ಮಂಡ್ಯ:ತಾಲೂಕಿನ ತಂಗಳಗೆರೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಇತ್ತೀಚೆಗೆ ವಿದ್ಯಾರ್ಥಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಲೋಕೇಶ್ ಮತ್ತು ನಿಲಯಪಾಲಕ ಯೋಗಾನಂದ ಅವರನ್ನು ಅಮಾನತುಗೊಳಿಸಲಾಗಿದೆ.
ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಎಚ್.ಇ.ಕಿಶೋರ ಎಂಬ ವಿದ್ಯಾರ್ಥಿ ಆ.20ರಂದು ನಾಪತ್ತೆಯಾಗಿದ್ದನು. ಜು.27ರಂದು ಪಾಂಡವಪುರ ತಾಲೂಕಿನ ಹಿರೇಮರಳ್ಳಿ ಗ್ರಾಮದ ಮನೆಗೆ ಕರೆತಂದಿದ್ದ ಬಾಲಕನನ್ನು ಪಾಲಕರು ಆ.8ರಂದು ಶಾಲೆಗೆ ಕರೆದೊಯ್ದು ಬಿಟ್ಟಿದ್ದರು. ಇದು ಹಾಸ್ಟೆಲ್ ಸಿಸಿಟಿವಿಗಳಲ್ಲೂ ದಾಖಲಾಗಿತ್ತು. ಆದರೆ, ಆ ಬಳಿಕ ವಿದ್ಯಾರ್ಥಿ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದು, ವಾರ್ಡನ್ ಮತ್ತು ಸಿಬ್ಬಂದಿ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಗೌರಿ-ಗಣೇಶನ ಹಬ್ಬದ ಹಿನ್ನೆಲೆಯಲ್ಲಿ ಮತ್ತೆ ಮಗ ಕಿಶೋರನನ್ನು ಮನೆಗೆ ಕರೆದೊಯ್ಯಲು ಪಾಲಕರು ಶಾಲೆಗೆ ಬಂದಾಗ ಬಾಲಕ ಅಲ್ಲಿರಲಿಲ್ಲ.
ಈ ಬಗ್ಗೆ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್ ಮತ್ತು ಸಿಬ್ಬಂದಿಯನ್ನು ವಿಚಾರಿಸಿದಾಗ, ನಿಮ್ಮ ಮಗ ಶಾಲೆಗೆ ವಾಪಸ್ ಬಂದೇ ಇಲ್ಲ ಎಂದಿದ್ದರು. ಆದರೆ, ತಾವೇ ಮಗನನ್ನು ಶಾಲೆಗೆ ಬಿಟ್ಟು ಹೋಗಿದ್ದೇವೆ. ಬೇಕಿದ್ದರೆ ಶಾಲೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿ ಎಂದಿದ್ದರು. ಅದರಂತೆ ಪರಿಶೀಲಿಸಿದಾಗ ಕರೆ ತಂದು ಬಿಟ್ಟು ಹೊಗಿರುವ ದೃಶ್ಯಗಳು ಕಂಡುಬಂದಿದ್ದವು. ಆದರೆ, ಈತ ಶಾಲೆಯಿಂದ ಹೊರ ಹೋಗಿರುವ ದೃಶ್ಯಗಳು ಯಾವ ಸಿಸಿಟಿವಿಗಳಲ್ಲೂ ದಾಖಲಾಗಿರಲಿಲ್ಲ. ಇದರಿಂದ ಪಾಲಕರು ಇನ್ನಷ್ಟು ಗಾಬರಿಗೊಂಡರೆ, ಶಾಲೆಯ ಸಿಬ್ಬಂದಿ ತಬ್ಬಿಬ್ಬಾಗಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತಂದೆ ಈರೇಗೌಡ ಅವರು ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಏತನ್ಮಧ್ಯೆ, ಕಿಶೋರ್ ಬರೆದಿಟ್ಟಿದ್ದಾನೆ ಎನ್ನಲಾದ ಪತ್ರ ದೊರೆತಿದೆ. ‘ಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ, ಇದನ್ನು ಸಾಕಷ್ಟು ಸಲ ಹೇಳಲು ಪ್ರಯತ್ನಿಸಿದ್ದೇನೆ. ಅಪ್ಪ, ಚಿಕ್ಕಪ್ಪ ದಯವಿಟ್ಟು ನನ್ನನ್ನು ಹುಡುಕಬೇಡಿ ಎಂದು ಪತ್ರದಲ್ಲಿ ಬರೆಯಲಾಗಿದೆ’ ಎನ್ನಲಾಗಿದೆ. ಆದರೆ, ಈ ಪತ್ರವನ್ನು ನನ್ನ ಮಗ ಬರೆದಿಲ್ಲ. ಇಲ್ಲಿರುವ ಅಕ್ಷರಗಳು ನನ್ನ ಮಗನ ಬರೆದ ಅಕ್ಷರವಲ್ಲವೆಂದು ಪಾಲಕರು ತಿಳಿಸಿದ್ದಾರೆ.ಇತ್ತ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಂಶುಪಾಲರು ಮತ್ತು ವಾರ್ಡನ್ ನಿರ್ಲಕ್ಷೃದ ಬಗ್ಗೆ ಕ್ರಮ ವಹಿಸುವಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಪತ್ರ ಬರೆದು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
