ಬೆಂಗಳೂರು:ಮನೆಗೆಲಸಕ್ಕೆಂದು ಕೇಳಿಕೊಂಡು ಬರುವವರನ್ನು ಸೇರಿಸಿಕೊಳ್ಳುವ ಮುನ್ನ ಒಮ್ಮೆ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆರು ತಿಂಗಳಲ್ಲಿ 21 ಮನೆಗಳವು ಪ್ರಕರಣಗಳು ನಡೆದಿದ್ದು, ಎಲ್ಲ ಪ್ರಕರಣಗಳಲ್ಲೂ ಸಾಮ್ಯತೆಯೊಂದು ಕಂಡುಬಂದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಆರು ತಿಂಗಳಲ್ಲಿ ನಗರದಲ್ಲಿ ಒಟ್ಟು 21 ಮನೆಗಳವು ನಡೆದಿದ್ದು, ಪುಟ್ಟೇನಹಳ್ಳಿ, ಮಾಗಡಿರಸ್ತೆ, ವಿಜಯನಗರ, ಸದಾಶಿವನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳ ಆರೋಪಿಗಳು ನೇಪಾಳಿಗರು.
ಮನೆಗೆಲಸಕ್ಕೆಂದು ಅಥವಾ ಭದ್ರತಾ ಸಿಬ್ಬಂದಿಯ ಕೆಲಕ್ಕೆಂದು ಬರುವ ನೇಪಾಳೀಯರು ಬಳಿಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣವನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಇಂಥ ಪ್ರಕರಣಗಳು 6 ತಿಂಗಳಿನಿಂದ ದಾಖಲಾಗುತ್ತಿದ್ದರೂ ಒಂದೇ ಒಂದು ಕೇಸ್​ನಲ್ಲೂ ಆರೋಪಿಗಳ ಪತ್ತೆಯಾಗಿಲ್ಲ.
ಆರೋಪಿಗಳ ಪತ್ತೆಗಾಗಿ ಪೊಲೀಸರು ನೇಪಾಳಕ್ಕೆ ಹೋಗಿ ಹುಡುಕಾಡಿದ್ದರೂ ಪ್ರಯೋಜನವಾಗಿಲ್ಲ. ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಒಂದೊಂದು ತಂಡದಂತೆ ಪೊಲೀಸರು ನೇಪಾಳಕ್ಕೆ ಹೋಗಿ ಹುಡುಕಾಡಿದರೂ ಬರಿಗೈಯಲ್ಲೇ ವಾಪಸ್ ಬರುವಂತಾಗಿದೆ.
ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾಯ್ತು 90 ಜನರಿದ್ದ ಬಸ್​!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 5 =
Remember me
