ಬೆಂಗಳೂರು:ಹೌಸಿಂಗ್ ಬೋರ್ಡ್ ಸೈಟು ಕೊಡಿಸುವುದಾಗಿ ಸೆಲೆಬ್ರಿಟಿಗಳನ್ನು ನಂಬಿಸಿ ಪಂಗನಾಮ ಹಾಕಿದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಹರಿಪ್ರಸಾದ್ ಅಲಿಯಾಸ್ ಶ್ರೀಧರ್ ಬಂಧಿತ ಆರೋಪಿ. ಕನ್ನಡದ ಸಿನಿಮಾ ನಟ ಶರತ್ ಲೋಹಿತಾಶ್ವ ಮತ್ತು ಪ್ರಖ್ಯಾತ ಸಾಹಸ ನಿರ್ದೇಶಕ ರವಿವರ್ಮಗೆ ಶ್ರೀಧರ್​ ವಂಚನೆ ಮಾಡಿದ್ದಾರೆ.
ಇದನ್ನೂ ಓದಿ:ಗ್ರಾಪಂ ಚುನಾವಣೆ ದ್ವೇಷಕ್ಕೆ ರಾತ್ರೋರಾತ್ರಿ ಬಲಿಯಾಯ್ತು ಲಕ್ಷಾಂತರ ರೂ. ಮೌಲ್ಯದ ಮೆಣಸಿನಕಾಯಿ!
ಹೌಸಿಂಗ್ ಬೋರ್ಡ್​ನಲ್ಲಿ ನಾನೊಬ್ಬ ದೊಡ್ಡ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಶ್ರೀಧರ್, ಸೈಟ್ ಕೊಡಿಸುವುದಾಗಿ ನಕಲಿ‌ ಫಾರಂ ಭರ್ತಿಗೊಳಿಸಿಕೊಂಡಿದ್ದ. ಅಪ್ಲಿಕೇಶನ್ ಶುಲ್ಕವೆಂದು 1.80 ಲಕ್ಷ ರೂ. ಹಣವನ್ನ ಕೇಳಿದ್ದ. ಬಳಿಕ ನಾನೇ ಶುಲ್ಕ ಪಾವತಿಸಿರುತ್ತೇನೆ ನಂತರ ಹಣ ಕೊಡಿ ಎಂದು ಹೇಳಿದ್ದ. ತಮ್ಮ ಹೆಸರಿನಲ್ಲಿ ಹಣ ಪಾವತಿಸಲಾಗಿದೆ ಎಂದು ಮೆಸೆಜ್ ಸಹ ತೋರಿಸಿದ್ದ. ಮೆಸೆಜ್ ನೋಡಿ ವಂಚಕ ಶ್ರೀಧರ್​ಗೆ ಹಣ ನೀಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಮೊದಲ ಕಂತು ಎಂದು 6.50 ಲಕ್ಷ ಹಣ ಕೇಳಿದ್ದ. ಈ ಬಾರಿಯು ತಾನೇ ಪಾವತಿಸಿದ್ದೇನೆ ಎಂದು ನಕಲಿ ಮೆಸೆಜ್ ಕಳಿಸಿ ನಂತರ ಹಣ ಪಡೆದಿದ್ದ. ಅನುಮಾನಗೊಂಡು ಹೌಸಿಂಗ್ ಬೋರ್ಡ್​ನಲ್ಲಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಶ್ರೀಧರ್​ ವಂಚನೆ ಇದೇ ಮೊದಲಲ್ಲ. ಸಿ.ಕೆ‌. ಅಚ್ಚುಕಟ್ಟು, ಮಡಿವಾಳ, ಕುಮಾರಸ್ವಾಮಿ ಲೇಔಟ್ ಹಾಗೂ ವಿಧಾನಸೌಧದಲ್ಲೂ ಈತನ ವಿರುದ್ಧ ಪ್ರಕರಣಗಳಿವೆ. ಕೆಲ ಪ್ರಕರಣಗಳಲ್ಲಿ‌ ಜಾಮೀನು ಪಡೆದಿದ್ದ. ಖ್ಯಾತನಾಮರನ್ನೇ ಟಾರ್ಗೆಟ್ ಮಾಡುತ್ತಿದ್ದ.
ಇದನ್ನೂ ಓದಿ:ಕಣ್ಣುಗಳನ್ನು ಕಳೆದುಕೊಂಡ ಸಿಂಹದ ಮರಿಯ ನೋವಿನ ಕತೆ ಕೇಳಿದ್ರೆ ಕಣ್ಣೀರಿನ ಜತೆ ಕೋಪವು ಬರುತ್ತೆ!
ನಟ ಶರತ್ ಲೋಹಿತಾಶ್ವಗೆ 56 ಲಕ್ಷ ರೂ. ಹಾಗೂ ಸಾಹಸ ನಿರ್ದೇಶಕ ರವಿವರ್ಮಾಗೆ 16 ಲಕ್ಷ ರೂ. ವಂಚಿಸಿದ್ದಾನೆ. ಆನಂದ್ ಗುರೂಜಿ, ಕೆಲ ವೈದ್ಯರು, ವಕೀಲರಿಗೂ ಮೋಸ ಮಾಡಿದ್ದಾನೆ. ಸೈಟ್ ಆಸೆಗೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಾರೆ.
ಇನ್ನು ವಂಚಿಸಿದ ಹಣದಲ್ಲೇ ಶ್ರೀಧರ್ ಬಿಂದಾಸ್ ಲೈಫ್ ನಡೆಸುತ್ತಿದ್ದ. ಸ್ಟಾರ್ ಹೊಟೇಲ್​ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದ. ಅಲ್ಲದೆ, ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದ. ನಟ ಗಣೇಶ್ ಸಹೋದರನ ಜತೆ ಸಿನಿಮಾ ನಿರ್ಮಿಸಲು‌ ಹೋಗಿ ಅರ್ಧಕ್ಕೆ ಕೈ ಎತ್ತಿದ್ದ. ತಾನೇ ನಿರ್ದೇಶಿಸಿ, ನಿರ್ಮಿಸಲು ಹೋದ ಕಲಿಯುಗದ ಕಂಸ ಸಿನಿಮಾವೂ ಅರ್ಧಕ್ಕೆ ನಿಂತಿತ್ತು. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಪ್ರೀತಿಗೆ ಅಡ್ಡಬಂದನೆಂದು ಗುಂಡು ಹಾರಿಸಿದ ಕಿರಾತಕ ಪೊಲೀಸ್​ ಬಲೆಗೆ

ಪತ್ನಿಗೆ ತಿಳಿಯದಂತೆ ಆರು ತಿಂಗಳ ಮಗು ಕದ್ದೊಯ್ದು ಮಾರಾಟ ಮಾಡಿದ ಅಪ್ಪ!

ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 2 =
Remember me
