ಬೆಂಗಳೂರು:ದಟ್ಟ ಅರಣ್ಯಗಳಲ್ಲಿ ಸಂಚರಿಸುವಾಗ ನೀವು ಕಾಡು ಪ್ರಾಣಿಗಳಿಂದಾದರೂ ತಪ್ಪಿಸಿಕೊಳ್ಳಬಹುದು ಆದರೆ, ರಕ್ತ ಹೀರುವ ಜಿಗಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜಿಗಣೆ ಇದನ್ನು ಇಂಗ್ಲೀಷ್‍ನಲ್ಲಿ ಲೀಚಸ್ ಎಂದು ಕರೆಯುತ್ತಾರೆ. ಕೇವಲ ಮನುಷ್ಯನಿಗೆ ಮಾತ್ರವಲ್ಲದೆ ಎಲ್ಲಾ ಪ್ರಾಣಿಗಳಿಂದಲೂ ಇದು ರಕ್ತವನ್ನು ಹೀರುತ್ತದೆ. ಮಲೆನಾಡಿನ ಭಾಗಗಳಲ್ಲಿ ಜಿಗಣೆಗಳ ಕಾಟ ಹೆಚ್ಚಾಗಿರುತ್ತದೆ.
ಕೆಲವೊಮ್ಮೆ ವಿಷಜಂತುಗಳಿಗೆ ಕಚ್ಚಿದ ಜಿಗಣೆಗಳು ಮನುಷ್ಯನ ದೇಹವನ್ನು ಕಚ್ಚಿದಲ್ಲಿ, ಆ ಭಾಗದಲ್ಲಿ ತುರಿಕೆ ಕಂಡು ಬರುತ್ತದೆ. ಆ ಭಾಗವು ಬಾತು ಹೋಗುವ ಸಾಧ್ಯತೆಗಳು ಇರುತ್ತವೆ. ಅಲ್ಲದೆ ರೋಗಗಳನ್ನು ಹೊಂದಿರುವ ವ್ಯಕ್ತಿಯ ರಕ್ತವನ್ನು ಹೀರಿದ ಜಿಗಣೆ ಮತ್ತೊಬ್ಬನನ್ನು ಕಚ್ಚಿದಲ್ಲಿ ರೋಗವು ಹರಡುವ ಸಾಧ್ಯತೆಗಳು ಇರುತ್ತದೆ. ಹೀಗಾಗಿ ಅವುಗಳಿಂದ ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಕೆಲವು ಸಲಹೆ ನೀಡಿದ್ದೇವೆ….

ದೇಹದಿಂದ ರಕ್ತ ಹಿರುವ ಮೊದಲು ಸಣ್ಣ ಕಡ್ಡಿಯಂತಿರುವ ಈ ಜಿಗಣೆಗಳು ಬಳಿಕ ದೊಡ್ಡದಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಅರ್ಧ ಗಂಟೆಯಿಂದ 2 ಗಂಟೆಯವರೆಗೂ ರಕ್ತ ಹೀರುವಂತಹ ಜಿಗಣೆಗಳು ಇರುತ್ತವೆ. ಒಮ್ಮೆ ದೇಹಕ್ಕೆ ಅಂಟಿಕೊಂಡಂತಹ ಜಿಗಣೆ ತೆಗೆಯಲು ಹರಸಾಹಸವನ್ನೇ ಪಡಬೇಕಾಗುತ್ತದೆ. ಮಳೆಗಾಲದಲ್ಲಿ ಮನೆಗಳಲ್ಲಿ ರಕ್ತ ಹೀರುವ ಜಿಗಣೆ ಕೂಡ ಬರುತ್ತದೆ, ಓಡಿಸುವ ದಾರಿ ತಿಳಿಯೋಣ.
ಜಿಗಣೆಗಳನ್ನು ತೊಡೆದುಹಾಕಲು ಹೀಗೆ ಮಾಡಿ:ಅರಣ್ಯ ಭಾಗಗಳಲ್ಲಿ ವಾಸಿಸುವ ಸ್ಥಳೀಯರು ಇದರಿಂದ ತಪ್ಪಿಸಿಕೊಳ್ಳಲು ತಮ್ಮ ಕಾಲುಗಳಿಗೆ ಸೋಪು ಅಥವಾ ಶಾಂಪೋ ಹಾಗೂ ಉಪ್ಪು ನೀರನ್ನು ಸಿಂಪಡಿಸಿಕೊಳ್ಳುತ್ತಾರೆ.
ನಿಮ್ಮ ಮನೆಗೆ ಜಿಗಣೆ ಎಲ್ಲಿಂದ ಬರುತ್ತದೆ ಎಂಬುದನ್ನು ಮೊದಲು ನೋಡಿ. ಹೆಚ್ಚಿನ ಜಿಗಣೆಗಳು ಚರಂಡಿಗಳ ಮೂಲಕ ಅಥವಾ ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತವೆ. ಆದ್ದರಿಂದ ಚರಂಡಿಯಲ್ಲಿ ಬಲೆ ಹಾಕಿ ಮನೆಯ ಕಿಟಕಿ ಬಾಗಿಲುಗಳನ್ನು ಸದಾ ಮುಚ್ಚಿಡಿ.
ಇದನ್ನೂ ಓದಿ:ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
ನಿಮ್ಮ ಮನೆಯ ಯಾವುದೇ ಮೂಲೆಯಲ್ಲಿ ಜಿಗಣೆ ಕಾಣಿಸಿಕೊಂಡರೆ, ಆ ಸ್ಥಳದ ಸುತ್ತಲೂ ಉಪ್ಪನ್ನು ಹಾಕಿ. ಜಿಗಣೆ ಸಾಯುತ್ತದೆ ಅಥವಾ ಉಪ್ಪಿನಿಂದ ಓಡಿಹೋಗುತ್ತದೆ. ನೀರಿನಲ್ಲಿ ಉಪ್ಪನ್ನು ಬೆರೆಸಿ ಸಿಂಪಡಿಸುವ ಮೂಲಕವೂ ನೀವು ಅದನ್ನು ಸಿಂಪಡಿಸಬಹುದು.
ಜಿಗಣೆಗಳನ್ನು ಓಡಿಸಲು, 1 ಕಪ್ ಸೀಮೆ ಎಣ್ಣೆಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಮತ್ತು ಈ ನೀರಿನಿಂದ ಮನೆಯ ಸುತ್ತಲೂ ಸಿಂಪಡಿಸಿ. ಜಿಗಣೆಗಳು ಇದರಿಂದ ದೂರವಿರುತ್ತವೆ. ಸೀಮೆ ಎಣ್ಣೆಯ ವಾಸನೆಯಿಂದ ಉಳಿದ ಕೀಟಗಳೂ ಮನೆಯಿಂದ ದೂರ ಉಳಿಯುತ್ತವೆ. ಇದನ್ನು ವಾರಕ್ಕೆ ಕನಿಷ್ಠ 2 ಬಾರಿ ಮಾಡಿ.
ಇದನ್ನೂ ಓದಿ:ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಜಿಗಣೆಗಳನ್ನು ತೊಡೆದುಹಾಕಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ, ಒಂದು ಮಗ್ ನೀರಿನಲ್ಲಿ 3 ಚಮಚ ಅಡಿಗೆ ಸೋಡಾವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಈ ನೀರನ್ನು ಚರಂಡಿ ಮತ್ತು ತೋಟದಲ್ಲಿ ಸಿಂಪಡಿಸಿ.
ಮಳೆಗಾಲದಲ್ಲಿ ತೋಟದಲ್ಲಿ ಅನೇಕ ಜಿಗಣೆಗಳು ಇರುತ್ತವೆ, ಆದ್ದರಿಂದ ಕಾಲಕಾಲಕ್ಕೆ ನಿಮ್ಮ ತೋಟವನ್ನು ಸ್ವಚ್ಛಗೊಳಿಸುತ್ತಿರಿ. ನೀವು ಅರಣ್ಯ ಪ್ರದೇಶ ಅಥವಾ ಗದ್ದೆ ಕಡೆಗೆ ಹೋಗುವಾಗ ನಿಮ್ಮ ಕಾಲಿಗೆ ಬೂಟ್​​ ಧರಿಸಿ, ಸೋಪು ನೀರುನ್ನು ಕಾಲಿಗೆ ಹಚ್ಚಿಕೊಂಡು ಹೊರಗೆ ಹೋಗುವುದು ಒಳ್ಳೆಯದಾಗಿದೆ.
ಪುರುಷರ ಬಟ್ಟೆ ಧರಿಸಿದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಗೊಂದಲಕ್ಕೀಡಾದ ಕಂಡಕ್ಟರ್; ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − twelve =
Remember me
