| ಕೀರ್ತಿನಾರಾಯಣ ಸಿ. ಬೆಂಗಳೂರು2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿರುವ ಅಧಿಕೃತ ಡೀಲರ್​ಶಿಪ್​ಗಳ ಬಳಿಯಲ್ಲದೆ ಎಲ್ಲೆಂದರಲ್ಲಿ ನಂಬರ್ ಪ್ಲೇಟ್ ಹಾಕಿಸಬೇಡಿ. ನಿರ್ದಿಷ್ಟ ಭದ್ರತಾ ವ್ಯವಸ್ಥೆ ಇಲ್ಲದ ನಂಬರ್ ಪ್ಲೇಟ್ ಅಳವಡಿಸಿದರೆ ಯಾವುದೇ ಪ್ರಯೋಜನ ಇಲ್ಲ. ಸಂಚಾರ ಪೊಲೀಸರು ವಾಹನ ಹಿಡಿದು ಪರಿಶೀಲಿಸಿದರೆ ದಂಡ ಹಾಕುವುದು ನಿಶ್ಚಿತ.
ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಜೋಡಣೆ ಪ್ರಕ್ರಿಯೆಯನ್ನು ವಾಹನ ಉತ್ಪಾದಕ ಕಂಪನಿಗಳ ಅಧಿಕೃತ ಡೀಲರ್​ಗಳಿಗೆ ಕೊಡಲಾಗಿದೆ. ರಾಜ್ಯದಲ್ಲಿ ನಂಬರ್ ಪ್ಲೇಟ್ ಪೂರೈಕೆ ಜವಾಬ್ದಾರಿಯನ್ನು ಏಳೆಂಟು ಕಂಪನಿಗಳಿಗೆ ಕೊಡಲಾಗಿದ್ದು, ರಾಜ್ಯಾದ್ಯಂತ ಅಂದಾಜು 4000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಗುರುತಿಸಲಾಗಿದೆ. ವಾಹನ ಮಾಲೀಕರು ಅಧಿಕೃತ ಡೀಲರ್ ಪಾಯಿಂಟ್​ಗಳಲ್ಲೇ ನಂಬರ್ ಪ್ಲೇಟ್​ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.
ಸರ್ಕಾರದ ಕಡ್ಡಾಯ ನಿಯಮವನ್ನೇ ದುರ್ಬಳಕೆ ಮಾಡಿಕೊಂಡು ವಾಹನ ಮಾಲೀಕರಿಗೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಸಣ್ಣಪುಟ್ಟ ಅಂಗಡಿಗಳು, ಮೆಕಾನಿಕ್ ಶಾಪ್​ಗಳು, ಏಜೆನ್ಸಿಗಳು ಹಾಗೂ ಕೆಲವೊಂದು ಸಂಸ್ಥೆಗಳು, ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ಗಳು ಎಂದೇಳಿ ಸಾಮಾನ್ಯ ನಂಬರ್ ಪ್ಲೇಟ್​ಗಳನ್ನು ಅಳವಡಿಸಿ ಹಣ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ನಕಲಿ ನಂಬರ್ ಪ್ಲೇಟ್​ಗಳಲ್ಲಿ ಹಾಲೋಗ್ರಾಂ ಸ್ಟಿಕ್ಕರ್​ಗಳನ್ನು ಅಳವಡಿಸಿ, ನಿಗದಿಪಡಿಸಿರುವ ಅಸಲಿ ದರಕ್ಕಿಂತ ಹೆಚ್ಚು ಹಣವನ್ನು ಸುಲಿಗೆ ಮಾಡಲಾಗುತ್ತಿದೆ.
ಅಸಲಿ ಎಚ್​ಎಸ್​ಆರ್​ಪಿ ಫಲಕದ ಮೇಲೆ ಲೇಸರ್ ತಂತ್ರಜ್ಞಾನದಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಪ್ರತಿಯೊಂದು ನಂಬರ್ ಪ್ಲೇಟ್​ಗೂ ಒಂದು ಸೀರಿಯಲ್ ನಂಬರ್ ಕೊಡಲಾಗುತ್ತದೆ. ಆ ನಂಬರ್ ಅನ್ನು ಸಾರಿಗೆ ಇಲಾಖೆಯ ವಾಹನ್-4 ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿರುತ್ತದೆ. ಆದರೆ, ಅನಧಿಕೃತ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಖರೀದಿಸುವ ನಂಬರ್ ಪ್ಲೇಟ್​ಗಳಲ್ಲಿ ಸೀರಿಯಲ್ ಸಂಖ್ಯೆಯೂ ಇರುವುದಿಲ್ಲ. ವಾಹನ್-4 ತಂತ್ರಾಂಶಕ್ಕೂ ಜೋಡಣೆ ಆಗಿರುವುದಿಲ್ಲ. ಆದ್ದರಿಂದ ಇಂತಹ ಫಲಕಗಳನ್ನು ಅಳವಡಿಸಿದರೂ ಪೊಲೀಸರಿಗೆ ಸಿಕ್ಕಿಬಿದ್ದ ಬಳಿಕ ದಂಡ ಕಟ್ಟುವ ಜತೆಗೆ ಪುನಃ ಹಣ ಪಾವತಿಸಿ ಹೊಸದಾಗಿ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಬೇಕಾಗುತ್ತದೆ.
ಕೇಂದ್ರ ಸರ್ಕಾರದ ನಿಯಮದ ಅನುಸಾರ ನಂಬರ್ ಪ್ಲೇಟ್ ತಯಾರಿಸಿ, ಅಳವಡಿಸಲು ಅಧಿಕೃತ ಡೀಲರ್​ಗಳಿಗೆ ಸರ್ಕಾರ ಅನುಮತಿ ನೀಡಿದೆ. ರಸ್ತೆ ಬದಿ, ಸಣ್ಣಪುಟ್ಟ ಅಂಗಡಿಗಳಲ್ಲಿ ಸಾಮಾನ್ಯ ನಂಬರ್ ಪ್ಲೇಟ್ ಅಳವಡಿಸಿದರೆ ಕೇಂದ್ರ ಸರ್ಕಾರದ ಉದ್ದೇಶವೇ ಈಡೇರುವುದಿಲ್ಲ.
| ಸಿ.ಮಲ್ಲಿಕಾರ್ಜುನ, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ
ವಾಹನಗಳ ಕಳ್ಳತನ ತಡೆ, ಅಪರಾಧ ಚಟುವಟಿಕೆಗೆ ವಾಹನಗಳ ಬಳಕೆ ನಿಯಂತ್ರಣಕ್ಕೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅನುಕೂಲ ಆಗುತ್ತದೆ. ಆದರೆ, ಕೆಲ ಸಂಸ್ಥೆಗಳು ನಕಲಿ ಪ್ಲೇಟ್​ಗಳ ತಯಾರಿಸುವಲ್ಲಿ ತೊಡಗಿವೆ. ಅಂತಹ ಸಂಸ್ಥೆ ಹಾಗೂ ಏಜೆನ್ಸಿಗಳನ್ನು ಪತ್ತೆಹಚ್ಚಿ ಬ್ಲಾ್ಯಕ್​ಲೀಸ್ಟ್​ಗೆ ಹಾಕಲು ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು.
| ಡಾ.ಕಮಲ್ ಜಿತ್ ಸೋಯ್, ಸದಸ್ಯರು, ಕೇಂದ್ರ ಸರ್ಕಾರದ ರಾಷ್ಟ್ರೀಯ ರಸ್ತೆ ಸುರಕ್ಷತೆ ಕೌನ್ಸಿಲ್
ರಾಜ್ಯದಲ್ಲಿವೆ 1.70 ಕೋಟಿ ಹಳೇ ವಾಹನ:ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿ ಸದ್ಯ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1000 ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ನ.17 ಕೊನೆಯ ದಿನ:ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಸಲು 2023ರ ನ.17ರವರೆಗೆ ಸಾರಿಗೆ ಇಲಾಖೆ ಅವಕಾಶ ನೀಡಲಾಗಿದೆ. ಸಾರಿಗೆ ಇಲಾಖೆ ಅನುಮತಿ ನೀಡಿರುವ ಡೀಲರ್ ಪಾಯಿಂಟ್​ಗಳು ಯಾವು, ಎಲ್ಲಿವೆ ಹಾಗೂ ನಂಬರ್ ಪ್ಲೇಟ್ ಆರ್ಡರ್ ಮಾಡಲು ಏಕೀಕೃತ ಪೋರ್ಟಲ್ ಡಿಡಿಡಿ.ಠಜಿಚಞ.ಜ್ಞಿ ನೀಡಲಾಗಿದೆ.
ಟ್ರಕ್​ನಲ್ಲಿ ಗೋವಿನ ದೇಹದ ಭಾಗಗಳು?; ಪ್ರಧಾನಿ ಮೋದಿಯ ಗಮನ ಸೆಳೆಯಲು ಯತ್ನಿಸಿದ ನಟಿ ಐಂದ್ರಿತಾ ರೇ!

ದೇಶದ ಹೆಸರನ್ನೂ ಬದಲಾಯಿಸುವ ವಿದೂಷಕ ಯಾರು?: ನಟ ಪ್ರಕಾಶ್ ರಾಜ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + eight =
Remember me
