ಹೊಸದುರ್ಗ:ತಾಲೂಕಿನ ಬುಕ್ಕಸಾಗರದ ಮಹಿಳೆ ಸೋಮವಾರ ಬೆಳಗ್ಗೆ ದೊಡ್ಡತೆಕ್ಕಲವಟ್ಟಿ ಬಳಿ ಆ್ಯಂಬುಲೆನ್ಸ್‌ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ತಾಲೂಕಿನ ಬುಕ್ಕಸಾಗರ ಗ್ರಾಮದ ತ್ಯಾಗರಾಜು ಪತ್ನಿ ರಾಧಾಮಣಿಗೆ ಸೋಮವಾರ ಮುಂಜಾನೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೆ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಲಾಗಿದೆ.
ಸ್ಥಳಕ್ಕೆ ಧಾವಿಸಿದ ಆ್ಯಂಬುಲೆನ್ಸ್‌ನಲ್ಲಿ ಮಹಿಳೆಯನ್ನು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ದೊಡ್ಡತೆಕ್ಕಲವಟ್ಟಿ ಬಳಿ ಹೆರಿಗೆ ನೋವು ಹೆಚ್ಚಾಗಿದೆ.
ಪರಿಸ್ಥಿತಿಯನ್ನು ಅರಿತ ಆರೋಗ್ಯ ಸಹಾಯಕಿ ಪವಿತ್ರಾ, ಚಾಲಕ ಮಂಜುನಾಥಸ್ವಾಮಿ ವಾಹನದಲ್ಲೇ ಸುಸೂತ್ರವಾಗಿ ಹೆರಿಗೆ ಮಾಡಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಬಳಿಕ ತಾಯಿ ಮತ್ತು ಮಗುವನ್ನು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ.

ಕರೊನಾ ಸೋಂಕು ಇದ್ದರೂ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡ, 11 ಜನರಿಗೆ ಸೋಂಕು ಹರಡಿ ಜೈಲು ಸೇರಿದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
