ಬೆಂಗಳೂರು:ರಾಜಧಾನಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳು ಲಾಕ್​ಡೌನ್​ನ ಲಾಕ್ ಕಳಚಿ ಸಹಜ ಸ್ಥಿತಿಗೆ ಮರಳಿವೆ. ಕರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಒಂದು ವಾರ ವಿಧಿಸಲಾಗಿದ್ದ ಲಾಕ್​ಡೌನ್ ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಜನಜೀವನ ಶುರುವಾಗಿದೆ.
ಬುಧವಾರ ಬೆಳಗ್ಗೆಯಿಂದಲೇ ವಾಣಿಜ್ಯ ವಹಿವಾಟು ಆರಂಭವಾದರೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಸಂಚಾರ, ಆಟೋ, ಟ್ಯಾಕ್ಸಿಗಳು ರಸ್ತೆಗಿಳಿದವು. ಬೆಂಗಳೂರಿನಿಂದ ತೆರಳಿದ್ದ ಜನರು ಪುನಃ ಸಿಲಿಕಾನ್ ಸಿಟಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಟೋಲ್​ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರನ್ನು ಪರೀಕ್ಷೆಗೊಳಪಡಿಸಿ ಬೆಂಗಳೂರಿನೊಳಗೆ ಬಿಡುವ ಕುರಿತಂತೆ ಚರ್ಚೆ ನಡೆದಿತ್ತಾದರೂ ಆ ರೀತಿಯ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಹೀಗಾಗಿ ಹೊರ ಜಿಲ್ಲೆಗಳ ವಾಹನಗಳಷ್ಟೇ ಅಲ್ಲದೆ, ಹೊರ ರಾಜ್ಯಗಳ ವಾಹನಗಳೂ ಸರಾಗವಾಗಿ ನಗರದೊಳಗೆ ಬಂದವು.
ಬೆಂಗಳೂರಲ್ಲಿ -ಠಿ;20 ಸಾವಿರ ಕೋಟಿ ನಷ್ಟ
ಬೆಂಗಳೂರು: ವಾರದ ಲಾಕ್​ಡೌನ್​ನಿಂದಾಗಿ ಬೆಂಗಳೂರಿನ ಕೈಗಾರಿಕೆಗಳು ಮತ್ತು ಉದ್ದಿಮೆಗಳಿಗೆ ಸುಮಾರು 20 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಷ್ಟವಾಗಿದ್ದರೆ, ಸರ್ಕಾರಕ್ಕೆ 2000 ಕೋಟಿ ರೂ. ತೆರಿಗೆ ಕೈತಪ್ಪಿದೆ ಎಂದು ಎಫ್​ಕೆಸಿಸಿಐ ಅಂದಾಜು ಮಾಡಿದೆ.
ರಾಜ್ಯದ ಆರ್ಥಿಕತೆಯ ಮೂಲವೇ ಬೆಂಗಳೂರು. ಪ್ರತಿನಿತ್ಯ ಸುಮಾರು 200 ಕೋಟಿ ರೂ.ಗಳಷ್ಟು ತೆರಿಗೆ ಬೆಂಗಳೂರಿನಿಂದಲೇ ಬರುತ್ತದೆ. ಹತ್ತು ದಿನಕ್ಕೆ ಲೆಕ್ಕ ಹಾಕಿದರೆ ಸುಮಾರು 2000 ಕೋಟಿ ರೂ.ಗಳಾಗುತ್ತದೆ. ಇಷ್ಟು ತೆರಿಗೆ ಬರಬೇಕೆಂದರೆ ಹತ್ತುಪಟ್ಟು ವಹಿವಾಟು ನಡೆಯಬೇಕಾಗುತ್ತದೆ ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಯೆ 4 ಲಕ್ಷ ಕೈಗಾರಿಕೆಗಳಿವೆ, ಹೋಟೆಲ್, ಥಿಯೇಟರ್, ಬಾರ್, ಮಾಲ್, ಜವಳಿ ಅಂಗಡಿ, ಕಲ್ಯಾಣ ಮಂಟಪ, ಆಟೋಮೊಬೈಲ್, ಸಗಟು ದಿನಸಿ ಮಾರಾಟಗಳೆಲ್ಲ ಸೇರಿದಂತೆ 12 ಲಕ್ಷ ಉದ್ದಿಮೆಗಳಿವೆ. ಎಲ್ಲ ಉದ್ದಿಮೆಗಳಲ್ಲಿಯೂ ವಹಿವಾಟು ಸಂಪೂರ್ಣ ನಿಂತಿದೆ. ಉದ್ದಿಮೆದಾರರಿಗೆ 5000 ಕೋಟಿ ರೂ.ಗಳಷ್ಟು ನಷ್ಟವಾಗಿರಬಹುದೆಂದು ಅಂದಾಜು ಮಾಡಲಾಗಿದೆ ಎಂದರು. ಲಾಕ್​ಡೌನ್ ಒಂದೇ ಪರಿಹಾರವಲ್ಲ, ಕೈಗಾರಿಕೆಗಳಿಂದ ಕರೊನಾ ಬರುವುದಿಲ್ಲ. ಜನ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೆಲ ದೇಶಗಳಲ್ಲಿ ಲಾಕ್​ಡೌನ್ ಇಲ್ಲದೆಯೇ ನಿಯಂತ್ರಣ ಮಾಡಿರುವ ಉದಾಹರಣೆ ಇದ್ದರೆ, ಇನ್ನೂ ಕೆಲ ದೇಶಗಳಲ್ಲಿ ಲಾಕ್​ಡೌನ್ ತೆರವು ಮಾಡಲಾಗಿದೆ ಎಂದು ಜನಾರ್ದನ ಹೇಳಿದರು.
ವಿಶ್ವಸಂಸ್ಥೆಯಿಂದಲೂ ಮೆಚ್ಚುಗೆ ಪಡೆದ ಕೇರಳದಲ್ಲೇನಾಗ್ತಿದೆ? ಬೆಚ್ಚಿ ಬಿದ್ದಿದ್ದೇಕೆ ದೇವರ ನಾಡು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
