ಬೆಂಗಳೂರು:ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಟ್ರಾಫಿಕ್​​ ಪೊಲೀಸರು ದಂಡ ಪಾವತಿ ಮಾಡಲು ಮತ್ತೊಮ್ಮೆ 50% ರಿಯಾಯಿತಿಯ ಸುವರ್ಣವಕಾಶವನ್ನು ನೀಡಿದ್ದರು. ಇದೀಗ ನಾಲ್ಕು ದಿನಕ್ಕೆ ಒಟ್ಟು ಸಂಗ್ರಹಗೊಂಡ ಹಣ ಎಷ್ಟು ಎಂಬುದರ ಮಾಹಿತಿ ಕೆಳಕಂಡಂತಿದೆ.
ಇದನ್ನೂ ಓದಿ:ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ
50% ದಂಡ ಪಾವತಿಯ ಮೊದಲ ದಿನದಲ್ಲಿ ಒಟ್ಟು 8,820 ಪ್ರಕರಣಗಳಿಂದ 28,35,500 ರೂ. ದಂಡ ಸಂಗ್ರಹವಾಗಿದೆ. ಎರಡನೇ ದಿನದಲ್ಲಿ 7,931 ಪ್ರಕರಣಗಳಿಂದ 24,74,750 ರೂ. ಫೈನ್​​ ಹರಿದುಬಂದಿದೆ.
ಮೂರನೇ ದಿನಕ್ಕೆ 7,234 ಕೇಸ್​​ಗಳಿಂದ 22,34,300 ರೂ. ದಂಡ ಸಂಗ್ರಹವಾಗಿದೆ. ನಾಲ್ಕನೇ ದಿನಕ್ಕೆ (ಸಂಜೆ 8 ಗಂಟೆಯೊಳಗೆ) 3,795 ಪ್ರಕರಣಗಳಿಂದ 11,49,200 ರೂ. ಫೈನ್​​ ಕಲೆಕ್ಟ್​​ ಆಗಿದೆ. ನಾಲ್ಕು ದಿನಗಳ ಅಂತ್ಯಕ್ಕೆ ಒಟ್ಟು 88,94,300 ರೂ. ದಂಡ ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ 50% ರಿಯಾಯಿತಿಗೆ ನೀರಸ ಪ್ರತಿಕ್ರಿಯೆ ದೊರಕಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
