ (ಉತ್ತೂರ) ಅವರು ವಿಜಯಪುರದ ಅಲ್​ ಅಮೀನ್​ ಕಾಲೇಜಿನಲ್ಲಿ ಎಂಬಿಬಿಎಸ್​ ಪದವಿ ತೇರ್ಗಡೆಯಾಗಿದ್ದಾರೆ. ಚೆನ್ನೈನ ಚೆಟ್ಟಿನಾಡ ವಿಶ್ವವಿದ್ಯಾಲಯದಲ್ಲಿ ಭ್ರೂಣಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ್ದಾರೆ. ಬೆಂಗಳೂರಿನ ಗುಣಶೀಲ ಐವಿಎಫ್ ಸೆಂಟರ್‌ನಲ್ಲಿ ಸುದೀರ್ಘ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 30ಕ್ಕೂ ಹೆಚ್ಚು ಭ್ರೂಣತಾಸ್ತ್ರಜ್ಞರಿಗೆ ತರಬೇತಿ ನೀಡಿದ ಹಿರಿಮೆ ಡಾ. ಗಾಯತ್ರಿ ಅವರದು. ಭ್ರೂಣಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿದ್ದಲ್ಲದೆ, ಇತ್ತೀಚಿನ ಬೆಳವಣಿಗೆಗಳಾದ ಭ್ರೂಣಲಯಾಪ್ರಿ, ಎಂಬ್ರಿಯೋಸ್ಕೋಪ್, ಪ್ರಿಜಂಪ್ಲಾಂಟೇಶನ್ ಜೆನೆಟಿಕ್ ತಯಗೋಸಿಸ್‌ನಲ್ಲಿ (ಪಿಟಿಡಿ) ಪರಿಣತಿಯನ್ನು ಪಡೆದಿದ್ದಾರೆ. ರಾಷ್ಟ್ರೀಯ ಅಂಡಾಶಯ ಭ್ರೂಣಶಾಸ್ತ್ರಜ್ಞರ ಸಮ್ಮೇಳನಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ ಡಾ. ಗಾಯತ್ರಿ ಅವರಿಗೆ ಸಲ್ಲುತ್ತದೆ. ಇವರು ಪ್ರಸ್ತುತ ಸರ್ವೋದಯ ಮಹಿಳಾ ಆಸ್ಪತ್ರೆ ಹಾಗೂ ಸಂತಾನ ಸಾಫಲ್ಯ ಕೇಂದ್ರ ಸಂತಾನಹೀನತೆ ಚಿಕಿತ್ಸೆ (ಐವಿಎಫ್) ಹಾಗೂ ಸಂಶೋಧನಾ ಕೇಂದ್ರದ ಹಿರಿಯ ಭ್ರೂಣಶಾಸ್ತ್ರಜ್ಞೆ ಹಾಗೂ ಪ್ರಯೋಗಾಲಯದ ನಿರ್ದೇಶಕರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂತಾನ ಸಾಫಲ್ಯಕ್ಕೆ ಸರ್ವೋದಯವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ನಗರಗಳಲ್ಲಿ ಐವಿಎಫ್ ಸೆಂಟರ್‌ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲಿ ಸರ್ವೋದಯ ಆಸ್ಪತೆಯೇ ಏಕೆ ಎಂಬ ಪ್ರಶ್ನೆ ಸಹಜ. ಇಲ್ಲಿನ ಅತ್ಯಾಧುನಿಕ ಸೌಲಭ್ಯಗಳು, ತಬ್ದ ವೈದ್ಯರ ತಂಡ ಇದಕ್ಕೆ ಉತ್ತರವಾಗಿದೆ. ಆಸ್ಪತ್ರೆಯು ಆಧುನಿಕ ತಂತ್ರಜ್ಞಾನವುಳ್ಳ ಅಲ್ಲಾಮಾಡರ್ನ್ ಲ್ಯಾಬ್ ಹೊಂದಿದೆ. ನೈತಿಕ ಮತ್ತು ಪಾರದರ್ಶಕ ವೈದ್ಯಕೀಯ ಸೇವೆ ಇಲ್ಲ ಲಭ್ಯ. ಅತ್ಯುತ್ತಮ ಫಲಿತಾಂಶ, ಪರ್ಯಾಯ ಆಯುಷ್ ಔಷದೋಪಚಾರ, ಬೇರೆ ಜಿಲ್ಲೆ- ರಾಜ್ಯಗಳಿಂದ ಬಂದವರಿಗೆ ಕೈಗೆಟುವ ದರದಲ್ಲಿ ವಸತಿ ಸೌಲಭ್ಯ ಬಡ, ಮಧ್ಯಮ ಹಾಗೂ ಎಲ್ಲ ವರ್ಗಗಳ ಜನರಿಗೆ ಕೈಗೆಟುವ ದರದಲ್ಲಿ ಚಿಕಿತ್ಸೆ, ಒತ್ತಡರಹಿತ ಪರಿಸರದಲ್ಲಿ ಯೋಗ, ತಜ್ಞರಿಂದ ಅಪ್ಪ ಸಮಾಲೋಚನೆ ಇಲ್ಲಿ ಲಭ್ಯ.
ವಿಶ್ವ ಐವಿಎಫ್ ದಿನಾಚರಣೆಐವಿಎಫ್ ಪ್ರಣಾಳ ಶಿಶು ಚಿಕಿತ್ಸಾ ವಿಧಾನ 21ನೇ ಶತಮಾನದ ಅತ್ಯದ್ಭುತ ಸಂಶೋಧನೆಗಳಲ್ಲೊಂದು. ಇದು ದಂಪತಿಯ ಸಂತಾನಹೀನತೆಯ ಕ್ಲಿಷ್ಟಕರ ಸಮಸ್ಯೆಗಳಿಗೆ ವರದಾನವಾಗಿ ಪರಿಣಮಿಸಿದೆ. 1978ರ ಜು. 25ರಂದು ವಿಶ್ವದ ಮೊದಲ ಪ್ರಣಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ ದಿನ ಆಕೆ ಜನಿಸಿದ 67 ದಿನಗಳ ಅಂತರದಲ್ಲಿ ಅಂದರೆ 1978ರ ಅ.3ರಂದು ಭಾರತದಲ್ಲಿ ‘ದುರ್ಗಾ’ (ಕನುಪ್ರಿಯಾ ಆಗರವಾಲ್) ಅವರ ಜನನವಾಯಿತು. ಭಾರತದ ಪ್ರಥಮ ಹಾಗೂ ಜಗತ್ತಿನ 2ನೇ ಪ್ರಣಾಳ ಶಿಶು ದುರ್ಗಾಳ ಸೃಷ್ಟಿ ಕೋಲ್ಕತ್ತಾದ ಡಾ.ಸುಭಾಷ್ ಮುಖ್ಯೋಪಾಧ್ಯಾಯ ಅವರಿಗೆ ಸಲ್ಲಬೇಕು. ಡಾ. ಸುಭಾಷ್ ಅವರ ಈ ಕ್ರಾಂತಿಕಾರಕ ಸಂಶೋಧನೆಯನ್ನು ಮೆಟ್ಟಿ ಪ್ರೋತ್ಸಾಹಿಸುವ ಬದಲು ವಿರೋಧ ವ್ಯಕ್ತಪಡಿಸಿ ಸಂಶೋಧನೆಯನ್ನು ಬಹಿರಂಗಗೊಳಿಸದಂತೆ ಅಂದಿನ ಪಶ್ಚಿಮ ಬಂಗಾಳ ಸರ್ಕಾರ ಕಡಿವಾಣ ಹಾಕಿತ್ತು. ಇದರಿಂದ ಹತಾಶರಾದ ಡಾ. ಸುಭಾಷ 1961ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಭಾರತ ದೇಶದ ಅತಿ ದೊಡ್ಡ ದುರಂತ. ಇಲ್ಲದಿದ್ದರೆ ಈ ಸಂಶೋಧನೆಗೆ ಸಿಕ್ಕ ಮೊಬೆಲ್ ಪಾರಿತೋಷಕ ಭಾರತಕ್ಕೆ ದಕ್ಕಬೇಕಿತ್ತು.
ಜಲಪ್ರಸವ ಕೇಂದ್ರ• ನೈಸರ್ಗಿಕ ಹೆರಿಗೆ ಹಾಗೂ ಜಲಪ್ರಸವ ಕೇಂದ್ರ (ನ್ಯಾಚರಲ್ ಬರ್ತ್- ವಾಟರ್ ಬರ್ತ್). ಅಂದರೆ ಔಷಧಿ ಇಲ್ಲದ ಸಹಜ ಪ್ರಸವ ಹಾಗೂ ನೀರಿನಲ್ಲಿ ಶಿಶು ಜನನಕ್ಕೆ ಅವಕಾಶ.• ದಂಪತಿಗೆ ಶಿಶು ಜನನದ ತರಗತಿಗಳು• ಆಯುರ್ವೇದಿಯ ಗರ್ಭಸಂಸ್ಕಾರ ಮತ್ತು ಸಮರ್ಪಿತ ಸೂಲಗಿತ್ತಿ (ಮಿಡ್ ವೈಫರಿ) ಅರೈಕೆ ನೀಡಲಾಗುತ್ತದೆ. ಅಂದರೆ ದಂಪತಿಯು ಶಿಶು ಜನನದ ಅಪೂರ್ವ ಅನುಭವ ಪಡೆಯಬಹುದು.
ಮುಧೋಳದಲ್ಲೂ ವೈದ್ಯರು ಲಭ್ಯ ಡಾ.ಗೀತಾ ಭರತ್ ಅವರು ಪ್ರತಿ ತಿಂಗಳ 2ನೇ ಶನಿವಾರ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲೂ ಲಭ್ಯ ಇರುತ್ತಾರೆ. ಮುಧೋಳದ ರೆಡ್ಡಿ ಬ್ಯಾಂಕ್ ಎದುರಿನ ಸರ್ವೋದಯ ಮಹಿಳಾ ಆರೋಗ್ಯ ಮತ್ತು ಸಂತಾನ ಸಾಫಲ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಾರೆ.
ಸಂತಾನಪ್ರಾಪ್ತಿಗೆ ಲಭ್ಯವಿರುವ ಕ್ರಾಂತಿಕಾರಿ ಚಿಕಿತ್ಸಾ ಪದ್ಧತಿಗಳುಐವಿಎಫ್ ಅಥವಾ ಯಾವುದೇ ಸಂತಾನಹೀನತೆ ಚಿಕಿತ್ಸೆಯ ಫಲಿತಾಂಶದ ಅತಿ ಮುಖ್ಯ ನಿರ್ಧಾರಕ ಅಂಶವೆಂದರೆ ಅದು ಮಹಿಳೆಯ ವಯಸ್ಸು, ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಆಕೆಯ ವಯಸ್ಸಿಗೆ ಅನುಗುಣವಾಗಿ ಇರುತ್ತದೆ. ಒಬ್ಬ ಮಹಿಳೆಯ ಫಲವತ್ತತೆ 21ರಿಂದ 30 ವರ್ಷಗಳವರೆಗೆ ಗರಿಷ್ಠ ಪ್ರಮಾಣದ್ದಾಗಿರುತ್ತದೆ. 30 ವರ್ಷಗಳ ನಂತರ ನಿಧಾನವಾಗಿ ಹಾಗೂ 35ರ ನಂತರ ಶೀಘ್ರವಾಗಿ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕುಸಿಯುತ್ತದೆ. ಅಲ್ಲದೆ, ವಯಸ್ಸಾದ ಮಹಿಳೆಯರಲ್ಲಿ ವರ್ಣತಂತುಗಳ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಗರ್ಭಧಾರಣೆ ಸಾಧ್ಯತೆ ಕಡಿಮೆ ಮತ್ತು ಗರ್ಭಪಾತದ ಸಾಧ್ಯತೆ ಹೆಚ್ಚಾಗುತ್ತದೆ. ಐವಿಎಫ್ ಚಿಕಿತ್ಸೆಯ ಫಲಿತಾಂಶವೂ ವಯಸ್ಸನ್ನು ಅವಲಂಬಿಸಿರುತ್ತವೆ. ಅದ್ದರಿಂದ ಐವಿಎಫ್ ಅವಶ್ಯಕವಾಗಿರುವ ದಂಪತಿ ಚಿಕಿತ್ಸೆಯ ನಿರ್ಧಾರವನ್ನು ಬೇಗೆ ತೆಗೆದುಕೊಳ್ಳುವುದರಿಂದ ಯಶಸ್ಸಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಬದಲಾಗುತ್ತಿರುವ ಶೈಕ್ಷಣಿಕ, ಸಾಮಾಜಿಕ ಪರಿಸ್ಥಿತಿ ಹಾಗೂ ಜೀವನಶೈಲಿಗಳ ಪರಿಣಾಮವಾಗಿ ಮಹಿಳೆಯರು ಅನೇಕ ಕಾರಣಗಳಿಂದ ಮದುವೆ. ಗರ್ಭ ಧರಿಸುವುದನ್ನು ಮುಂದೂಡುವುದು ಸಾಮಾನ್ಯ, ಇಂಥ ಸಂದರ್ಭಗಳಲ್ಲಿ ಸಾಮಾಜಿಕ ಅಂಡಾಣು ಶೀತಲೀಕರಣದ ಮುಖಾಂತರ ಮಹಿಳೆಯರು ತಮ್ಮ ಫಲವತ್ತತೆಯ ಸಂರಕ್ಷಣೆ ಮಾಡಬಹುದು.
ಐವಿಎಫ್ ಕೇಂದ್ರ ಆಯ್ಕೆ ಹೇಗೆ?ಮಕ್ಕಳಾಗದೇ ಇರುವವರು ಉತ್ತಮ ಚಿಕಿತ್ಸೆ ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆಯೂ ಗೊಂದಲದಲ್ಲಿರುತ್ತಾರೆ. ಹಾಗಾಗಿ ಅತ್ಯುತ್ತಮ ಐವಿಎಫ್ ಕೇಂದ್ರದ ಆಯ್ಕೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು. ಕೆಲವೊಂದು ಅಂಶಗಳನ್ನು ಪರಿಶೀಲಿಸಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. * ವೈದ್ಯರ ಅರ್ಹತೆ, ಪರಿಣತಿ ಮತ್ತು ಅನುಭವ. * ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳ ಲಭ್ಯತೆ. ಈ ಚಿಕಿತ್ಸೆಯಲ್ಲಿ ಉಪಯೋಗಿಸುವ ವಸ್ತುಗಳ ಗುಣಮಟ್ಟ, * ಐವಿಎಫ್ ಕೇಂದ್ರದ ಯಶಸ್ಸಿನ ಪ್ರಮಾಣ. ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯುವುದು. ಈ ಚಿಕಿತ್ಸೆಯಲ್ಲಿ ಪಾರದರ್ಶಕತೆ, ನೈತಿಕತೆ ಹಾಗೂ ಕಾನೂನು ಬದ್ಧತೆ. ಒಟ್ಟಾರೆ ಚಿಕಿತ್ಸಾ ತಂಡದ ಅನುಭವ ಹಾಗೂ ಬೆಂಬಲ. ಚಿಕಿತ್ಸಾ ದರ ಅಂತಿಮವಾಗಿ ಪರಿಗಣಿಸಬೇಕಾಗಿರುವುದು.
ಭ್ರೂಣ ಮತ್ತು ಲಿಂಗಾಣುಗಳ ಶೀತಲೀಕರಣಕಳೆದ 2 ದಶಕಗಳಲ್ಲಿ ಶೀತಲೀಕರಣ cryopreservation/ vertification ತಂತ್ರಜ್ಞಾನ ಬಹಳ ವೇಗವಾಗಿ ಬೆಳೆದು, ಪ್ರಣಾಳ ಶಿಶು ಚಿಕಿತ್ಸೆಯ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಿಸಲು ಸಹಾಯಕವಾಗಿದೆ. ಅಲ್ಲದೆ, ಮಹಿಳೆಯರಲ್ಲಿ ಸಾಮಾಜಿಕ ಅಂಡಾಯ ಶೀತಲೀಕರಣದಂಥ ಹೊಸ ಸಾಧ್ಯತೆಗಳನ್ನು ಮಾನವ ಕುಲಕ್ಕೆ ಕೊಡುಗೆಯಾಗಿ ನೀಡಿದೆ. ಈ ತಂತ್ರಜ್ಞಾನದ ಸಹಾಯದಿಂದ ಭ್ರೂಣ ಹಾಗೂ ಅಂದಾಜುಗಳನ್ನು ಅನಿರ್ದಿಷ್ಟ ಕಾಲದವರೆಗೆ ದ್ರವರೂಪದ ನೈಟ್ರೋಜಿನ್ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿಡಬಹುದಾಗಿದ್ದು, ಭವಿಷ್ಯದಲ್ಲಿ ಅವಶ್ಯವಾದಾಗ ಹೊರಗೆ ತೆಗೆದು ಬೆಳೆಸಿ, ಅಂಡಾಣುಗಳನ್ನು ಭ್ರೂಣವಾಗಿ ಬೆಳೆಸಿ ಗರ್ಭಕೋಶಕ್ಕೆ ವರ್ಗಾವಣೆ ಮಾಡಬಹುದು. ಪ್ರಣಾಳ ಶಿಶು ಚಿಕಿತ್ಸೆಯಲ್ಲಿ ಅನೇಕ ಭ್ರೂಣಗಳ ಸೃಷ್ಟಿಯಾಗುವುದರಿಂದ ಹೆಚ್ಚಿನ ಭ್ರೂಣಗಳನ್ನು ಶೀತಲೀಕರಿಸಿಟ್ಟು ಒಂದೊಂದೇ ಭ್ರೂಣಗಳನ್ನು ಅನೇಕ ಬಾರಿ ಉಪಯೋಗಿಸಬಹುದಾದ ಸಾಧ್ಯತೆ ಇದೆ. ಇದರಿಂದ ಒಂದೇ ಐವಿಎಫ್ ಚಿಕಿತ್ಸೆಯಲ್ಲಿ ದಂಪತಿ ಎರಡು ಮಕ್ಕಳನ್ನು ಪಡೆಯಬಹುದಾಗಿದೆ. ಶೀತಲೀಕರಿಸಿದ ಭ್ರೂಣ ವರ್ಗಾವಣೆಯ ಯಶಸ್ಸಿನ ಪ್ರಮಾಣ, ತಾಜಾ ಭ್ರೂಣ ವರ್ಗಾವಣೆಗಿಂತಲೂ ಹೆಚ್ಚಾಗಿರುವುದು ಮತ್ತು ಇದು ಭ್ರೂಣಗಳಿಗೆ ಸುರಕ್ಷಿತವಾಗಿರುವುದು ಕಂಡುಬಂದಿದೆ.
ಆಸ್ಪತ್ರೆ ವಿಳಾಸಸರ್ವೋದಯ ಮಹಿಳಾ ಆಸ್ಪತ್ರೆ ಹಾಗೂ ಸಂತಾನ ಸಾಫಲ್ಯ ಕೇಂದ್ರ, ಪೊಲೀಸ್ ಟ್ರೈನಿಂಗ್ ಸ್ಕೂಲ್ ಹತ್ತಿರ, ಕಲಘಟಗಿ ರಸ್ತೆ, ಗಿರಿನಗರ, ಧಾರವಾಡ : 0836-2468000ಮೊ: 6361351318, 6362086349, 9972074131
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nineteen =
Remember me
