ಮಂಡ್ಯ:ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾಳೆ ಎಂದು ಪತಿ ಹೇಳಿಕೆ ನೀಡಿದ್ದಾನೆ. ಆದರೆ, ಗೃಹಿಣಿಯ ಪಾಲಕರು ಕೊಲೆ ಆರೋಪ ಮಾಡಿದ್ದು, ಈ ಪ್ರಕರಣ ಇದೀಗ ತನಿಖೆಯ ಹಾದಿ ಹಿಡಿದಿದೆ.
ಮೃತಳನ್ನು ಮೈಸೂರು ಮೂಲದ ದರ್ಶಿನಿ (21) ಎಂದು ಗುರುತಿಸಲಾಗಿದೆ. ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಕೆಆರ್.ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ದರ್ಶಿನಿ ಮನೆಯವರಿಗೆ ಪತಿ ಸೂರ್ಯ ಮಾಹಿತಿ ನೀಡಿದ್ದ. ಅವರು ಆಸ್ಪತ್ರೆಗೆ ಆಗಮಿಸುವಷ್ಟರಲ್ಲಿ ದರ್ಶಿನಿ ಮೃತಪಟ್ಟಿದ್ದಳು.
ಇದನ್ನೂ ಓದಿ:ತಂಗಿ ಕಾಣೆಯಾಗಿದ್ದಾಳೆಂದು ರಾತ್ರಿ ದೂರು ನೀಡಿದ ಅಕ್ಕ: ಮುಂಜಾನೆ ಎದ್ದು ನೋಡಿದಾಗ ಕಾದಿತ್ತು ಬಿಗ್​ ಶಾಕ್​

ಗಂಡ ಸೂರ್ಯನೇ ಕೊಲೆ ಮಾಡಿದ್ದಾನೆ ಎಂದು ದರ್ಶಿನಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯನ ಜತೆ ದರ್ಶಿನಿಗೆ ವಿವಾಹವಾಗಿತ್ತು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆಯೂ ದರ್ಶಿನಿಯನ್ನು ಸೂರ್ಯ ಮದುವೆಯಾಗಿದ್ದ.

ಮದುವೆಯಾದ 4 ತಿಂಗಳಿಂದ ಸೂರ್ಯ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ ಮತ್ತು ವರದಕ್ಷಿಣೆ ತರುವಂತೆ ಹಿಂಸೆ ಮಾಡುತ್ತಿದ್ದ. ಇದೀಗ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ. ಬದುಕಿ ಬಾಳಬೇಕಿದ್ದ ನಮ್ಮ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಮತ್ತು ಆತನ ಕುಟುಂಬಸ್ಥರನ್ನ ಬಂಧಿಸಬೇಕು ಎಂದು ದರ್ಶಿನಿಯ ತಾಯಿ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ರೀಲ್ಸ್​ ಗೀಳಿಗೆ ಯುವತಿ ಬಲಿ! ಗಂಡನಿಂದಲೇ ನಡೆಯಿತು ಘೋರ ಕೃತ್ಯ, ಅಳಿಯನಿಗೆ ಸಾಥ್​ ಕೊಟ್ಟ ಮಾವ

ಈ ಘಟನೆ ಸಂಬಂಧ ದರ್ಶಿನಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕೆಆರ್​ಎಸ್ ಠಾಣೆಗೆ ದರ್ಶಿನಿ ಕುಟುಂಬಸ್ಥರು ದೂರು ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
11 ವರ್ಷಗಳ ಹಿಂದಿನ ಪ್ರಕರಣ…ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ: ಸರ್ಕಾರದ ವಿರುದ್ಧ ಕೆಂಪಣ್ಣ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
