ಬೆಂಗಳೂರು:ಗೃಹಿಣಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿದ್ಯಾರಣ್ಯಪುರದ ರಾಮಚಂದ್ರಾಪುರದಲ್ಲಿ ನಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವನಜಾಕ್ಷಿ (25) ಮೃತ ಗೃಹಿಣಿ. ಪತ್ನಿಯನ್ನು ಹತ್ಯೆಗೈದು ಪತಿ ಎಸ್ಕೇಪ್ ಆಗಿದ್ದಾನೆಂದು ವನಜಾಕ್ಷಿ ಪೋಷಕರು ಆರೋಪಿಸಿದ್ದಾರೆ. ವನಜಾಕ್ಷಿಗೆ 8 ತಿಂಗಳ ಹಿಂದೆ ನಾಗರಾಜ್ ಎಂಬುವರ ಜತೆ ವಿವಾಹ ಮಾಡಿಕೊಡಲಾಗಿತ್ತು.
ನವದಂಪತಿ ಮೂಲತಃ ಮಂಡ್ಯದನಾಗಮಂಗಲದವರು.ಇಬ್ಬರು ಬೆಂಗಳೂರಿನ ರಾಮಚಂದ್ರಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಬೇಕರಿ ಬಿಸಿನೆಸ್​ನಲ್ಲಿ ನಷ್ಟವಾಗಿತ್ತು. ಹೀಗಾಗಿ ಪತ್ನಿಗೆ ಹಣ ತರುವಂತೆ ನಾಗರಾಜ್​ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿರಿ:ರಸ್ತೆಯಲ್ಲಿ ಬಿದ್ದಿದ್ದ 500 ರೂ. ನೋಟಿನ ಆಸೆ ಬಿದ್ದ ಮೈಸೂರಿನ ವ್ಯಕ್ತಿಗೆ ಕ್ಷಣಾರ್ಧದಲ್ಲೇ ಕಾದಿತ್ತು ಶಾಕ್​!
ತವರು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ವನಜಾಕ್ಷಿ ಹೇಳಿದ್ದಳಂತೆ. ಹಣದ ವಿಚಾರವಾಗಿಯೇ ಪತಿ-ಪತ್ನಿ ಮಧ್ಯೆ ಕಳೆದ 6 ತಿಂಗಳಿಂದ ಕಿತ್ತಾಟ ನಡೆದಿತ್ತು. ಈ ಮಧ್ಯೆ ನಿನ್ನೆ ವನಜಾಕ್ಷಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿಯೇ ಕೊಲೆಗೈದು ನೇಣು ಹಾಕಿಕೊಂಡಿರುವ ರೀತಿಯಲ್ಲಿ ಬಿಂಬಿಸಿದ್ದಾನೆಂದು ವನಜಾಕ್ಷಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಪತಿ ನಾಗರಾಜ್ ಎಸ್ಕೇಪ್ ಆಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

ಅಯ್ಯೋ… ಇದು ವಿಕ್ರಮ- ಬೇತಾಳ ಅಲ್ರಪ್ಪ… ಹಾಗಿದ್ರೆ ಇದೇನು ಅಂತೀರಾ? ಇಲ್ಲಿದೆ ನೋಡಿ ವಿವರ…

ಬ್ಯಾಂಕ್​ನಲ್ಲಿ ಕೆಲಸ ಇದೆಯೆ? ಇಂದೇ ಮುಗಿಸಿ… ಇಲ್ಲದಿದ್ದರೆ ನಾಲ್ಕು ದಿನ ಪರದಾಡಬೇಕಾಗುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + fourteen =
Remember me
