ಬೆಂಗಳೂರು:ರಾಜ್ಯದ 10 ಮಹಾನಗರ ಪಾಲಿಕೆಗಳ ಪೌರ ಕಾರ್ವಿುಕರಿಗೆ ಸೂರು ಒದಗಿಸಲು ಸರ್ಕಾರ ತೀರ್ವನಿಸಿದ್ದು, ತಲಾ 7.50 ಲಕ್ಷ ರೂ. ವೆಚ್ಚದಲ್ಲಿ 4,300 ಮನೆಗಳನ್ನು ನಿರ್ವಿುಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಇಲಾಖೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಪೌರ ಕಾರ್ವಿುಕರಿಗೆ ವಸತಿ ಸವಲತ್ತು ಕಲ್ಪಿಸುವ ‘ಗೃಹ ಭಾಗ್ಯ’ ಯೋಜನೆಯ ಪ್ರಾರಂಭಿಕ ಹಂತವಿದು. ಪೌರ ಕಾರ್ವಿುಕರಿಗೆ ಮನೆ ನಿರ್ವಿುಸಿಕೊಡಲು ನಗರಪಾಲಿಕೆಗೆ ಸೇರಿದ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಗೆ ಸರ್ಕಾರ ಸಿದ್ಧವಿದೆ ಎಂದರು.
ಕುಡಿಯುವ ನೀರು ಪೂರೈಕೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನಗರೋತ್ಥಾನ ಅನುದಾನ ಬಳಕೆ, ಶೌಚಗೃಹ ನಿರ್ವಣ, ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕ್ರಮ ಸೇರಿ ಇಲಾಖೆ ವಿವಿಧ ಕೆಲಸಗಳ ಪ್ರಗತಿ ಪರಿಶೀಲಿಸಲಾಗಿದ್ದು, ಶೌಚಗೃಹ ನಿರ್ವಣದ ಗುರಿ 2-3 ತಿಂಗಳೊಳಗೆ ಸಾಧಿಸಬೇಕು. ಇಂದಿರಾ ಕ್ಯಾಂಟೀನ್​ನ ಆಹಾರದ ಗುಣಮಟ್ಟ ಹಾಗೂ ಉತ್ತಮ ನಿರ್ವಹಣೆ ಕಾಪಾಡಬೇಕು ಎಂಬ ಸೂಚನೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಘನತ್ಯಾಜ್ಯ ವಿಲೇವಾರಿಗೆ ಹಲವು ಕಂಪನಿಗಳು ಆಸಕ್ತಿ ವಹಿಸಿ ಮುಂದೆ ಬರುತ್ತಿದ್ದು, ಪೂರಕ ಸವಲತ್ತು ಒದಗಿಸುವುದರ ಜತೆಗೆ ಜನಪ್ರತಿನಿಧಿಗಳು ಹಾಗೂ ಜನರ ಸಹಕಾರವೂ ಮುಖ್ಯವಾಗಿದೆ. 10 ಮಹಾ ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯ ಗಳನ್ನು ಪರಿಶೀಲಿಸಲೆಂದು ಫೆ.27ಕ್ಕೆ ತುಮಕೂರು, 28ಕ್ಕೆ ಮಂಗಳೂರು ಮತ್ತು ಮಾರ್ಚ್ 7ಕ್ಕೆ ಬೆಳಗಾವಿಗೆ ಭೇಟಿ ನೀಡುವೆ ಎಂದರು,.
ನಿರಂತರ ನೀರು ಪೂರೈಕೆಗೆ ಕ್ರಮ
ಹತ್ತು ನಗರ ಪಾಲಿಕೆಗಳ ವ್ಯಾಪ್ತಿ ನಿವಾಸಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲಾಗಿದೆ. ‘ಅಮೃತ್ ಯೋಜನೆ’ಯಲ್ಲಿ ವಿಶ್ವ ಬ್ಯಾಂಕ್​ನ 4,300 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರ ಪಾಲಿಕೆ ನಿವಾಸಿಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಎಲ್ಲ ನಗರಪಾಲಿಕೆ ನಿವಾಸಿಗಳಿಗೆ ದಿನದ 24 ತಾಸು ಕುಡಿಯುವ ನೀರು ಪೂರೈಕೆಗೆ ಸರ್ಕಾರ ಬದ್ಧವಾಗಿದೆ ಎಂದು ಭೈರತಿ ಬಸವರಾಜು ತಿಳಿಸಿದರು. ನಗರೋತ್ಥಾನ ಯೋಜನೆಯಲ್ಲಿ ಟೆಂಡರ್ ಕರೆದರೂ ನಿರಾಸಕ್ತಿ, ಕಾಮಗಾರಿಗಳ ಬದಲಾವಣೆ ಇತ್ಯಾದಿ ಕಾರಣಗಳಿಗೆ ಅನುಷ್ಠಾನ ಮಂದಗತಿಯಲ್ಲಿದೆ. ಬೇರೆ ಕಾಮಗಾರಿಗಳಿಗೆ ಸರ್ಕಾರದ ಅನುಮತಿ ಪಡೆದು ಕಾಮಗಾರಿ ಚುರುಕುಗೊಳಿಸಲು ಯೋಚಿಸಲಾಗಿದೆ. ಸದ್ಯಕ್ಕೆ ಏಳು ನಗರ ಪಾಲಿಕೆಗಳು ‘ಸ್ಮಾರ್ಟ್ ಸಿಟಿ’ ಯೋಜನೆಗೆ ಒಳಪಟ್ಟಿದ್ದು, ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸಲು ತಿಳಿಸಲಾಗಿದೆ ಎಂದರು. ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿರುವ ಕಾರಣ ಇನ್ನಷ್ಟೇ ವಸ್ತುಸ್ಥಿತಿ ತಿಳಿಯಬೇಕಾಗಿದೆ. ಬೆಂಗಳೂರು ಸೇರಿ ಎಲ್ಲ ಮಹಾ ನಗರಪಾಲಿಕೆಗಳು ಈ ಯೋಜನೆಗೆ ಸೇರಬೇಕು ಎನ್ನುವುದು ನನ್ನ ಅಪೇಕ್ಷೆ ಎಂದು ಸಚಿವರು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + four =
Remember me
