ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಗುಡ್​ಫ್ರೖೆಡೇ ಹಾಗೂ ಈಸ್ಟರ್ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವಂತೆ ಕ್ರೈಸ್ತ ಸಮುದಾಯಕ್ಕೆ ಆರ್ಚ್ ಬಿಷಪ್ ಡಾ. ಪೀಟರ್ ಮಾಚಾಡೊ ಮನವಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೋಮವಾರ ರಾತ್ರಿ ಜಯಮಹಲ್​ನ ನಿವಾಸದಲ್ಲಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿ, ಗುಡ್​ಫ್ರೈಡೇ ದಿನ ಚರ್ಚ್​ಗಳ ಬಾಗಿಲು ತೆರೆಯದಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಬಿಷಪ್, ಹಬ್ಬದಂದು ರಾಜ್ಯದ ಯಾವುದೇ ಭಾಗದಲ್ಲಿರುವ ಚರ್ಚ್ ತೆರೆಯುವುದಿಲ್ಲ. ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಸಮುದಾಯದ ಜನರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಚರ್ಚ್​ಗಳ ಬಾಗಿಲು ತೆರೆದರೆ ಹೆಚ್ಚು ಜನರು ಸೇರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಚರ್ಚ್​ಗಳ ಬಾಗಿಲು ತೆರೆಯುವುದಿಲ್ಲ. ಹಬ್ಬ ಆಚರಣೆ ವಿಧಾನವನ್ನು ಆನ್​ಲೈನ್ ಜಾಲತಾಣಗಳಲ್ಲಿ (ಯೂ ಟ್ಯೂಬ್) ಪ್ರಸಾರ ಮಾಡಲಾಗುವುದು. ಹೀಗಾಗಿ, ಅದನ್ನು ವೀಕ್ಷಿಸಿ ಮನೆಯಲ್ಲಿಯೇ ಮನೆ ಮಂದಿ ಸೇರಿ ಹಬ್ಬ ಆಚರಿಸುವಂತೆ ಬಿಷಪ್ ಕೋರಿದ್ದಾರೆ.
ಈಸ್ಟರ್ ಹಾಗೂ ಗುಡ್​ಫ್ರೈಡೇಗೆ ಸಂಬಂಧಿಸಿದಂತೆ ಬಿಷಪ್ ಭಾಷಣವನ್ನು ಆನ್​ಲೈನ್​ನಲ್ಲೇ ಅಪ್​ಲೋಡ್ ಮಾಡುವುದಾಗಿ ತಿಳಿಸಿದ್ದಾರೆ. ಗುಡ್​ಫ್ರೈಡೇ ದಿನದಂದು ಯಾರೂ ಚರ್ಚ್​ಗೆ ಬರುವುದು ಬೇಡ ಎಂದು ಹೇಳಿದ್ದಾರೆ. ಈಗಾಗಲೇ ಕ್ರೈಸ್ಥ ಬಾಂಧವರಲ್ಲಿ ಮನೆಯಲ್ಲಿಯೇ ಹಬ್ಬ ಆಚರಿಸುವಂತೆ ಮನವಿ ಮಾಡಲಾಗಿದೆ.| ಭಾಸ್ಕರ್ ರಾವ್ನಗರ ಪೊಲೀಸ್ ಆಯುಕ್ತ
ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

ಬಾಡಿಗೆ ಕೊಡಿ ಇಲ್ಲಾ ಮನೆ ಖಾಲಿ ಮಾಡಿ ಎಂದ ಕಟ್ಟಡ ಮಾಲೀಕರ ವಿರುದ್ಧ ಎಫ್​ಐಆರ್: ದಾಖಲಾಯಿತು 5 ಪ್ರತ್ಯೇಕ ಕಿರುಕುಳ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
