ಹಾಸನ:ಕರೊನಾ ಮೊದಲನೆಯ ಅಲೆ ಬಳಿಕ ಇದೀಗ ಎರಡನೆಯ ಅಲೆ ಹಾವಳಿ ಇಟ್ಟಿದೆ. ಸದ್ಯದಲ್ಲೇ ಮೂರನೆಯ ಅಲೆ ಕೂಡ ಬರಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕೋವಿಡ್​-26, ಕೋವಿಡ್​-32 ಎದುರಿಸಲು ಸಿದ್ಧರಾಗಿರಿ ಎಂದು ಅಮೆರಿಕದ ಪರಿಣತರು ಮುನ್ನೆಚ್ಚರಿಕೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಕೋವಿಡ್​-19 ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ಜನರು ಬೇಸರ-ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲದರ ನಡುವೆ ಕರೊನಾ ಯಾವಾಗ ಪೂರ್ತಿಯಾಗಿ ಮರೆಯಾಗಲಿದೆ ಎಂಬ ಬಗ್ಗೆ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯ ಹಾರನಹಳ್ಳಿ ಕೋಡಿ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು ಕರೊನಾ ಯಾವಾಗ ಸಂಪೂರ್ಣವಾಗಿ ಮರೆಯಾಗಲಿದೆ ಎಂಬ ಭವಿಷ್ಯವನ್ನು ನುಡಿದಿದ್ದಾರೆ. ಅದರ ಜತೆಗೆ ಕರೊನಾಗಿಂತಲೂ ಭಯಾನಕ ರೋಗದ ಬರುವಿಕೆ ಕುರಿತು ಕೂಡ ಎಚ್ಚರಿಕೆ ನೀಡಿದ್ದಾರೆ. ಜೂ. 30ರ ಹಾಗೆ ಕರೊನಾ ಹಾವಳಿ ಕಡಿಮೆಯಾಗಲಿದೆ. ಆದರೆ ಮುಂದೆ ಇನ್ನೊಂದು ಅಲೆ ಇದೆ. ಈಗಾಗಲೇ ಕೋಟ್ಯಂತರ ಜನರನ್ನು ಭೂಮಿಯಲ್ಲಿ ಹೂತಿದ್ದಾರೆ. ಅದೇ ವಿಷವಾಗಿ ಭೂಮಿಯಿಂದ ಹೊರಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭಯಾನಕ ಭವಿಷ್ಯ ನುಡಿದಿರುವ ಅವರು, ಕರೊನಾ ಪೂರ್ಣವಾಗಿ ಹೋಗಲು ಹತ್ತು ವರ್ಷಗಳು ಬೇಕು ಎಂದಿದ್ದಾರೆ.
ಇದನ್ನೂ ಓದಿ:ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..
ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಪ್ರಳಯದ ಮಳೆ ಆಗಲಿದೆ, ಮಿಂಚಿನಿಂದ ದುರ್ಯೋಗ ಇದೆ, ಸಂಕ್ರಾಂತಿ ಆಶ್ವೀಜ ಮೇಲೆ ಜಗತ್ತಿನಲ್ಲಿ ಅಪಾಯಕಾರಿ ಘಟನೆ ನಡೆಯಲಿದೆ ಎಂದಿರುವ ಅವರು ಜಗತ್ತಿನಲ್ಲೇ ರಾಜಕೀಯ ವಿಪ್ಲವ ಆಗಲಿದೆ. ಅಲ್ಲದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ, ಸಾಮೂಹಿಕ ಸಾವುಗಳು ಸಂಭವಿಸಲಿವೆ ಎಂದು ಹೇಳಿದ್ದಾರೆ. ಇನ್ನು ಸತ್ತು ಹೂಳಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೀವು ನೋಡಬಹುದು, ಆದರೆ ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ. ಇಂಥ ಪ್ರೇತಬಾಧೆ ಸ್ವಲ್ಪದಿನಗಳಲ್ಲೇ ಕಾಣಿಸಲಿರುವುದು. ಆದರೆ ಕರ್ನಾಟಕದಲ್ಲಿ ಅಷ್ಟು ತೊಂದರೆ ಆಗದು ಎಂದು ಅವರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ನಡೆಯಿತು ಭೀಕರ ಆತ್ಮಹತ್ಯೆ; 15 ಅಂತಸ್ತುಗಳ ಕಟ್ಟಡದಿಂದ ಕೆಳಕ್ಕೆ ಹಾರಿ ಸಾವು!

ಹೆಂಡತಿಗೆ ಹೊಡೆದ ನಟನ ಬಂಧನ; ಥಳಿಸಿದ್ದಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ಕೊಟ್ಟ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
