ಬೆಂಗಳೂರು:ಕರೊನಾ ಎರಡನೇ ಅಲೆ ಕೈಮೀರುತ್ತಿರುವ ಹಂತದಲ್ಲಿ ಸರ್ಕಾರ ಅಂತಿಮ ಅಸ್ತ್ರವಾಗಿ ಘೋಷಣೆ ಮಾಡಿರುವ ಲಾಕ್​ಡೌನ್ ಸೋಮವಾರದಿಂದ ಜಾರಿಗೆ ಬಂದಿದ್ದು, 14 ದಿನಗಳ ಕಾಲ ರಾಜ್ಯ ಬಹುತೇಕ ಸ್ತಬ್ಧವಾಗಲಿದೆ. ಸರ್ಕಾರ ಜಾರಿಗೊಳಿಸಿರುವ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಜನರು ಕರೊನಾ ಹಿಮ್ಮೆಟ್ಟಿಸಬೇಕಿದೆ. ಸಾಧ್ಯವಾದಷ್ಟು ಮನೆಯಲ್ಲೇ ಇದ್ದು, ಸೋಂಕಿನ ವಾಹಕರಾಗದಂತೆ ಎಚ್ಚರಿಕೆ ವಹಿಸಬೇಕಿದೆ.
ಕರೊನಾ ಸರಪಳಿ ತುಂಡರಿಸಲು ಈ 14 ದಿನಗಳ ಲಾಕ್​ಡೌನ್ ಅವಧಿ ಮಹತ್ವದ್ದಾಗಿದೆ. ಜನರು ಮನೆಯಲ್ಲೇ ಇದ್ದು, ಸಹಕಾರ ನೀಡಿದರೆ ಕರೊನಾ ಕಟ್ಟಿಹಾಕುವಲ್ಲಿ ರಾಜ್ಯ ಯಶಸ್ಸು ಕಾಣಲಿದೆ. ಇದೇ ವೇಳೆ ಸರ್ಕಾರ ಕೂಡ ಆರೋಗ್ಯ ತುರ್ತು ಸ್ಥಿತಿಗೆ ಬೇಕಾದ ಸೌಲಭ್ಯಗಳ ತಯಾರಿಯನ್ನು ತ್ವರಿತವಾಗಿ ಮಾಡಿಕೊಳ್ಳಬೇಕಿದೆ.
2020ರಲ್ಲಿ ಕರೊನಾ ಸರಪಳಿ ಕಡಿದು ಕೊಳ್ಳಲು ಲಾಕ್​ಡೌನ್ ಘೋಷಿಸಿಕೊಳ್ಳಲಾಗಿತ್ತು. ಲಾಕ್​ಡೌನ್ ಮುಗಿಯುತ್ತಿದ್ದಂತೆ ಸರ್ಕಾರ ಹಾಗೂ ಜನರು ನಿರ್ಲಕ್ಷ್ಯ ತೋರಿದ್ದರು. ಜಾತ್ರೆ, ಸಮಾರಂಭದಲ್ಲಿ ಮಿಂದೆದ್ದರು, ವೈಯಕ್ತಿಕ ಅಂತರ ಮರೆತರು. ಕರೊನಾ ವ್ಯಾಪಕವಾಗಲು ಇದಿಷ್ಟು ಸಾಕಾಯಿತು. ಈಗ ಪುನಃ ಲಾಕ್​ಡೌನ್ ಹೇರಲಾಗಿದೆ. ಮುಂದೆ ಸಹ ಕರೊನಾ ಅಲೆಗಳು ಅಪ್ಪಳಿಸಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಜನರಷ್ಟೇ ಸರ್ಕಾರದ್ದೂ ದೊಡ್ಡ ಜವಾಬ್ದಾರಿ ಇದೆ. ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕಡೆಯ ಅವಕಾಶ ಈಗ ಒದಗಿಬಂದಿದೆ.
ಪರಿಹಾರಕ್ಕೆ ಒತ್ತಡ:ಲಾಕ್​ಡೌನ್ ಘೋಷಿಸಿದ್ದರೂ ಕಟ್ಟಡ ನಿರ್ವಣ, ರಸ್ತೆ ಕಾಮಗಾರಿ, ನಿರಂತರ ಕಾರ್ಯನಿರ್ವ ಹಿಸುವ ಉದ್ಯಮಗಳು, ಸ್ಥಳದಲ್ಲೇ ಕಾರ್ವಿುಕರಿರುವ ಕೈಗಾರಿಕೆಗಳು, ತಳ್ಳುಗಾಡಿ ಮೂಲಕ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಈ ಅಲ್ಪಮಟ್ಟದ ವಿನಾಯಿತಿ ಹೊರತಾಗಿಯೂ ದೊಡ್ಡ ವರ್ಗ ಕೆಲಸವಿಲ್ಲದೇ ಕೈಚೆಲ್ಲಿ ಕುಳಿತಿದೆ. ಅದರಲ್ಲೂ ದಿನದ ದುಡಿಮೆ ಮಾಡುವವರಿಗೆ ಬದುಕು ಕಟ್ಟಿಕೊಳ್ಳುವುದು ಸವಾಲು. ಹೀಗಾಗಿ ಇವರಿಗೆ ತಕ್ಷಣವೇ ಪರಿಹಾರ ಘೋಷಿಸಿ, ಅದನ್ನು ತಲುಪಿಸುವ ಹೊಣೆ ಸರ್ಕಾರದ ಮೇಲಿದೆ. ಚಾಲಕರು, ಕ್ಷೌರಿಕರು, ಮೆಕ್ಯಾನಿಕ್​ಗಳು, ಹಮಾಲರು, ಬೀದಿ ಬದಿ ವ್ಯಾಪಾರಿಗಳು, ನೇಕಾರರು, ಗಾರ್ವೆಂಟ್ಸ್ ಉದ್ಯೋಗಿಗಳು, ಹೋಟೆಲ್ ಸಿಬ್ಬಂದಿ ಸೇರಿ ಹಲವು ಬಗೆಯ ಅಸಂಘಟಿತ ಕಾರ್ವಿುಕರು ಪರಿಹಾರ ಪ್ಯಾಕೇಜ್ ನಿರೀಕ್ಷೆಯಲ್ಲಿದ್ದಾರೆ. ಜತೆಗೆ ಸಣ್ಣಪುಟ್ಟ ವ್ಯಾಪಾರಸ್ಥರು, ಕೈಗಾರಿಕೆಗಳು, ವಾಹನ ಮಾಲೀಕರು ಸರ್ಕಾರದಿಂದ ವಿನಾಯಿತಿಗಳ ಅಪೇಕ್ಷೆಯಲ್ಲಿದ್ದಾರೆ.
ರೈಲು ನಿಲ್ದಾಣಗಳಲ್ಲಿ ಜನಜಂಗುಳಿ:ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಜನರು ನಗರ ಪ್ರದೇಶಗಳಿಂದ ತಮ್ಮ ಊರುಗಳತ್ತ ತೆರಳಿದ್ದಾರೆ. ಬಸ್ ಸಂಚಾರ ಇಲ್ಲದಿರುವ ಕಾರಣ ರೈಲುಗಳ ಮೊರೆ ಹೋಗಿದ್ದಾರೆ. ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಭಾರಿ ಜನಸಂದಣಿ ಇತ್ತು. ರೈಲ್ವೆ ಟಿಕೆಟ್ ತೋರಿಸಿದವರಿಗೆ ಮಾತ್ರ ರೈಲು ಬರುವ 1 ಗಂಟೆ ಮುಂಚಿತವಾಗಿ ನಿಲ್ದಾಣದ ಆವರಣಕ್ಕೆ ಪ್ರವೇಶ ಕಲ್ಪಿಸಲಾಗಿತ್ತು. ಕೂಲಿ ಕಾರ್ವಿುಕರು ಕುಟುಂಬದ ಜತೆ ಗಂಟುಮೂಟೆ ಸಮೇತ ಹೊರಟಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಜನರನ್ನು ನಿಯಂತ್ರಿಸಲು ಮಾರ್ಷಲ್​ಗಳು ಹಾಗೂ ಪೊಲೀಸರು ಹರಸಾಹಸಪಟ್ಟರು.
ಟೋಲ್​ನಲ್ಲೂ ಕ್ಯೂ:ಜನರು ನಗರ ತೊರೆಯುತ್ತಿರುವ ಕಾರಣ ರಸ್ತೆಗಳು, ಹೆದ್ದಾರಿಗಳು, ಟೋಲ್ ಪ್ಲಾಜಾಗಳ ಬಳಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ತುಮಕೂರು ರಸ್ತೆಯ ನವಯುಗ ಟೋಲ್, ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತ್ತು. ಅದರಲ್ಲೂ ಟೋಲ್ ಪ್ಲಾಜಾಗಳ ಬಳಿ ಕಿಲೋಮೀಟರ್​ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸವಾರರು ಕೆಲ ಕಾಲ ಕಿರಿಕಿರಿ ಅನುಭವಿಸಿದರು.
ಕಠಿಣ ಕ್ರಮ:ಸೋಮವಾರದಿಂದ ವಿನಾ ಕಾರಣ ರಸ್ತೆಗಿಳಿಯುವವರ ವಿರುದ್ಧ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ತಯಾರಿ ನಡೆಸಿ ದ್ದಾರೆ. ಪೊಲೀಸರ ಲಾಠಿ ಏಟಿನ ಜತೆಗೆ ಕೇಸ್ ಕೂಡ ದಾಖಲಾಗಲಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ, ಪೊಲೀಸರು ನಿಗಾ ಇಡಲಿದ್ದಾರೆ. ಅನಗತ್ಯವಾಗಿ ಓಡಾಡುವವರ ವಾಹನ ಜಪ್ತಿಯಾಗಲಿದೆ.
ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಬೇಡ. ಹಾಗೆ ಬಂದಲ್ಲಿ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕರೊನಾ ವಿರುದ್ಧ ಹೋರಾಡಲು ನಮ್ಮೊಂದಿಗೆ ಸಹಕರಿಸಿ.
|ಪ್ರವೀಣ್ ಸೂದ್ಡಿಜಿಪಿ
ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಹಾಲು, ತರಕಾರಿ, ಮಾಂಸ, ಮದ್ಯ, ಮೀನು ಮಾರಾಟಕ್ಕೆ ಅವಕಾಶವಿದೆ. ಸರಕು ಸಾಗಣೆ, ಪೆಟ್ರೋಲ್ ಬಂಕ್, ಗ್ಯಾಸ್ ಸ್ಟೇಷನ್​ಗಳಿಗೆ ಅವಕಾಶಗಳಿವೆ. ಕೋವಿಡ್ ಕರ್ತವ್ಯದಲ್ಲಿರುವ ಸರ್ಕಾರಿ ಉದ್ಯೋಗಿಗಳು ಕಾರ್ಯ ನಿರ್ವಹಿಸಬಹುದು. ಹೋಟೆಲ್​ಗಳು (ಪಾರ್ಸೆಲ್ ಮಾತ್ರ), ಮದುವೆ ಸಮಾರಂಭ (40 ಜನರಿಗೆ ಅವಕಾಶ), ರೈಲು, ವಿಮಾನ ಸೇವೆ, 24 ಗಂಟೆ ಕಾರ್ಯ ನಿರ್ವಹಿಸುವ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ.
ವಾಣಿಜ್ಯ ಮಳಿಗೆಗಳು, ಸಗಟು ಮಾರುಕಟ್ಟೆ, ಸೆಲೂನ್, ಬ್ಯೂಟಿ ಪಾರ್ಲರ್, ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆ ಮಳಿಗೆ, ಶಾಲೆ, ಕಾಲೇಜು, ಸಿನಿಮಾ ಮಂದಿರ, ಮಾಲ್, ಜಿಮ್ ಯೋಗ ಕೇಂದ್ರ, ಶಿಕ್ಷಣ ತರಬೇತಿ ಕೇಂದ್ರಗಳು, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ತಾಣಗಳು, ಸಭಾಂಗಣಗಳು, ರಂಗ ಮಂದಿರಗಳು, ಎಲ್ಲ ಬಗೆಯ ಸಭೆ-ಸಮಾರಂಭಗಳು, ಧಾರ್ವಿುಕ ಸ್ಥಳ, ಎಲ್ಲ ಸಾಮಾಜಿಕ, ರಾಜ ಕೀಯ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ವಿುಕ ಹಾಗೂ ಇತರೆ ಜನ ಸೇರುವ ಸ್ಥಳಗಳು ಸಂಪೂರ್ಣ ಬಂದ್.
1. ಜಿಲ್ಲಾ ಆಸ್ಪತ್ರೆ ಮೇಲೆ ಒತ್ತಡ ಕಡಿಮೆ ಮಾಡಲು ತಾಲೂಕು- ಹೋಬಳಿ ಮಟ್ಟದಲ್ಲಿ ಆಕ್ಸಿಜನ್ ಸೌಲಭ್ಯ ಸಹಿತ ಕೋವಿಡ್ ಕೇರ್ ಸೆಂಟರ್​ಗಳನ್ನು ತಕ್ಷಣವೇ ಆರಂಭಿಸಿ ದೀರ್ಘ ಕಾಲದವರೆಗೆ ಮುಂದುವರಿಸುವುದು.
2. ಮುಂದೆ ಆರೋಗ್ಯ ಸಿಬ್ಬಂದಿ ಸಮಸ್ಯೆ ಬಾಧಿಸುವ ಕಾರಣ, ಅವರ ಮೇಲೆ ಒತ್ತಡ ಕಡಿಮೆ ಮಾಡಲು ಸ್ವಯಂಸೇವಾ ಸಂಘಟನೆಗಳು ಅಥವಾ ಯುವಕರಿಗೆ ತರಬೇತಿ ನೀಡಿ ಅವರನ್ನು ಈ ಕೇಂದ್ರಗಳಲ್ಲಿ ಬಳಸಿ ಕೊಳ್ಳಬೇಕು. ನಿವೃತ್ತ ವೈದ್ಯರು, ಅರೆವೈದ್ಯಕೀಯ ಸಿಬ್ಬಂ ದಿಗೆ ಗೌರವಧನ ನೀಡಿ, ಅವರ ಸೇವೆ ಪಡೆಯಬಹುದು.
3. ಇದೇ ಮೊದಲ ಬಾರಿಗೆ ಆಕ್ಸಿಜನ್ ಸಮಸ್ಯೆ ವಿಪರೀತವಾಗಿದೆ. ಮುಂದೆ ಹೀಗಾಗದಂತೆ ಜಿಲ್ಲಾ- ತಾಲೂಕು ಮಟ್ಟದಲ್ಲಿ ತಕ್ಷಣದಿಂದಲೇ ಮೆಡಿಕಲ್ ಆಕ್ಸಿಜನ್ ಉತ್ಪಾದನೆಗೆ ಒತ್ತುಕೊಡಬೇಕು. ಮುಂದೆಯೂ ಕೈಗಾರಿಕೆ ಆಕ್ಸಿಜನ್ ಬಳಸುತ್ತಾ ಹೋದರೆ ಕೈಗಾರಿಕೆಗಳು ಬಾಗಿಲು ಮುಚ್ಚಿಕೊಳ್ಳಬೇಕಾಗುತ್ತದೆ.
4. ಆಕ್ಸಿಜನ್ ಸರಬರಾಜು ಕಷ್ಟದ ಕೆಲಸ. ಸ್ವಲ್ಪ ಸಮಯ ವ್ಯತ್ಯಯವಾದರೂ ದುಬಾರಿ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಆಕ್ಸಿಜನ್ ಉತ್ಪಾದನೆ ಘಟಕ, ಸ್ಟೋರೇಜ್ ಕೇಂದ್ರ ಆರಂಭಿಸಬೇಕು.
5. ಹಾಸ್ಟೆಲ್​ಗಳನ್ನು ತಕ್ಷಣಕ್ಕೆ ಕೋವಿಡ್ ಕೇರ್ ಸೆಂಟರ್​ಗಳಾಗಿ ರೂಪಿಸುವುದು ಸೂಕ್ತ. ಬೇರೆ ಯಾವುದೇ ಕಟ್ಟಡವನ್ನು ಕೇರ್ ಸೆಂಟರ್ ಆಗಿ ರೂಪಿಸಿದರೆ ಶೌಚಗೃಹ ಸಮಸ್ಯೆ ಎದುರಾಗಲಿದೆ. ಲಾಡ್ಜ್, ಸಮುದಾಯ ಭವನ, ಕಲ್ಯಾಣ ಮಂಟಪವೂ ಸೂಕ್ತವಾಗಬಹುದು. ಸಿದ್ಧವಿರುವ ಕಟ್ಟಡವನ್ನು ಪರಿವರ್ತಿಸುವುದೇ ಈಗಿನ ಸಂದರ್ಭಕ್ಕೆ ಸೂಕ್ತವಾದೀತು.
6. ಔಷಧ, ಆಕ್ಸಿಜನ್ ಬಳಕೆಯಲ್ಲಿ ಕಾಳದಂಧೆ ಮುಂದುವರಿದಿದೆ. ಪಾರದರ್ಶಕತೆ ಕಾಣದೇ ಜನರ ಆಕ್ರೋಶಭರಿತರಾಗಿದ್ದಾರೆ. ನಮಗೆ ಸಿಗಲಾರದ್ದು ದಂಧೆಕೋರರಿಗೆ ಹೇಗೆ ಸಿಗುತ್ತಿದೆ ಎಂಬ ಸಿಟ್ಟಿದೆ. ಇದನ್ನು ಸರಿಪಡಿಸಲು ಆಧಾರ್/ಪಡಿತರ ಚೀಟಿ ಆಧಾರಿತ ವ್ಯವಸ್ಥೆಯನ್ನು ತಕ್ಷಣದಿಂದಲೇ ಜಾರಿ ಮಾಡಬೇಕು.
7. ಸೋಂಕಿತರು- ಸಂರ್ಪತರಿಗೆ ತಕ್ಷಣವೇ ಸಂರ್ಪಸಲು ಬೂತ್, ವಾರ್ಡ್ ಮಟ್ಟದ ತಂಡ ರಚಿಸಬೇಕು. ಫೀವರ್ ಕ್ಲೀನಿಕ್ ಮತ್ತೆ ಸಕ್ರಿಯಗೊಳಿಸಿ, ಸಂಖ್ಯೆ ಹೆಚ್ಚಿಸಬೇಕು. ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರನ್ನು ಇದರಲ್ಲಿ ತೊಡಗಿಸಬೇಕು.
8. ಕರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿದ್ದರೆ ನಾವು ಸೇಫ್ ಎಂಬ ಮನಸ್ಥಿತಿ ಹೆಚ್ಚಿದೆ. ಹೀಗಾಗಿ ಕಡಿಮೆ ಹಾಸಿಗೆಯುಳ್ಳ ಆಸ್ಪತ್ರೆಗಳನ್ನು ಸೌಮ್ಯ ಸ್ವಭಾವದ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳುವುದು. ಮಾನಸಿಕ ಸ್ಥೈರ್ಯ ತುಂಬಲು ಕೌನ್ಸೆಲಿಂಗ್​ಗೆ ಒತ್ತುಕೊಡುವುದು.
9. ಜಿಲ್ಲಾ-ತಾಲೂಕು ಕೇಂದ್ರದ ಆಸ್ಪತ್ರೆ ಆವರಣ ಅಥವಾ ಆಸುಪಾಸಲ್ಲಿ ಕರೊನಾ ಸೋಂಕಿತರಿಗಾಗಿ ತಾತ್ಕಾಲಿಕ ಆಸ್ಪತ್ರೆ ತೆರೆಯುವುದು. ಈ ಮೂಲಕ ಇತರೆ ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಾಧ್ಯವಿದೆ.
10. ಕರೊನಾ ಅಲೆ ಮುಗಿಯುವವರೆಗೂ ಕೋವಿಡ್​ಗೆ ಮೀಸಲಿರುವ ಸಹಾಯವಾಣಿಯನ್ನು ಸರಿಯಾಗಿ ನಿರ್ವಹಿಸಬೇಕು. ಇಲ್ಲಿ ಟೆಸ್ಟ್ ವಿವರ, ಬೆಡ್ ಹಂಚಿಕೆ, ಆಕ್ಸಿಜನ್, ಆಂಬುಲೆನ್ಸ್, ಔಷಧ ಬಗ್ಗೆ ತಕ್ಷಣವೇ ಮಾಹಿತಿ ಕೊಡುವಂತಾಗಲು ತಂಡ ಕಟ್ಟಿ, ತರಬೇತಿ ಕೊಡಬೇಕು.
ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
