ಹೊಸಪೇಟೆ: ನಗರದ ಶಂಕರ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಗಾದಿಗಾಗಿ ಪ್ರಾಧ್ಯಾಪಕರ ಗುದ್ದಾಟ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಂದ ಸೋಮವಾರ ಇತ್ಯಾಥಗೊಂಡಿದೆ.
ಕಾಲೇಜಿನಲ್ಲಿ ಕೆಲ ವರ್ಷಗಳಿಂದ ಕಾಯಂ ಪ್ರಾಂಶುಪಾಲರ ಹುದ್ದೆ ಖಾಲಿಯಿದೆ. ಆ ಸ್ಥಾನವನ್ನು ಕಾಲೇಜಿನ ಪ್ರಾದ್ಯಾಪಕ ಡಾ.ನಾರಾಯಣ ಜಿ.ಹೆಬಸೂರ ವಹಿಸಿಕೊಳ್ಳಬೇಕಾಗಿತ್ತು. ಆದರೆ ಕಾರಣಾಂತರಗಳಿಂದ 2023ರ ಪೆಬ್ರವರಿಯಲ್ಲಿ ಕಿರಿಯ ಪ್ರಾದ್ಯಾಪಕ ಶಿವಪ್ಪ ಅವರು ಪ್ರಭಾವ ಹೊಣೆ ಹೊತ್ತಿದ್ದರು. ಸರ್ಕಾರದ ನಿಯಮದ ಪ್ರಕಾರ ಹೆಬಸೂರು ಪ್ರಭಾರ ಪ್ರಾಂಶುಪಾಲರ ಹುದ್ದೆಗೆ ಅರ್ಹ. ಅದಕ್ಕಾಗಿ ಹುದ್ದೆ ಬಿಟ್ಟು ಕೊಡುವಂತೆ ಕಳೆದ 2023ರ ಸೆಪ್ಟೆಂಬರ್ ನಿಂದ ಮನವಿ ಮಾಡಿದ್ದಾರೆ. ಸರ್ಕಾರದ ಆದೇಶ ತರುವಂತೆ ಸೂಚಿಸಿದ್ದರು. ಹೆಬಸೂರು ಆದೇಶ ಪತ್ರ ನೀಡಿದರೂ ಶಿವಪ್ಪ ಅವರು ಸ್ವೀಕರಿಸುತ್ತಿಲ್ಲ. ಅಧಿಕಾರ ಬಿಟ್ಟುಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಪ್ರತಿದಿನ ಸಹ ಪ್ರಾದ್ಯಾಪಕರು, ಉಪನ್ಯಾಸಕರು ಮಾಡುತ್ತಿದ್ದ ನ್ಯಾಯದ ಪಂಚಾಯಿತಿ ನಡೆಯುತ್ತಿತ್ತು.
ವಿಷಯ ವಿಜಯವಾಣಿಗೆ ಪತ್ರಿಕೆಯ ಗಮನಕ್ಕೆ ಬಂತು. ವರದಿಯ ಕೋಟ್ ಕೇಳಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ಗೆ ಕರೆ ಮಾಡಿದಾಗ, ಪರಿಶೀಲಿಸಿ ಕ್ರಮಕೈಗೊಳ್ಳುವೆ ಎಂದು ಹೇಳಿದರು. ತಕ್ಷಣ ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಅವರಿಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧೀಕಾರಿ ಸೂಚನೆ ನೀಡಿದರು. ಕೂಡಲೇ ಕಾಲೇಜಿಗೆ ಭೇಟಿ ನೀಡಿದ ಉಪವಿಭಾಗಿಯಾಧಿಕಾರಿ ಆದೇಶದಂತೆ ಡಾ.ನಾರಾಯಣ ಜಿ.ಹೆಬಸೂರ ಅವರಿಗೆ ಶಿವಪ್ಪ ಅವರಿಂದ ಅಧಿಕಾರ ಹಸ್ತಾಂತರಿಸಿದರು. ಕಾಲೇಜಿನಲ್ಲಿ ಗೊಂದಲಗಳಿಲ್ಲದೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಿ ಎಂದು ಸೂಚನೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
