| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿಮೇಷ:ನಿಮಗೆ ದೈವಬಲ ಬರಬೇಕೆಂದರೆ ದ್ವಿತೀಯಕ್ಕೆ ಗುರು ಬರಬೇಕು. ಅಲ್ಲಿಗೆ ಗುರು ಪ್ರವೇಶಿಸಿದ ನಂತರ ದೈವಬಲ ನಿಮ್ಮತ್ತ ಸಾಗಿಬರಲಿದೆ. ವಿದ್ಯಾರ್ಥಿಗಳಿಗೆ ವಿಶೇಷ ಯಶಸ್ಸು ಈ ವರ್ಷ ಲಭಿಸಲಿದೆ. ಸಾರ್ವಜನಿಕ ಕ್ಷೇತ್ರಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುವಿರಿ. ಗೌರವ, ಸಂಮಾನ ನಿಮ್ಮನ್ನು ಅರಸಿ ಬರಲಿವೆ. ದಾಂಪತ್ಯ ಜೀವನದಲ್ಲಿ ಕಷ್ಟ, ನೋವುಗಳು ಸಾಕಷ್ಟಿದ್ದರೂ ಒಟ್ಟಾರೆ ಸುಖದ ತೂಕವೇ ಜಾಸ್ತಿ ಇರಲಿದೆ. ಮನೆಯಲ್ಲಿ ನಿರೀಕ್ಷಿತ ಶುಭಕಾರ್ಯಗಳು ನೆರವೇರಲಿವೆ. ಸಹಜವಾಗಿ ಸಂತಸದಾಯಕ ದಿನಗಳು ನಿಮ್ಮ ಜತೆಗಿರುತ್ತವೆ. ಲಾಭಸ್ಥಾನದಲ್ಲಿರುವ ಶನಿಯು ಆರ್ಥಿಕ ಸುಸ್ಥಿತಿಗೆ ಕಾರಣವಾಗಿ ನೆಮ್ಮದಿ ದಯಪಾಲಿಸಲಿದ್ದಾನೆ. ಕೃಷಿ, ಕಾರ್ಖಾನೆ, ನೌಕರಿ ಮೊದಲಾದ ಉದ್ಯೋಗದಲ್ಲಿ ಇರುವವರಿಗೆ ಇದು ಉತ್ತಮ ವರ್ಷ. ಸುಬ್ರಹ್ಮಣ್ಯನನ್ನು ಪೂಜಿಸಿ. ನೆಮ್ಮದಿ ಇರಲಿದೆ. ಶುಭಸಂಖ್ಯೆ: 3, 9
ವೃಷಭ:ದಶಮದ ಶನಿ, ಪಂಚಮದ ಕೇತುವಿನ ಕಾರಣದಿಂದ ದೈವಬಲ ಈ ವರ್ಷ ಕ್ಷೀಣಿಸುವುದು. ಅಧಿಕ ಖರ್ಚು, ವಿರೋಧಿ ಜನರ ಉಪದ್ರವ, ರೋಗಬಾಧೆಗಳು ಮೊದಲಾದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆತ್ಮೀಯರೊಂದಿಗೆ ವಿರೋಧ ಕಟ್ಟಿಕೊಳ್ಳಬೇಕಾಗುವ ಸಂದರ್ಭ ಬರಬಹುದು. ಯಾವುದೇ ಸಂದರ್ಭದಲ್ಲೂ ಸಹನೆಯನ್ನು ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಸನ್ನಿವೇಶ ಮತ್ತು ಬುದ್ಧಿಯ ಅಸ್ಥಿರತೆ ಕಾಡೀತು. ಸ್ಥಾನ, ಪದವಿಗಳಿಗೆ ಹಾನಿ. ಬಂಧುವರ್ಗದಲ್ಲಿ ಒತ್ತಡ, ಕಾರ್ಯದಲ್ಲಿ ಮಂದಗತಿಯಂಥ ಸಮಸ್ಯೆಗಳು ಉಂಟಾಗಬಹುದು. ಪಾಲುದಾರಿಕೆ ವ್ಯವಹಾರ ವಿಸ್ತಾರಗೊಳ್ಳಲಿದೆ. ಅನ್ನದಾನ, ಗೋಸೇವೆ ಇತ್ಯಾದಿ ನಡೆಸುವುದರಿಂದ ಸಮಸ್ಯೆಗಳು ನಿವಾರಣೆ ಆಗಲಿವೆ. ಶುಭಸಂಖ್ಯೆ: 1, 7
ಮಿಥುನ:ಈ ವರ್ಷ ನಿಮ್ಮ ಪಾಲಿಗೆ ಮಿಶ್ರಫಲ. ಗುರು, ಶನಿ, ರಾಹು ಮತ್ತು ಕೇತುಗಳು ನಿಮಗೆ ಅಶುಭ ಫಲದಾಯಕರು. ಅದರಿಂದಾಗಿ ಕಾರ್ಯಕಲಾಪಗಳು ಸರಾಗವಾಗಿ ಆಗದೇ ಜಟಿಲವಾಗಲಿವೆ. ಮನೆಯಲ್ಲಿ ಅಧಿಕ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಬದಲಾವಣೆ, ಸ್ತ್ರೀ ಸಂಬಂಧವಾಗಿ ತೊಂದರೆ ಇತ್ಯಾದಿಗಳು ನಿಮ್ಮನ್ನು ಬಾಧಿಸಬಹುದು. ಧೃತಿಗೆಡಬೇಡಿ. ಮೇ ನಂತರ ಸ್ಥಿತಿ ಬದಲಾಗಿ ಕಾರ್ಯದಲ್ಲಿ ಸಫಲತೆ ಕಾಣುವಿರಿ. ಸ್ಥಾನಮಾನದಿ ಲಾಭ, ಧನಾಭಿವೃದ್ಧಿ, ಜನಪ್ರಿಯತೆ, ಭೂಸಂಬಂಧ ಲಾಭ ಇತ್ಯಾದಿ ಫಲಗಳಿವೆ. ವರ್ಷಾಂತ್ಯದಲ್ಲಿ ನಿಮ್ಮ ಇಚ್ಛಿತ ಕಾರ್ಯಗಳು ಕೈಗೂಡಲಿದ್ದು ನೆಮ್ಮದಿಯ ದಿನಗಳು ಬರಲಿವೆ. ದುರ್ಗೆಯನ್ನು ಅಚಲವಾಗಿ ಪ್ರಾರ್ಥಿಸಿ. ಶುಭಸಂಖ್ಯೆ: 4, 7
ಕಟಕ:ನಿಮ್ಮ ರಾಶಿಯಿಂದ ಗುರುವು ಏಕಾದಶಕ್ಕೆ ಬರುವುದರಿಂದ ನಿಮಗೆ ದೈವಾನುಗ್ರಹವಿದೆ. ಭಾಗ್ಯ, ಸಂಪತ್ತು, ಸ್ಥಾನಮಾನಗಳು, ಪದವಿಯ ಲಭ್ಯತೆ ಇರುತ್ತವೆ. ಕುಟುಂಬದಲ್ಲಿ ಶುಭಕಾರ್ಯದ ನಿರೀಕ್ಷೆ. ಆರ್ಥಿಕವಾಗಿ ಅನುಕೂಲ. ನೂತನ ಮನೆ ನಿರ್ಮಾಣ ಮಾಡಲಿದ್ದೀರಿ. ಶಾರೀರಿಕವಾಗಿ, ವ್ಯಾವಹಾರಿಕವಾಗಿ ಉತ್ತಮ ಪರಿಸ್ಥಿತಿ. ಆದರೂ ವರ್ಷಾಂತ್ಯದಲ್ಲಿ ಅಷ್ಟಮಸ್ಥ ಶನಿಯು ವ್ಯಾಧಿ, ಅಪವ್ಯಯ, ಅನಾರೋಗ್ಯ ಸಮಸ್ಯೆಗೆ ಕಾರಣ ಆಗಬಹುದು. ಧರ್ಮಬಾಹಿರ ಪ್ರವೃತ್ತಿಗಳಿಗೆ ಬುದ್ಧಿ ಪ್ರೇರಣೆ ಆಗಬಹುದು. ಕೃಷಿಕರು, ವ್ಯಾಪಾರಸ್ಥರು, ಸೇವಾವೃತ್ತಿಯಲ್ಲಿ ಇರುವವರಿಗೆ ಕಷ್ಟನಷ್ಟಗಳು ಅಧಿಕ. ಅಕ್ಟೋಬರ್ ನಂತರದಲ್ಲಿ ರಾಜ ಉಪದ್ರವ, ಧನಹಾನಿ ಇತ್ಯಾದಿ ಎದುರಾದರೂ ಅಭಿವೃದ್ಧಿ ಇರುತ್ತದೆ. ವರ್ಷಾಂತದಲ್ಲಿ ಮಕ್ಕಳಿಂದ ಶುಭಫಲ. ಧನಲಾಭ. ಎಲ್ಲ ವ್ಯವಹಾರಗಳಲ್ಲಿ ಕಾರ್ಯಸಿದ್ಧಿ ಉಂಟಾಗಲಿದೆ. ನರಸಿಂಹನನ್ನು ಆರಾಧಿಸಿ. ಶುಭಸಂಖ್ಯೆ: 4, 6
ಸಿಂಹ:ಉದ್ಯೋಗ ಕ್ಷೇತ್ರದಲ್ಲಿ ನಷ್ಟಕಷ್ಟಗಳು, ವಿರೋಧಿಗಳ ಉಪಟಳ ಮುಂತಾದವು ಪ್ರಾರಂಭದಲ್ಲಿ ನಿಮ್ಮ ಅನುಭವಕ್ಕೆ ಬರುವವು. ಅವುಗಳನ್ನು ಧೈರ್ಯದಿಂದ ಎದುರಿಸುವುದು ಅನಿವಾರ್ಯ. ಮಕ್ಕಳ ಉದ್ಯೋಗದ ವಿಚಾರದಲ್ಲಿ ಮತ್ತು ವಿದ್ಯಾಭ್ಯಾಸದ ವಿಚಾರದಲ್ಲಿ ವಿಶೇಷ ಪ್ರಯತ್ನ ಅಗತ್ಯ. ಅಷ್ಟಮದ ರಾಹು, ದ್ವಿತೀಯದ ಕೇತು, ಸಪ್ತಮದ ಶನಿಯಿಂದ ಸಾಂಸಾರಿಕ ಅಡಚಣೆಗಳು ಬರಬಹುದು. ಕೆಲಸಗಳು ಸರಿಯಾದ ಸಮಯಕ್ಕೆ ನಡೆಯದೆ ವಿಳಂಬ ಆಗಬಹುದು. ಹೊಟ್ಟೆಗೆ ಸಂಬಂಧಪಟ್ಟಂತಹ ಅನಾರೋಗ್ಯ, ದೂರಪ್ರಯಾಣ, ಸಾಲದ ತೊಂದರೆ ಕಾಣಿಸಿಕೊಳ್ಳಬಹುದು. ವರ್ಷದ ಅಂತ್ಯದಲ್ಲಿ ಸ್ಥಾನಮಾನಾದಿ ಹಾನಿ, ಧನಹಾನಿಯಂಥ ಅಶುಭ ಫಲಗಳು ಗೋಚರಿಸುವವು. ಅಕ್ಟೋಬರ್ ನಂತರದಲ್ಲಿ ಆರೋಗ್ಯವೃದ್ಧಿ, ಶತ್ರುನಿಗ್ರಹ, ಲಾಭ ಮುಂತಾದ ಶುಭಫಲಗಳಿವೆ. ಸುಬ್ರಹ್ಮಣ್ಯನನ್ನು ವಿಶೇಷವಾಗಿ ಆರಾಧಿಸಿ. ಶುಭಸಂಖ್ಯೆ: 4, 8
ಕನ್ಯಾ:ನವಮದ ಗುರು ಮತ್ತು ಷಷ್ಠದ ಶನಿಯಿಂದ ಶುಭಫಲಗಳನ್ನು ನಿರೀಕ್ಷಿಸಬಹುದು. ಮನೋನಿಶ್ಚಿತ ಕೆಲಸಗಳು ಸುಗಮವಾಗಿ ನೆರವೇರುವವು. ಕುಟುಂಬದಲ್ಲಿ ವಿವಾಹದಂಥ ಶುಭಕಾರ್ಯಗಳು ಈ ವರ್ಷ ನೆರವೇರುವವು. ಉದ್ಯೋಗ -ವ್ಯಾಪಾರದಲ್ಲಿ ಪ್ರಗತಿಯಾಗಲಿದೆ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಮಕ್ಕಳಿಂದ ಮತ್ತು ಕೆಲಸಗಾರರಿಂದ ಅನುಕೂಲವಾಗಲಿದೆ. ವ್ಯಾಪಾರ ಉದ್ಯಮದಾರರಿಗೆ, ಕೃಷಿ, ಕಾರ್ಖಾನೆ ವೃತ್ತಿಯವರಿಗೆ ಇಷ್ಟಾರ್ಥ ಸಿದ್ಧಿ. ವರ್ಷಾಂತ್ಯದಲ್ಲಿ ಕೌಟುಂಬಿಕ ತಾಪತ್ರಯಗಳು, ಶರೀರ, ಮನಸ್ಸಿಗೆ ಕಿರಿಕಿರಿ, ಚಿಕ್ಕಪುಟ್ಟ ಅಪಘಾತಗಳು ಕಾಣಿಸಿಕೊಳ್ಳಬಹುದು. ರಾಹು, ಕೇತುಗಳ ಪ್ರೀತ್ಯರ್ಥವಾಗಿ ದಾನಧರ್ಮಗಳನ್ನು ಮಾಡಿ. ಗಣಪತಿಯನ್ನು ಆರಾಧಿಸಿ. ಶುಭಸಂಖ್ಯೆ: 2, 9
ತುಲಾ:ದುಸ್ಥಾನಸ್ಥರಾದ ಗುರು, ಶನಿ ಮತ್ತು ಕೇತುವಿನ ಕಾರಣದಿಂದ ನಾನಾ ಕಷ್ಟನಷ್ಟಗಳು ಆರಂಭದಲ್ಲಿ ಬರಬಹುದು. ಅನಾರೋಗ್ಯ ಸಮಸ್ಯೆ, ಉದ್ಯೋಗ-ವ್ಯವಹಾರಗಳಲ್ಲಿ ಹಿನ್ನಡೆ, ಯಾವುದೇ ಕೆಲಸದಲ್ಲಿ ವಿಘ್ನಗಳು ಬರಬಹುದು. ಆರ್ಥಿಕವಾಗಿ ಖರ್ಚು ಮತ್ತು ನಷ್ಟಗಳು ಉಂಟಾಗಬಹುದು. ಸ್ವಂತ ಉದ್ದಿಮೆದಾರರು ಮತ್ತು ಪಾಲುದಾರಿಕೆ ವ್ಯವಹಾರಸ್ಥರು ಜಾಗರೂಕತೆಯಿಂದ ಇರಬೇಕು. ದಾಂಪತ್ಯದಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಕಲಹ ಆಗಬಹುದು. ಆದರೆ ಇದು ಕತ್ತಲೆಯಂತೆ, ಸೂರ್ಯೋದಯವಾದಾಗ ಸರಿದು ಹೋಗುತ್ತದೆ. ವರ್ಷದ ಮಧ್ಯಭಾಗದ ನಂತರ ರೋಗ, ಶೋಕಗಳು ಶಮನಗೊಂಡು ಆತ್ಮವಿಶ್ವಾಸ ವೃದ್ಧಿಸುವುದು. ಆರ್ಥಿಕವಾಗಿಯೂ ಚೇತರಿಸಿಕೊಳ್ಳುವಿರಿ. ಶುಭಸಂಖ್ಯೆ: 3, 6
ವೃಶ್ಚಿಕ: ನಿಮಗೆ ಈ ವರ್ಷ ದೈವಕೃಪೆ ಉತ್ತಮವಾಗಿದೆ. ಅದೃಷ್ಟ ಚೆನ್ನಾಗಿರುವಂತೆ ನಿಮಗೇ ಅನಿಸುತ್ತಿರುತ್ತದೆ. ಸಾಮಾಜಿಕ ಕಾರ್ಯಕಲಾಪಗಳಲ್ಲಿ ಭಾಗವಹಿಸುವಿರಿ. ವಿವಾಹಾದಿ ಶುಭಕಾರ್ಯಗಳು, ಕೌಟುಂಬಿಕ ಕಾರ್ಯಗಳು ನಡೆಯಲು ಈ ಕಾಲ ಉತ್ತಮವಾಗಿರುತ್ತದೆ. ಭೂಮಿ, ವಾಹನ ಮೊದಲಾದ ಸ್ಥಿರಾಸ್ತಿ ಖರೀದಿಗೆ ಉತ್ತಮ ಕಾಲ. ದಾಂಪತ್ಯ ಜೀವನ ಸಮರಸವಾಗಿರುತ್ತದೆ. ಅಂತ್ಯದಲ್ಲಿ ರಾಹು ಪಂಚಮದಲ್ಲಿ, ಶನಿಯು ಚತುರ್ಥದಲ್ಲಿ ಸಂಚರಿಸುವುದರಿಂದ ಮನಸ್ಸಿಗೆ ನೆಮ್ಮದಿ ಕಡಿಮೆ ಆಗುತ್ತದೆ. ಆರೋಗ್ಯದಲ್ಲಿ ಏರುಪೇರು, ನಷ್ಟಕಷ್ಟಗಳು, ವ್ಯವಹಾರಗಳಲ್ಲಿ ತಾಪತ್ರಯಗಳು ಅಧಿಕ. ಕೈಗಾರಿಕೆ, ಉದ್ದಿಮೆದಾರರು, ಕೃಷಿಕರು, ವಿದ್ಯಾರ್ಥಿಗಳು ಅಭಿವೃದ್ಧಿ ಕಾಣುವರು. ಅನಾಥರಿಗೆ ಅನ್ನದಾನ. ಗೋಸೇವೆಯನ್ನು ಮಾಡಿ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 4, 9
ಧನು:ಈ ವರ್ಷ ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯಗಳು ಸಮಪ್ರಮಾಣದಲ್ಲಿ ಪ್ರಾಪ್ತಿಯಾಗಲಿವೆ. ದೈವಬಲ ಇಲ್ಲದಿದ್ದರೂ ವ್ಯವಹಾರಗಳಲ್ಲಿ ಇಷ್ಟಾರ್ಥ ಈಡೇರುವುದು. ವ್ಯವಹಾರಿಕವಾಗಿ ವಿಶೇಷ ಸೌಲಭ್ಯ. ಕೌಟುಂಬಿಕ ಅಭಿವೃದ್ಧಿ. ಸಹೋದರರಿಂದ ಅನುಕೂಲ ಮೊದಲಾದ ಫಲಗಳಿವೆ. ಮಾನಸಿಕ ಖಿನ್ನತೆ, ಅನಾರೋಗ್ಯ, ಮನಸ್ತಾಪ ಉಂಟಾಗಬಹುದು. ಮಾನಸಿಕ ಅಶಾಂತಿ, ಶತ್ರುಪೀಡೆ ಇತ್ಯಾದಿ ವರ್ಷದ ಅಂತ್ಯದಲ್ಲಿ ಎದುರಾದೀತು. ಕೃಷಿ, ಕಾರ್ಖಾನೆ, ನೌಕರಿ ಮುಂತಾದ ವೃತ್ತಿಯವರು ಹೆಚ್ಚು ಅದೃಷ್ಟಶಾಲಿಗಳು. ಜೂನ್ ನಂತರದಲ್ಲಿ ದೇಹ ಆರೋಗ್ಯ ಸುಧಾರಣೆ, ಗೃಹಸೌಖ್ಯ, ಅಭಿವೃದ್ಧಿ ಉಂಟಾಗುವುದು. ಶತ್ರುಹಾನಿಯಾಗುವುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ನಿರೀಕ್ಷಿತ ಫಲದ ಯಶಸ್ಸಿಗೆ ದೇವಿಯನ್ನು ಆರಾಧಿಸಿ. ಶುಭಸಂಖ್ಯೆ: 5, 7
ಮಕರ:ವರ್ಷದ ಪ್ರಾರಂಭದಲ್ಲಿ ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು ಎದುರಾದಾವು. ಸಾಂಸಾರಿಕ ವಿಷಯದಲ್ಲಿ ಕಿರಿಕಿರಿ ಉಂಟಾಗುವುದು. ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ, ಅಪಕೀರ್ತಿ ಇತ್ಯಾದಿ ಎದುರಾಗಬಹುದು. ವರ್ಷಾಂತದಲ್ಲಿ ಪಂಚಮದ ಗುರು ದೈವಬಲ ಒದಗಿಸುವನು. ಗೃಹದಲ್ಲಿ ಶುಭಕಾರ್ಯಗಳು ನಡೆಯುವವು. ಹೊಸ ಮನೆ, ಹೊಸ ಪರಿಸರಕ್ಕೆ ಹೋಗಬೇಕಾಗಬಹುದು. ವಿದೇಶ ಪ್ರಯಾಣ ನಿರೀಕ್ಷಿತ. ಈ ವರ್ಷದ ಅಂತ್ಯದಲ್ಲಿ ಏಳೂವರೆ ಶನಿಯ ಅಂತ್ಯದ ಕಾಲಘಟ್ಟವಾಗಿರುವುದರಿಂದ ತೀವ್ರ ತರದ ತಾಪತ್ರಯಗಳನ್ನು ಎದುರಿಸಬೇಕಾಗಬಹುದು. ಸ್ಪೂರ್ತಿ ಕಳೆದುಕೊಂಡು ಕೆಲಸದಲ್ಲಿ ಅನಾಸಕ್ತಿ ಉಂಟಾಗಬಹುದು. ಯಥಾಶಕ್ತಿ ಶನಿ ಶಾಂತಿ ಮತ್ತು ಗಣಪತಿ ಸೇವೆಯನ್ನು ಮಾಡಿ. ಶುಭಸಂಖ್ಯೆ: 1, 9
ಕುಂಭ:ಪ್ರಾರಂಭದಲ್ಲಿ ಸ್ಥಾನಮಾನ ಪ್ರಾಪ್ತಿ, ಗೃಹಲಾಭ, ಧನಲಾಭ, ಮಕ್ಕಳಿಂದ ಶುಭಫಲ ಇತ್ಯಾದಿ ಅನುಭವಕ್ಕೆ ಬರುವುದು. ಆದರೂ ಈ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ದೈವಬಲದ ಕೊರತೆಯಿಂದ ಸಾಂಸಾರಿಕ ಸುಖ, ಗೃಹ ಸುಖಾದಿಗಳಿಗೆ ಹಾನಿಯಾಗುವುದು. ಅಶಾಂತಿ, ಶತ್ರುಪೀಡೆ, ರೋಗ ಭಯ ಮೊದಲಾದವು ಎದುರಾಗುತ್ತವೆ. ವರ್ಷದ ಅಂತ್ಯದಲ್ಲಿ ಚತುರ್ಥದ ಗುರು ಜನ್ಮ ರಾಶಿಯ ಶನಿ ದ್ವಿತೀಯ ಅಷ್ಟಮದ ರಾಹು, ಕೇತುಗಳು, ದೀರ್ಘಕಾಲದ ಅನಾರೋಗ್ಯ ಉಂಟು ಮಾಡುವ ಸಾಧ್ಯತೆ ಇದೆ. ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಾಹನಸಂಚಾರ, ಬೆಂಕಿ ಮತ್ತು ನೀರು ಇತ್ಯಾದಿಗಳಲ್ಲಿ ಜಾಗ್ರತೆ ಇರಬೇಕು. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಚಟುವಟಿಕೆಗಳ ಬಗ್ಗೆ ವಿಶೇಷ ಗಮನ ಕೊಡಿ. ಪರಮೇಶ್ವರನನ್ನು ಆರಾಧಿಸಿ. ಶುಭಸಂಖ್ಯೆ: 4, 2
ಮೀನ:ಈ ವರ್ಷ ದೈವಬಲವಿಲ್ಲ. ಈ ಕಾರಣದಿಂದ ಅನೇಕ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಬೇಕಾಗ ಬಹುದು. ವೃತ್ತಿ, ಉದ್ಯೋಗದಲ್ಲಿ ಸ್ಪರ್ಧೆ ಮತ್ತು ಬದಲಾವಣೆ, ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ ಮೊದಲಾದ ತೊಂದರೆಗಳು ಎದುರಾಗುವವು. ಉದ್ಯೋಗದಲ್ಲಿ ಇರುವವರೆಗೂ ಕಚೇರಿಯಲ್ಲಿ ಮೇಲಧಿಕಾರಿಗಳಿಂದ, ಸಹೋದ್ಯೋಗಿಗಳಿಂದ ಉಪಟಳ ಸಂಭವ. ದೈಹಿಕ, ಮಾನಸಿಕ ಅನಾರೋಗ್ಯ ಕಾಡಬಹುದು. ಫೆಬ್ರವರಿ, ಮಾರ್ಚ್ ತಿಂಗಳ ನಂತರ ಹೊಸ ಯೋಜನೆಗಳು ಕಾರ್ಯಗತವಾಗಲಿವೆ. ಕುಟುಂಬವರ್ಗದಿಂದ ಸ್ಪೂರ್ತಿ, ಆತ್ಮಗೌರವ ವೃದ್ಧಿಯಾಗಿ ಕಷ್ಟನಷ್ಟಗಳ ನಿವಾರಣೆ ಆಗಲಿದೆ. ಕೆಲವೊಂದು ದುಸ್ಸಾಹಸಗಳಿಂದ ತೊಂದರೆಗಳು ಎದುರಾಗಬಹುದು, ವಾಹನಸಂಚಾರದಲ್ಲಿ ಎಚ್ಚರಿಕೆ ಇರಲಿ. ನಾಗಾರಾಧನೆಯನ್ನು ಮಾಡಿ. ಶುಭಸಂಖ್ಯೆ: 2, 8
ಆ 10 ಸಾವಿರ ಅದೃಷ್ಟವಂತರಲ್ಲಿ ನೀವೂ ಒಬ್ರಾ? ಚೆಕ್ ಮಾಡಿಕೊಳ್ಳುವುದು ಹೇಗೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fifteen =
Remember me
