ಬೆಂಗಳೂರು:ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ಸೋಶಿಯಲ್​​ ಮೀಡಿಯಾದಲ್ಲಿ ಈ ಫೋಟೋ ತೆಗೆದಿದ್ದು ಯಾರು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಹೇಗಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ದರ್ಶನ್ ಅವರು ಜೈಲಿನಲ್ಲಿ ಆರಾಮಾಗಿ ಇದ್ದಾರೆ ಅನ್ನೋ ಒಂದು ಫೋಟೋ ಇದೀಗ ವೈರಲ್ ಆಗಿದೆ.
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕುಳಿತು ಬೆಂಗಳೂರಿನ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಕುಳಿತುಕೊಂಡು ದರ್ಶನ್ ಸಿಗರೇಟ್‌ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.ಪರಪ್ಪನ ಅಗ್ರಹಾರದ ಸ್ಪೆಷಲ್​ ಬ್ಯಾರಕ್​ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.
ಪ್ಲಾಸ್ಟಿಕ್‌ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್‌, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದಾನೆ. ದರ್ಶನ್‌ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.
ಫೋಟೋ ಲೀಕ್ ಆಗಿದ್ದು ಹೇಗೆ?:ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ. ವೇಲು ಅನ್ನುವ ಖೈದಿ ಈ ಫೋಟೋವನ್ನು  ತೆಗೆದಿದ್ದು, ತನ್ನ ಹೆಂಡತಿಗೆ ಆತ ಜೈಲಿನಿಂದ ಫೊಟೋ ಕಳುಹಿಸಿದ್ದ. ಈಗ ಅದು ಹೊರಬಂದಿದೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಸ್ಪಷ್ಟವಾದ ಮಾಹಿತಿ ಇಲ್ಲ.
ಜೈಲಿನಲ್ಲಿ ನಿಯಮಗಳನ್ನು ಮೀರಿ ಖೈದಿಗಳಿಗೆ ಮದ್ಯ ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ  ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ ದರ್ಶನ್‌ ಈ ಸುದ್ದಿ.
ಇದೀಗ ಕೊಲೆ ಆರೋಪಿ ದರ್ಶನ್​ಗೆ ಜೈಲಲ್ಲಿ ಸಿಗರೇಟ್ ಸಿಕ್ಕಿದ್ದು ಹೇಗೆ..? ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಜೈಲಲ್ಲೂ ಕೊಲೆ ಆರೋಪಿಯ ಐಷಾರಾಮಿ ಲೈಫ್ ಇರುತ್ತಾ ಎಂಬ ಪ್ರಶ್ನೆಗಳು ಎದ್ದಿದೆ.
65 ದಿನಗಳಿಂದ ಜೈಲಿನಲ್ಲಿರುವ ದರ್ಶನ್ ಮೊದಲ​ ಫೋಟೋ ವೈರಲ್​​; ಒಂದು ಕೈಯಲ್ಲಿ ಕಾಫಿ ಮಗ್ಗು.. ಮತ್ತೊಂದು ಕೈಯಲ್ಲಿ ಸಿಗರೇಟ್

ಐಶ್ವರ್ಯಾ ರೈಗೆ ವಿಚ್ಛೇದನ ಘೋಷಿಸಿದ ಅಭಿಷೇಕ್! ಅಸಲಿ ಸತ್ಯ ಹೊರಬಿತ್ತು…

ಜನಪ್ರಿಯ ರೆಸ್ಟೋರೆಂಟ್ ಬಂದ್; ಉದ್ಯೋಗ ಕಳೆದುಕೊಂಡ 700+ ನೌಕರರು ಕಣ್ಣೀರಿಟ್ಟರು..
ಜನಪ್ರಿಯ ರೆಸ್ಟೋರೆಂಟ್ ಬಂದ್; ಉದ್ಯೋಗ ಕಳೆದುಕೊಂಡ 700+ ನೌಕರರು ಕಣ್ಣೀರಿಟ್ಟರು..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four + twelve =
Remember me
