ಬಾಗಲಕೋಟೆ: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳ ಕಾರು ಮುಧೋಳ ನಗರದಲ್ಲಿ ಪತ್ತೆಯಾಗಿದೆ.
ಈಕೆಯ ಕಾರು ಇಲ್ಲಿನ ಹಿಂದು ಕಾರ್ಯಕರ್ತ ಕಿರಣ್​ ಗಣಪ್ಪಗೋಳ ಎಂಬುವರ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸೊಲ್ಲಾಪುರದಲ್ಲಿದ್ದ KA-20 ME 7253 ನಂಬರಿನ ಈ ಕಾರನ್ನು ಕಿರಣ್​ ಸೆ. 9ರಂದು ತನ್ನೂರಿಗೆ ತಂದಿಟ್ಟುಕೊಂಡಿದ್ದ.
ಇದೇ ಕಾರಣಕ್ಕೆ ಈತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಚೈತ್ರಾ ಕಾರು ಮುಧೋಳದಲ್ಲಿ ಇರಲು ಕಾರಣ ಏನು ಎಂಬುದನ್ನು ಈತ ಬಾಯಿಬಿಟ್ಟಿದ್ದಾನೆ. ಚೈತ್ರಾ ಪ್ರಕರಣದಲ್ಲಿ ಇಂದು ನನ್ನ ಹೆಸರು ಬರುತ್ತಿದೆ. ಆದರೆ, ಚೈತ್ರಾ ಬಂಧನವಾಗುವ ಮೊದಲೇ ನಾನು ಕಾರನ್ನು ತಂದಿರಿಸಿಕೊಂಡಿದ್ದೆ. ಅದು ಶ್ರೀಕಾಂತ ಎನ್ನುವವರು ಫೋನ್ ಮಾಡಿ ಹೇಳಿದ್ದರಿಂದ ಕಾರು ತೆಗೆದುಕೊಂಡು ಬಂದಿದ್ದೆ ಎಂದು ಹೇಳಿದ್ದಾನೆ.
ಇದಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯುವಂಥದ್ದು ಆಗಬಾರದು, ಚೈತ್ರಾ ಜೊತೆ ನಾನು ಯಾವುದೇ ದುಡ್ಡಿನ ವ್ಯವಹಾರ ಇಟ್ಟುಕೊಂಡಿಲ್ಲ. ಅವರು ಹಿಂದೂಪರ ವಾಗ್ಮಿಗಳು ಎನ್ನುವ ಕಾರಣ ಎರಡು ಸಲ ಅವರನ್ನು ಮುಧೋಳಕ್ಕೆ ಕರೆಸಿದ್ದು, ವೇದಿಕೆ ಹಂಚಿಕೊಂಡಿದ್ದೆವು. ಇಷ್ಟನ್ನು ಬಿಟ್ಟರೆ ಅವರ ಜೊತೆ ಯಾವುದೇ ವ್ಯವಹಾರ ಇಲ್ಲ ಎಂದು ಕಿರಣ್ ಹೇಳಿದ್ದಾನೆ.
ಕುಟುಂಬಕ್ಕೆ ಶಾಂತಿ-ಯಶಸ್ಸು ಬರುತ್ತೆ ಅಂತ ಹೇಳಿ ಮಹಿಳೆಯೊಬ್ಬಳ ಮೇಲೆ ಐವರಿಂದ ಮತ್ತೆ ಮತ್ತೆ Aತ್ಯಾಚಾರ!

ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
