ಬೆಂಗಳೂರು:ಒಂದು ವಾರದ ಹಿಂದಷ್ಟೇ ಇವರು ಜೈಲ್​ನಿಂದ ಹೊರಗೆ ಬಂದಿದ್ದರು. ಆದರೂ ಇವರು ತಮ್ಮ ಚಾಳಿ ಬಿಡದೆ ಮತ್ತದೇ ದುಷ್ಕೃತ್ಯವೆಸಗಿ ಸಿಕ್ಕಿಹಾಕಿಕೊಂಡಿದ್ದು, ಪುನಃ ಜೈಲುಪಾಲಾಗಿದ್ದಾರೆ. ಬೆಂಗಳೂರಿನ ಹೆಣ್ಣೂರು ಪೊಲೀಸರು ಇವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕುಖ್ಯಾತ ಮನೆಗಳ್ಳರಾದ ಫಯಾಜ್ ಮತ್ತು ಪ್ರಸಾದ್ ಬಂಧಿತರು. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಅರವತ್ತು ಸಲ ಮನೆಗಳ್ಳತನ ಮಾಡಿದ್ದ ಇವರು ಕೋಲಾರದಲ್ಲಿ ನ್ಯಾಯಾಧೀಶರ ನಿವಾಸದಲ್ಲೂ ಕಳ್ಳತನ ಮಾಡಿದ್ದರು. ಮಾತ್ರವಲ್ಲ ಶಿವಮೊಗ್ಗದಲ್ಲಿ ಎಟಿಎಂ ದೋಚಲು ಯತ್ನಿಸಿದ್ದರು.
ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಪರಾರಿಯಾಗುತ್ತಿದ್ದ ಇವರು, ಎಲ್ಲಿಯೂ ನೆಲೆ ನಿಲ್ಲುತ್ತಿರಲಿಲ್ಲ. ಕಳ್ಳತನ ಮಾಡಿದ ಬಳಿಕ ಬೇರೆ ಬೇರೆ ಊರುಗಳಿಗೆ ಹೋಗಿ ಮಜಾ ಉಡಾಯಿಸುತ್ತಿದ್ದರು. ಇದುವರೆಗೆ ಹಲವಾರು ಬಾರಿ ಆರೋಪಿಗಳು ಬಂಧಿತರಾಗಿದ್ದು, ಕಳೆದ ಒಂದು ವಾರದಲ್ಲಿ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಗಳು ಮತ್ತೆ ಕಳ್ಳತನ ಮಾಡಿ, ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ ಆರೋಪಿಗಳನ್ನು ಬಂಧಿಸಿ 660 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿರುವ ಪೊಲೀಸರು ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿಯಿಂದಲೇ ಜೀವನಾಂಶ ಕೇಳಿದ ಭೂಪ: ಮುಂದೇನಾಯ್ತು?

1 ನಿಮಿಷಕ್ಕೆ 69 ತೆಂಗಿನಕಾಯಿ ಒಡೆದ ಸಾಹಸಿ; 12,008 ಕಾಯಿಗಳನ್ನು ಒಡೆದು ಬಳಿಕ ಶಿವತಾಂಡವ ನೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
