ಬೆಂಗಳೂರು: ಆಡಳಿತ ವಿಭಾಗದ ಐಜಿಪಿ ಸೀಮಂತ್​ಕುಮಾರ್ ಸಿಂಗ್ ಮೊಬೈಲ್ ನಂಬರ್ ವೈರಲ್ ಆಗಿದ್ದು, ಹೆಲ್ಪ್​ಲೈನ್ ನಂಬರ್ ಎಂದುಕೊಂಡು ಇದುವರೆಗೆ 2 ಸಾವಿರಕ್ಕೂ ಅಧಿಕ ಕಾರ್ವಿುಕರು ಕರೆ ಮಾಡಿ ಸಹಾಯಪಡೆದಿದ್ದಾರೆ.
ಸೀಮಂತ್​ಕುಮಾರ್ ಲಾಕ್​ಡೌನ್ ಸಂದರ್ಭದಲ್ಲಿ ನಗರದಲ್ಲಿದ್ದ ಕೆಲ ಕಾರ್ವಿುಕರಿಗೆ ಮೂಲಸೌಕರ್ಯ ಒದಗಿಸಿ ಸಹಾಯ ಮಾಡಿದ್ದರು. ಈ ಬಗ್ಗೆ ಬಿಹಾರ ಹಾಗೂ ಜಾರ್ಖಂಡ್​ನಲ್ಲಿ ಸುದ್ದಿ ಬಿತ್ತರವಾಗಿತ್ತು. ಅದರಲ್ಲಿ ಇವರ ವೈಯಕ್ತಿಕ ಮೊಬೈಲ್ ನಂಬರ್ ಪ್ರಕಟಿಸಲಾಗಿತ್ತು. ಅದನ್ನು ಗಮನಿಸಿದ ಆ ರಾಜ್ಯಗಳ ಜನ, ಕಾರ್ವಿುಕರ ಹೆಲ್ಪ್ ಲೈನ್ ಸಂಖ್ಯೆ ಎಂದು ಭಾವಿಸಿದ್ದರು.
ಕೆಲಸ ಅರಸಿ ಬೆಂಗಳೂರಿಗೆ ಬಂದು ಲಾಕ್​ಡೌನ್​ನಿಂದ ಊರಿಗೆ ಹಿಂದಿರುಗಲಾಗದೆ, ಆಹಾರವೂ ಇಲ್ಲದೆ ಒದ್ದಾಡುತ್ತಿದ್ದ ಕಾರ್ವಿುಕರಿಗೆ ಬಿಹಾರದಲ್ಲಿರುವ ಸಂಬಂಧಿಕರು ಕರೆ ಮಾಡಿ ಸುದ್ದಿಯಲ್ಲಿ ಬಿತ್ತರವಾದ ಸೀಮಂತ್​ಕುಮಾರ್ ನಂಬರ್ ನೀಡಿದ್ದರು. ಕಳೆದ 10 ದಿನಗಳಿಂದ ಸೀಮಂತ್ ಅವರ ಮೊಬೈಲ್​ಗೆ 2 ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ಕಾರ್ವಿುಕರ ಕರೆಗೆ ಸ್ಪಂದಿಸಿದ ಐಜಿಪಿ, ಪೊಲೀಸ್ ಸಿಬ್ಬಂದಿ ಹಾಗೂ ಇತರರೊಂದಿಗೆ ಸೇರಿ 5 ಸಾವಿರಕ್ಕೂ ಅಧಿಕ ಜನರಿಗೆ ಆಹಾರ, ಆಶ್ರಯ ಒದಗಿಸಿದ್ದಾರೆ. ಸಹಾಯ ಪಡೆದ ಕಾರ್ವಿುಕರು ಇತರ ಕಾರ್ವಿುಕರೊಂದಿಗೆ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡ ಪರಿಣಾಮ ಸೀಮಂತ್​ಕುಮಾರ್ ನಂಬರ್ ವೈರಲ್ ಆಗಿದ್ದು, ದಿನಕ್ಕೆ 400ಕ್ಕೂ ಅಧಿಕ ಕರೆಗಳು ಬರುತ್ತಿದೆ.
ಕರೆ ಮಾಡಿದವರಿಗೆ ಸಹಾಯ:ದಿನವೂ ನನ್ನ ಮೊಬೈಲ್​ಗೆ ನೂರಾರು ಕರೆಗಳು ಬರುತ್ತಿವೆ. ಕರೆ ಮಾಡುವವರಲ್ಲಿ ಉತ್ತರ ಭಾರತದಿಂದ ಕೆಲಸ ಅರಸಿ ನಗರಕ್ಕೆ ಬಂದ ಕೂಲಿ ಕಾರ್ವಿುಕರು ಶೇ.90 ಇದ್ದಾರೆ. ಇದುವರೆಗೆ ಕರೆ ಮಾಡಿದವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಸಹಾಯ ಮಾಡಲು ಸೂಚಿಸಿದ್ದೇನೆಂದು ಸೀಮಂತ್​ಕುಮಾರ್ ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಹೊರ ರಾಜ್ಯದಿಂದ ಸಹಾಯ ಕೇಳಿದವರಿಗೆ ಅಲ್ಲಿ ಕೆಲಸ ಮಾಡುತ್ತಿರುವ ನನ್ನ ಬ್ಯಾಚ್​ವೆುಟ್​ಗಳು ಹಾಗೂ ಪರಿಚಿತರಿಗೆ ಮಾಹಿತಿ ನೀಡಿ ಇವರಿಗೆ ಸಹಾಯ ಮಾಡುವಂತೆ ಕೋರಿದ್ದೇನೆ. ಹಲವರು ತಮ್ಮನ್ನು ಊರಿಗೆ ಕಳಿಸಿ ಕೊಡುವಂತೆ ಕೇಳಿಕೊಂಡಿದ್ದು, ಸದ್ಯಕ್ಕೆ ಇದಕ್ಕೆ ಅವಕಾಶವಿಲ್ಲವೆಂದು ತಿಳಿಸಿದ್ದೇನೆ ಎಂದರು.
ಕಳೆದ 20 ವರ್ಷ ಗಳಿಂದ ಈ ನಂಬರ್ ಬಳಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಪರಿಚಿತರ ಬಳಿ ನಂಬರ್ ಇದೆ. ಇದರಿಂದ ನಂಬರ್ ಬದಲಿಸುವ ಯೋಚನೆ ಮಾಡಲಿಲ್ಲ. ಬದಲಾಗಿ ಬರುವ ಕರೆಗಳನ್ನು ಸ್ವೀಕರಿಸಿ ಅವರ ಕಷ್ಟಗಳಿಗೆ ಸಹಾಯ ಮಾಡುತ್ತಿದ್ದೇನೆ.| ಸೀಮಂತ್ ಕುಮಾರ್ಐಜಿಪಿ
ಕರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗೆ ಸೂಚನೆ- ಅಧಿಕಾರಿಗಳು ಬೆಂಗಳೂರು ನಗರ ಡಿಸಿಗೆ ಹೇಳಿದ್ದೇನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 1 =
Remember me
