ಬೆಂಗಳೂರು:ಲಾಕ್​ಡೌನ್​ ತೆರವಾಗುತ್ತಿದ್ದಂತೆ, ಮದ್ಯ ಮಾರಾಟ ಆರಂಭವಾಗಲಿದೆ ಎಂಬುದು ಎಲ್ಲ ನಿರೀಕ್ಷೆಯಾಗಿತ್ತು. ಆದರೆ, ಎರಡನೇ ಹಂತದ ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾಗಿದೆ. ಕೆಲ ವಿನಾಯ್ತಿಗಳನ್ನು ನೀಡಿದ್ದರೂ, ಮುಂದಿನ ಒಂದು ವಾರದವರೆಗೆ ಲಾಕ್​ಡೌನ್​ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ. ಹಾಟ್​ಸ್ಪಾಟ್​ಗಳಲ್ಲಿ ಮತ್ತಷ್ಟು ನಿರ್ಬಂಧ ವಿಧಿಸಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಮದ್ಯ ಮಾರಾಟವಂತೂ ಇಲ್ಲ.
ಆದರೆ, ಮದ್ಯದ ಅಕ್ರಮ ಮಾರಾಟಕ್ಕೆ ವಂಚಕರು ಹಲವು ದಾರಿ ಕಂಡುಕೊಂಡಿದ್ದಾರೆ. ನೂರಿನ್ನೂರು ರೂಪಾಯಿ ಮದ್ಯವನ್ನು ಸಾವಿರ ರೂ.ಗಳಿಗೆ ಮಾರುತ್ತಿದ್ದಾರೆ. ಬೆಂಗಳೂರು ಹಾಗೂ ಮುಂಬೈಗಳಲ್ಲಿ ಇಂಥ ಹಲವು ಪ್ರಕರಣಗಳು ಬಯಲಿಗೆ ಬಂದಿವೆ.ಇನ್ನು, ಗ್ರಾಮೀಣ ಪ್ರದೇಶದಲ್ಲಿ ಕಳ್ಳಭಟ್ಟಿ ಶುರುವಾಗಿದೆ. ಹಲವು ಜಿಲ್ಲೆಗಳಲ್ಲಿ ಇಂಥ ದಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕೂಡ ಮದ್ಯದ ಬೆಲೆಗೆ ಕಳ್ಳಭಟ್ಟಿಯನ್ನು ಮಾರಾಟ ಮಾಡುತ್ತಿದ್ದುದು ಗೊತ್ತಾಗಿದೆ. ಒಟ್ಟಿನಲ್ಲಿ ಲಾಕ್​​ಡೌನ್​ ಸಮಯ ಅಕ್ರಮ ಚಟುವಟಿಕೆಗಳಿಗೆ, ಲಾಭಕೋರತನಕ್ಕೆ ಬಳಕೆಯಾಗುತ್ತಿರುವುದಂತೂ ಸತ್ಯ.
ಈ ನಡುವೆ, ಮನೆಯಲ್ಲಿಯೇ ಇರುವ ಕುಡುಕರು ಮದ್ಯ ಸಿಗದೆ ಪರಿತಪಿಸುತ್ತಿದ್ದಾರೆ. ಏನಾದರೂ ಮಾಡಿ ಮದ್ಯ ಕುಡಿಯಲೇಬೇಕು ಎಂಬ ಹಠಕ್ಕೆ ಬಿದ್ದು, ಅಕ್ರಮ ಮಾರಾಟಗಾರರ ಮೊರೆ ಹೋಗುತ್ತಿದ್ದಾರೆ. ಅಲ್ಲಿಯೂ ಸಿಗದಿದ್ದಾಗ, ಮನೆಯಲ್ಲೇ ತಯಾರಿಸಿದರೆ ಹೇಗೆ ಎಂಬ ಯೋಚನೆಗೆ ಬಿದ್ದು, ಗೂಗಲ್​ನಲ್ಲಿ ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ.
‘ಮನೆಯಲ್ಲಿಯೇ ಮದ್ಯ ತಯಾರಿಸುವುದು ಹೇಗೆ’ ಎಂಬುದು ಗೂಗಲ್​ನಲ್ಲಿ ಲಾಕ್​ಡೌನ್​ ಸಮಯದ ಟ್ರೆಂಡ್​ ಆಗಿದೆ. ಅದರಲ್ಲೂ ಭಾರತದಲ್ಲಿ ಮಾರ್ಚ್​ 22ರಿಂದ 28ರ ನಡುವೆ ಈ ‘ಶೋಧ ಕಾರ್ಯ’ ಉತ್ತುಂಗದಲ್ಲಿತ್ತು ಎಂದು ಗೂಗಲ್​ ಸರ್ಚ್​ ಹಿಸ್ಟರಿ ಅನಾವರಣಗೊಳಿಸಿದೆ.ಮನೆಯಲ್ಲಿಯೇ ಲಭ್ಯವಿರುವ ವಸ್ತುಗಳನ್ನು ಬಳಸಿ ತಯಾರಿಸಿದ ವೈನ್​ ಹಾಗೂ ಮದ್ಯವನ್ನು ಸೇವಿಸುವ ಮೂಲಕ ತೃಷೆಯನ್ನು ತಣಿಸಿಕೊಳ್ಳುತ್ತಿದ್ದಾರೆ ಮದ್ಯಪ್ರಿಯರು.
ಇನ್ನು, ಮನೆಗಳ್ಳತನಕ್ಕಿಂತ ಮದ್ಯದ ಮಳಿಗೆಗಳಿಗೆ ಕನ್ನ ಹಾಕುತ್ತಿರುವುದು ಕೂಡ ಹೆಚ್ಚಾಗಿದೆ.ದೇಶದ 160ಕ್ಕೂ ಹೆಚ್ಚು ಜಿಲ್ಲೆಗಳು ಪ್ರಸ್ತುತ ಕರೊನಾ ಮುಕ್ತವಾಗಿವೆ. ಈ ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿರ್ಬಂಧಗಳು ತೆರವಾಗಿ ಜನ ಸಂಚಾರಕ್ಕೆ ಅನುಮತಿ ನೀಡಿ ಘೋಷಿಸಲಾಗುವ ಕೆಲ ವಿನಾಯ್ತಿಗಳಲ್ಲಿ ಮದ್ಯ ಮಾರಾಟವೂ ಸೇರಿಕೊಳ್ಳಬಹುದು ಎಂಬ ನಿರೀಕ್ಷೆ ಹೊಂದುವುದಷ್ಟೇ ಸದ್ಯ ಮದ್ಯಪ್ರಿಯರಿಗೆ ಉಳಿದಿರುವ ದಾರಿ ಎನ್ನಬಹುದೇನೋ?
ಮದ್ಯ ಮಾರಾಟ ಪುನಾರಂಭ ಆಗುತ್ತಾ? ಎಂಎಸ್​ಐಎಲ್ ಮಳಿಗೆಗಳಲ್ಲಿ ಪಾರ್ಸೆಲ್​ಗೆ ಅನುಮತಿ ಸಿಗುತ್ತಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
