ಹೊಸಪೇಟೆ:ವಾಟ್ಸಾೃಪ್‌ನಲ್ಲಿ ಒಂದು ಸ್ಟೇಟಸ್ ಹಾಕಿದ್ದಕ್ಕೆ ಗಲಭೆ ಮಾಡೋದು ಸರಿಯಲ್ಲ. ಈ ಕುರಿತಾಗಿ ತನಿಖೆ ನಡೆಯಲಿ. ಆದರೆ, ಅನ್ಯ ಕೋಮಿನವರು ಯಾಕೆ ಕಾನೂನು ಕೈಗೆತ್ತಿಕೊಳ್ಳಬೇಕೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇವಸ್ಥಾನಗಳನ್ನು ನಾಶಪಡಿಸಿದಾಗಲೂ ನಾವು ಶಾಂತಿ-ಸೌಹಾರ್ದದಿಂದ ಇದ್ದೇವೆ. ಇದೀಗ ಪೊಲೀಸ್ ಠಾಣೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಈ ನೆಲದ ಕಾನೂನಿಗೆ ಬೆಲೆಯೇ ಇಲ್ಲವೇ ? ಸಣ್ಣಸಣ್ಣ ಘಟನೆಗಳನ್ನಿಟ್ಟುಕೊಂಡು ಗಲಾಟೆ ಮಾಡೋಕೆ ಇವರು ಕಾಯುತ್ತಿರುತ್ತಾರೆಯೇ ? ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದಾಗ 150ಕ್ಕೂ ಹೆಚ್ಚು ವಾಹನ ಜಖಂಗೊಂಡು, ಅಂಗಡಿ-ಮಳಿಗೆ ಸುಟ್ಟವು. ಆವಾಗಲೂ ಒಂದು ಸಣ್ಣ ಸ್ಟೇಟಸ್ ಹಾಕಿದ್ದೆ ಕಾರಣವಾಗಿತ್ತು. ಸ್ಟೇಟಸ್ ಹಾಕಿದವನು ಯಾರೇ ಆಗಿರಲಿ, ಗಲಭೆಗೆ ಪ್ರಚೋದಿಸಲು ಹಾಕಿರಬಹುದು. ಅದಕ್ಕಾಗಿ ಹೀಗೆ ಮಾಡೋದಾ ? ಅವರು ಮಾತ್ರ ಉಪ್ಪು-ಹುಳಿ-ಖಾರ ತಿನ್ನುತ್ತಾರೆಯೇ? ಉಳಿದವರು ಯಾರೂ ತಿನ್ನೋದಿಲ್ಲವೇ ಎಂದರು.
ಸರಸ್ವತಿ ದೇವಿಯನ್ನು ಎಂ.ಎಫ್.ಹುಸೇನ್ ಕೆಟ್ಟದಾಗಿ ಚಿತ್ರಿಸಿದ್ದ, ಹಾಗಿದ್ದರೆ ನಾವು ಅವರನ್ನೆಲ್ಲ ಜೀವಂತ ಸುಟ್ಟು ಬಿಡಬೇಕಿತ್ತಾ ? ಇನ್ನೊಬ್ಬ ಜೈಲಲ್ಲಿದಾನೆ. ದೇವಾನುದೇವತೆಗಳ ಕಾಮಿಡಿ ಮಾಡುತ್ತಾನೆ. ಆಂಧ್ರದಲ್ಲೂ ಮೂರ್ತಿಗಳ ಭಗ್ನ ಮಾಡುತ್ತಾ ಇದ್ದಾರೆ. ಹಾಗಾದರೆ ಸಣ್ಣಪುಟ್ಟ ವಿಚಾರಕ್ಕೆ ತಗಾದೆ ತೆಗೆಯುವವರನ್ನು ಏನು ಮಾಡಬೇಕು ? ಈ ನೆಲದ ಕಾನೂನು, ಸಂವಿಧಾನದ ಬಗ್ಗೆ ಮಾತನಾಡುವ ಸೆಕ್ಯೂಲರ್‌ಗಳು ಏನು ಮಾಡುತ್ತಿದ್ದಾರೆ ? ಇಷ್ಟೆಲ್ಲ ನಡೆದರೂ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ. ಕೂಡಲೇ ಎಲ್ಲರೂ ಶಾಂತಿ ಕಾಪಾಡಬೇಕು. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಬೇಕು ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
