ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಧಿಕಾರಿಗಳುಹೊಸಪೇಟೆ:ಹಂಪಿಯ ಕಮಲಮಹಲ್ ಸ್ಮಾರಕದಲ್ಲಿ ನಿಯಮ ಉಲ್ಲಂಘಿಸಿ ವಿವಾಹಪೂರ್ವ ಫೋಟೋಶೂಟ್ ಮಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆಂಧ್ರದ ಜಾಹ್ನವಿ ಮತ್ತು ಸಿದ್ದಾಂತ ಜೋಡಿಯ ವಿವಾಹಪೂರ್ವ ಫೋಟೊ ಶೂಟ್ ಇದಾಗಿತ್ತು. ಫೋಟೋಗಳು ವೈರಲ್ ಆದ ಮೇಲೆಯೇ ಅಧಿಕಾರಿಗಳ ಗಮನಕ್ಕೆ ಬಂದಿರುವುದು ಅಚ್ಚರಿ ತಂದಿದೆ.
ಫೋಟೋ ಶೂಟ್ ನಡೆದಿರುವುದು ಸಿಬ್ಬಂದಿ ಕಣ್ಣಿಗೆ ಬೀಳಲಿಲ್ಲವೇ ಅಥವಾ ಕಂಡರೂ ಹಣದಾಸೆಗೋ ಇಲ್ಲವೇ ಮೇಲಧಿಕಾರಿಗಳ ಮೌಖಿಕ ಆದೇಶಕ್ಕೆ ಮಣಿದರೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಯಾವಾಗ ಫೋಟೋಗಳು ವೈರಲ್ ಆಗಿ, ಸ್ಮಾರಕ ಪ್ರಿಯರ ಕೆಂಗಣ್ಣಿಗೆ ಗುರಿಯಾಯಿತೋ ಆಗ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಚಿತ್ರಗಳು ಮತ್ತು ವಿಡಿಯೋಗಳನ್ನು ವಿಜಯಿ ಸ್ಯಾಮಂಡ್ಕೋ ಎಂಬುವರು ಡಿಲಿಟ್ ಮಾಡಿದ್ದಾರೆ.
ಇದನ್ನು ಪರಿಶೀಲಿಸಿ, ಸಂಬಂಧಿತರ ವಿರುದ್ಧ ದೂರು ನೀಡಲಾಗುವುದು ಎಂದು ಪುರಾತತ್ವ ಇಲಾಖೆ ಡೆಪ್ಯೂಟಿ ಸೂಪರಿಟೆಂಡೆಂಟ್ ಪಿ.ಕಾಳಿಮುತ್ತು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
