ತುಮಕೂರು:ಕ್ಯಾಂಟರ್ ಹಾಗೂ ಆಟೋ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದು, ಆಟೋ ಚಾಲಕನ ಎರಡೂ ಕೈ ಕಟ್ ಆಗಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ತುಮಕೂರು ಜಿಲ್ಲೆ ಕೊರಟಗೆರೆ‌ ತಾಲೂಕಿನ ಗಡಿಭಾಗವಾದ ಅರಸಾಪುರ – ಕಾಶಾಪುರ ಬಳಿ‌ ಕೊರಟಗೆರೆಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಆಟೋದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾದರು.
ಕೊರಟಗೆರೆ ಪಟ್ಟಣದ ಮೀಲಾನಿ (25), ಜೈರಬಿ (70) ಸಾವಿಗೀಡಾದವರು. ಆಟೋ ಚಾಲಕ ಕಲಂಧರ್ (35) ಎಂಬಾತನ ಎರಡೂ ಕೈ ಕಟ್ ಆಗಿದ್ದು, ಅವರ ಇಬ್ಬರು ಮಕ್ಕಳಾದ ಅರ್ಪ (5), ಅಸೀತಾ (3) ಪರಿಸ್ಥಿತಿ ಚಿಂತಾಜನಕವಾಗಿದೆ. ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಮೂವರನ್ನೂ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗೌರಿಬಿದನೂರು ಹಾಗೂ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಮೇಲ್ಸೇತುವೆ: ಮುಗಿಯದ ಫ್ಲೈಓವರ್​ನಲ್ಲಿ ಮುಗಿದೇ ಹೋಯ್ತು ಬದುಕು; ದಂಪತಿ ಸಾವು, ಪುತ್ರಿಯ ಪರಿಸ್ಥಿತಿ ಗಂಭೀರ

ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

ರೈಲ್ವೇ ಪ್ಲ್ಯಾಟ್​ಫಾರ್ಮ್​ನಲ್ಲೇ ಬಿದ್ದಿತ್ತು 100 ಗ್ರಾಂ ಚಿನ್ನಾಭರಣವಿದ್ದ ಬಾಕ್ಸ್; ಆಮೇಲಾಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
