ಹೊಸಪೇಟೆ: ಕೇಂದ್ರ ಸರ್ಕಾರದ 16ನೇ ಕೇಂದ್ರ ಹಣಕಾಸು ಆಯೋಗದ 11 ಜನರ ನಿಯೋಗ ವಿಶ್ವವಿಖ್ಯಾತ ಹಂಪಿಗೆ ಶುಕ್ರವಾರ ಸಂಜೆ ನೀಡಿ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಗೆ ಭೇಟಿ ನೀಡಿದ ನಿಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ, ಸದಸ್ಯರಾದ ಅಜಯ್ ನಾರಾಯಣ ಝಾ, ಅನ್ನಿ ಜಾರ್ಜ್ ಮ್ಯಾಥ್ಯೂ, ಸೌಮ್ಯಾ ಕತಿ ಗೋಶ್, ಮನೋಜ್ ಪಾಂಡಾ, ಕಾರ್ಯದರ್ಶಿ ರಿಥ್ವಿಕ್ ರಂಜನಂ ಪಾಂಡೆ, ಜಂಟಿ‌ನಿರ್ದೇಶಕ ರಾಹುಲ್ ಜೈನ್, ಉಪ ಕಾರ್ಯದರ್ಶಿ ಅಜಿತ್ ಕುಮಾರ್ ರಂಜನ್, ಅಧ್ಯಕ್ಷರ ಪಿ.ಎಸ್. ಕುಮಾರ್ ವಿವೇಕ್, ಉಪ ನಿರ್ದೇಶಕ ಸಂದೀಪ್ ಕುಮಾರ್ ಒಎಸ್ ಡಿ ಓಂ ಪಾಲ್ ಅವರು ಮೊದಲಿಗೆ ಹಂಪಿಯ‌ ಪ್ರಸಿದ್ಧ ಶ್ರೀ ವಿಜಯವಿಠ್ಠಲ ದೇವಾಲಯಧ ಕಲ್ಲಿನ ರಥಕ್ಕೆ ಭೇಟಿ ನೀಡಿದರು. ಬಳಿಕ ತಂಡವು ಶ್ರೀ ವಿರುಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇವಸ್ಥಾನದ ಆನೆಯಿಂದ ಅಧಿಕಾರಿಗಳಿಗೆ ಸ್ವಾಗತಿಸಿದರು. ಇಲ್ಲಿನ ಶಿಲ್ಪಕಲಾ ಸೌಂದರ್ಯವನ್ನು ಬೆರಗಣ್ಣಿನಿಂದ ವೀಕ್ಷಣೆ ಮಾಡಿದರು.
ಪೂರ್ವ ನಿಗದಿಯಂತೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ ವೇಳೆಗೆ ತೋರಣಗಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿಯೋಗಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತಿಕ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹಾಗೂ ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಜಿಪಂ ಸಿಇಓ ನೊಂಗ್ಜಾಯ್ ಮೊಹಮದ್ ಅಲಿ ಅಕ್ರಮ ಶಾ ಸೇರಿದಂತೆ ನಿಯೋಗದ ಬರ ಮಾಡಿಕೊಂಡರು.
ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಜಿಪಂ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
