ಬೆಂಗಳೂರು:ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕರೊನಾ ಸೋಂಕಿತನನ್ನು ಡಿ.ಜೆ. ಹಳ್ಳಿ ಪೊಲೀಸರು ಮತ್ತೆ ಬಂಧಿಸಿ ಆಸ್ಪತ್ರೆಗೆ ಹಾಕಿದ್ದಾರೆ.
30 ವರ್ಷದ ಆರೋಪಿ ಬುಧವಾರ ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಆಸ್ಪತ್ರೆಯಿಂದ ಪರಾರಿ ಯಾಗಿದ್ದ. ಕೊಲೆ ಯತ್ನ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಇರುವುದು ದೃಢಪಟ್ಟಿತ್ತು. ‘ಬಳಿಕ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯ 3ನೇ ಮಹಡಿಯಲ್ಲಿ ರುವ ಐಸೊಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ, ಬೆಳಗ್ಗೆ 11 ಗಂಟೆಗೆ ಸಿಬ್ಬಂದಿ ಕಣ್ತಪ್ಪಿಸಿ ಲಿಫ್ಟ್​ನಲ್ಲಿ ನೆಲಮಹಡಿಗೆ ಬಂದಿದ್ದ. ಅಲ್ಲಿಂದ ಕಾಂಪೌಂಡ್ ಜಿಗಿಯುವ ವೇಳೆ ಗಮನಿಸಿದ ಸೆಕ್ಯೂರಿಟಿ ಗಾರ್ಡ್, ನಿಂತುಕೊಳ್ಳುವಂತೆ ಸೂಚಿಸಿದಾಗ ಅವರ ಮೇಲೆ ಉಗಿಯಲು ಮುಂದಾಗಿದ್ದ. ಇದರಿಂದ ಆತಂಕಗೊಂಡು ಹಿಂದೆ ಸರಿದಿದ್ದರು.
ಡಿ.ಜೆ. ಹಳ್ಳಿಯಲ್ಲೇ ಸಿಕ್ಕಿಬಿದ್ದ:ಸಂಜೆ 6 ಗಂಟೆಗೆ ಡಿ.ಜೆ. ಹಳ್ಳಿ ಸಮೀಪದ ಪುಷ್ಪಾಂಜಲಿ ಚಿತ್ರಮಂದಿರ ಬಳಿ ಓಡಾಡುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆರೋಪಿ ಪತ್ನಿಯ ಸಂಬಂಧಿಕನನ್ನು ಕರೆದುಕೊಂಡು ಹೋದ ಪೊಲೀಸರು, ಸಹಕರಿಸಿ ಚಿಕಿತ್ಸೆ ಪಡೆದರೆ ಒಳಿತು ಎಂದು ಬುದ್ಧಿವಾದ ಹೇಳಿಸಿದರು. ನಂತರ ಆರೋಪಿಯೇ ಆಂಬುಲೆನ್ಸ್ ನೊಳಗೆ ಹೋಗಿ ಕುಳಿತುಕೊಂಡಿದ್ದಾನೆ. ವಿಕ್ಟೋರಿಯಾಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರಿಗೆ ಆತಂಕ:ಈತ ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರ ಬಂದ ಬಳಿಕ ಎಲ್ಲೆಲ್ಲಿ ಸುತ್ತಾಡಿದ್ದಾನೆ ಎಂಬುದು ತಿಳಿದುಬಂದಿಲ್ಲ. ಇದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಬಂಧನ
ಅಡುಗೆ ಕೆಲಸ ಮಾಡುತ್ತಿದ್ದ ಆರೋಪಿ, ಜೂ. 18ರ ಬೆಳಗ್ಗೆ 11.30ರಲ್ಲಿ ಡಿ.ಜೆ. ಹಳ್ಳಿ ಶಾದಾಬ್​ನಗರದಲ್ಲಿದ್ದ ಬಿಹಾರಿ ಮೂಲದ ಕೂಲಿ ಕಾರ್ವಿುಕರ ಬಳಿ ಮೊಬೈಲ್ ಕೊಡುವಂತೆ ಕೇಳಿದ್ದ. ಮೊಬೈಲ್ ಕೊಡಲು ನಿರಾಕರಿಸಿದಾಗ ಚೂರಿಯಿಂದ ಕಾರ್ವಿುಕನ ಮೇಲೆ ಹಲ್ಲೆ ನಡೆಸಿದ್ದ. ಇದನ್ನು ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯ ಹೊಟ್ಟೆಗೆ ಅದೇ ಚೂರಿಯಿಂದ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದ. ಜೂ.19ರಂದು ಆತನನ್ನು ಪೊಲೀಸರು ಬಂಧಿಸಿದ್ದರು.
4 ತಿಂಗಳ ಬಳಿಕ ಕಾಲುವೆಯಲ್ಲಿ ಪತ್ತೆಯಾದ ಕಾರನ್ನು ಹೊರತೆಗೆದ ಪೊಲೀಸರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
