ಬೆಳಗಾವಿ:ಗಂಡನ ಆತ್ಮಹತ್ಯೆ ಸುದ್ದಿ ಕೇಳಿ ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯ ಬೈಲಹೊಂಗಲ ಪಟ್ಟಣದ ಚೆನ್ನಮ್ಮ ಕ್ರಾಸ್​ನಲ್ಲಿ ನಡೆದಿದೆ.
ಪತಿ ಗುರುನಾಥ ನಾರಾಯಣ ತಾವರೆ (45) ಹಾಗೂ ಪತ್ನಿ ಮೀನಾಕ್ಷಿ ನಾರಾಯಣ ತಾವರೆ ಮೃತ ದುರ್ದೈವಿಗಳು. ಖಾನಾಪೂರ ತಾಲ್ಲೂಕಿನ ಚಿಕ್ಕಮುನವಳ್ಳಿ ಮೂಲದ ಗುರುನಾಥ್, ಅಮಟೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇದನ್ನೂ ಓದಿ:ಬಳ್ಳಾರಿಯಿಂದ ಚಿತ್ರದುರ್ಗಕ್ಕೆ ನಡೆದೇ ಹೊರಟಿದ್ದಾರೆ 75 ವರ್ಷದ ವೃದ್ಧ
13 ವರ್ಷಗಳ ಹಿಂದೆ ಇಬ್ಬರ ವಿವಾಹ ಆಗಿತ್ತು. ದಂಪತಿ ನಡುವೆ ಪದೇಪದೆ ಕೌಟುಂಬಿಕ ಕಲಹವೂ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದರು. ಪರಸ್ಪರ ಹೊಂದಾಣಿಕೆ ಜೀವನ ಸಾಗಿಸುವುದಾಗಿ ನ್ಯಾಯಾಲಯದಲ್ಲಿ ತಿಳಿಸಿ ವಾಪಸ್ ಬಂದಿದ್ದರು. ಬಳಿಕ ಇಬ್ಬರ ನಡುವೆ ಮತ್ತೆ ಜಗಳ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ಗುರುನಾಥ ಬೈಲಹೊಂಗಲ ಪಟ್ಟಣದ ಹೊರ ವಲಯದ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದನ್ನೂ ಓದಿ:ಅದೊಂದು ಆ್ಯಕ್ಸಿಡೆಂಟ್​​ನಿಂದ ಆಕೆಯ ಮುಖವೇ ಬದಲಾಗಿ ಹೋಯ್ತು …
ಇತ್ತ ಗಂಡನ ಸಾವಿನ ಸುದ್ದಿ ತಿಳಿದ ಪತ್ನಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಕೆರೆಯಲ್ಲಿ ಸಿಕ್ಕಿತು ಅರ್ಧ ಸುಟ್ಟ ಶವ: ಸತ್ಯದ ಬೆನ್ನಟ್ಟಿದ ಪೊಲೀಸರೇ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + sixteen =
Remember me
