ಬೆಂಗಳೂರು:ರಾಜ್ಯ ಸರ್ಕಾರದ ವೈಫಲ್ಯ, ವರ್ಗಾವಣೆ ದಂಧೆ, ಲಂಚಗುಳಿತನದ ವಿರುದ್ಧ ಮತ್ತಷ್ಟು ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದು ಬಿಜೆಪಿ ವರಿಷ್ಠರು ಫರ್ವನು ಹೊರಡಿಸಿದ್ದಾರೆ.
ಪಕ್ಷದ ರಾಜ್ಯ ನಾಯಕರ ಹೇಳಿಕೆಗಳಲ್ಲಿ ಕಟ್ಟಿಹಾಕುವ ತಂತ್ರಗಾರಿಕೆಯಿಲ್ಲ. ಸಾಂಕೇತಿಕ ಹೋರಾಟ ಜನರ ಮೇಲೆ ಹೆಚ್ಚು ಪ್ರಭಾವಬೀರುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಪಕ್ಷದ ರಾಜ್ಯ ನಾಯಕರು, ಮಾಜಿ ಸಚಿವರು ಹಾಗೂ ಶಾಸಕರ ಕಾರ್ಯವೈಖರಿ, ಚಟುವಟಿಕೆಗಳ ಬಗ್ಗೆ ದೆಹಲಿ ನಾಯಕರಿಗೆ ಕಾಲಕಾಲಕ್ಕೆ ಮಾಹಿತಿ ರವಾನೆಯಾಗುತ್ತದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪಕ್ಷದಲ್ಲಿನ ಬೆಳವಣಿಗೆಯನ್ನು ಅವಲೋಕಿಸುತ್ತಿದ್ದು, ಹಿರಿಯ ನಾಯಕರ ಮಧ್ಯೆ ಒಮ್ಮತ ಹಾಗೂ ಸಮನ್ವಯದ ಕೊರತೆಯಿದೆ. ಸರ್ಕಾರದ ಮೇಲೆ ಒಟ್ಟಾಗಿ ಮುಗಿಬೀಳುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಾಯಕರು ಸಕ್ರಿಯವಾಗಿದ್ದಾರೆ ಎಂಬ ವಿಷಯ ತಿಳಿದು, ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸಭೆ:ಸರ್ಕಾರದ ವಿರುದ್ಧ ಆರೋಪ, ಟೀಕೆಗಳು ಮಾತ್ರವಲ್ಲದೆ ಜನರ ಅಹವಾಲುಗಳಿಗೆ ಒತ್ತಾಸೆ ನೀಡಿ ಅವರ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪಕ್ಷ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರು ಮಹಾನಗರ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಭೆ ಸೋಮವಾರ ನಡೆಯಲಿದೆ. ಬ್ರಾ್ಯಂಡ್ ಬೆಂಗಳೂರು ಚರ್ಚೆಗೆ ಒತ್ತು ನೀಡಿ, ವಾಸ್ತವ ಮರೆಮಾಚುತ್ತಿರುವ ಸರ್ಕಾರದ ವೈಖರಿಗೆ ಕೈಗನ್ನಡಿ ಹಿಡಿಯಲು ಶಾಸಕರ ಸಾರಥ್ಯದಲ್ಲಿ ಹೋರಾಟ ನಡೆಸಲು ಯೋಚಿಸಿದೆ. ಹಳೇ ಬಿಲ್ ಪಾವತಿಗೆ ಕಮಿಷನ್ ಕೇಳಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಗುತ್ತಿಗೆದಾರರು ನೇರವಾಗಿ ಆರೋಪಿಸಿ, ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪವನ್ನು ಕಾಂಗ್ರೆಸ್ ಮುಂದಿಟ್ಟು, ಆಕ್ರಮಣಾಕಾರಿ ದಾಳಿ ನಡೆಸಿತ್ತು. ಇದೀಗ ಗುತ್ತಿಗೆದಾರರು ರಾಜ್ಯಪಾಲರಿಗೆ ನೇರ ದೂರು ಸಲ್ಲಿಸಿದ್ದು, ದಯಾಮರಣಕ್ಕೆ ಮೊರೆಯಿಟ್ಟ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ತೀವ್ರಗೊಳಿಸಲು ಉದ್ದೇಶಿಸಿದೆ.
ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮನೆ ಮನೆ ಮೇಲೆ ರಾಷ್ಟ್ರ ಬಾವುಟ (ಹರ್ ಘರ್ ತಿರಂಗಾ) ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ನಿಮಿತ್ತ ವಿವಿಧ ಚಟುವಟಿಕೆಗಳನ್ನು ರಾಜ್ಯ ಬಿಜೆಪಿ ತಯಾರಿ ನಡೆಸಿದೆ. ಎರಡು ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲೆಂದು ಪಕ್ಷದ ರಾಜ್ಯ ಪದಾಧಿಕಾರಿಗಳು ಮತ್ತು ಮಾಜಿ ಸಚಿವರು, ಶಾಸಕರನ್ನು ಒಳಗೊಂಡ ರಾಜ್ಯಮಟ್ಟದ ಸಮಿತಿ ರಚನೆಯಾಗಿದೆ. ತಂಡದಲ್ಲಿರುವ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಗಳಿಗೆ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮದ ರೂಪರೇಷೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಆಯಾ ಬೂತ್, ಮಂಡಲ ಹಾಗೂ ಜಿಲ್ಲಾಮಟ್ಟದ ಸಿದ್ಧತೆ, ಆಸಕ್ತಿ ಹಾಗೂ ಕಾಲಾವಕಾಶಕ್ಕೆ ತಕ್ಕಂತೆ ಎರಡರಿಂದ ಮೂರು ದಿನಗಳ ಕಾಲ ಈ ಕಾರ್ಯಕ್ರಮಗಳು ನಡೆಯಲಿವೆ.
ಪಂಜಿನ ಮೆರವಣಿಗೆ, ಉಪನ್ಯಾಸ:ಸ್ವಾತಂತ್ರ್ಯೋತ್ಸವ ಮುನ್ನಾದಿನ ‘ಭಾರತ ವಿಭಜನೆಯ ದುರಂತ ಕಥೆ’ ಕುರಿತು ಉಪನ್ಯಾಸ, ಸ್ವಾತಂತ್ರ್ಯ ಚಳವಳಿಗೆ ಧುಮುಕಿ ತ್ಯಾಗ, ಬಲಿದಾನ ಮಾಡಿದವರ ಸ್ಮರಣೆ, ಇತಿಹಾಸ ಮೆಲುಕು ಹಾಕುವ ಪ್ರದರ್ಶಿಕೆ, ಪಂಜಿನ ಮೆರವಣಿಗೆಗಳು ನಡೆಯಲಿವೆ.
‘ವೈಭವಶಾಲಿ, ಸುಭಿಕ್ಷ ಭಾರತ’ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರ ಕನಸು. ಇದನ್ನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮ. ಈ ಪರಿಕಲ್ಪನೆಯಡಿ ಸ್ವಾತಂತ್ರ್ಯೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ತಯಾರಿ ನಡೆದಿದೆ.
| ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ. ರಾಜ್ಯ ಬಿಜೆಪಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರೋಪ ನಿಮಿತ್ತ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ನಿಮಿತ್ತ ಹುತಾತ್ಮ ಯೋಧರ ಸ್ಮರಣೆ, ಗೌರವ ನಮನ ಸಲ್ಲಿಸಲಾಗುತ್ತದೆ. ಕೇಂದ್ರ ಸರ್ಕಾರದ ಯುವಜನ ಸಬಲೀಕರಣ ಈ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಕೈಜೋಡಿಸಲು ಪಕ್ಷದ ಬೂತ್, ಮಂಡಲ ಮತ್ತು ಜಿಲ್ಲಾಮಟ್ಟದ ತಂಡಗಳು ಸನ್ನದ್ಧವಾಗಿವೆ. ದೇಶದ ಸ್ವಾತಂತ್ರ್ಯ, ರಕ್ಷಣೆಗಾಗಿ ಬಲಿದಾನವಾದವರ ಕೃತಜ್ಞತಾ ಪೂರ್ವಕ ನೆನಪು, ದೇಶದ ಬಗ್ಗೆ ಅಭಿಮಾನ ಹಾಗೂ ಅರ್ಪಣಾಮನೋಭಾವಕ್ಕೆ ಉತ್ತೇಜಿಸುವುದು ಅಭಿಯಾನದ ಉದ್ದೇಶ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರರಿಗೆ ಗೌರವ ಸಲ್ಲಿಸಲು ಗ್ರಾಮ ಪಂಚಾಯಿತಿಗೆ ಒಂದು ಶಿಲಾಫಲಕ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಸವೋಚ್ಚ ತ್ಯಾಗ ಮಾಡಿದ ಎಲ್ಲ ಧೈರ್ಯಶಾಲಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಭಾಗವಾಗಿ ಈ ಕಾಯಕ್ರಮ ಕೈಗೆತ್ತಿಕೊಳ್ಳಲಾಗಿದೆ.
ಪಕ್ಷದ ರಾಜ್ಯ ಸಂಘಟನೆ ಪುನರ್ ರಚನೆ ಚಿಂತೆ ಬಿಡಿ, ಪ್ರತಿಪಕ್ಷದ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿ ಎಂಬ ಖಡಕ್ ಸೂಚನೆ ಕೆಲವು ನಾಯಕರಿಗೆ ನೀಡಲಾಗಿದೆ. ಭಾರಿ ಮಳೆ, ಪ್ರವಾಹ ಸಂದರ್ಭದಲ್ಲಿ ಹಾನಿಗೀಡಾದ ಪ್ರದೇಶಕ್ಕೆ ತಕ್ಷಣವೇ ಭೇಟಿಯಿತ್ತು, ಜನರಿಗೆ ಸಾಂತ್ವನ ಹೇಳುವ ಜತೆಗೆ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಕೈಗೂಡಿಲ್ಲ. ಮಳೆ ಕಡಿಮೆಯಾಗಿರುವ ಕಾರಣ ರೈತರು ಮತ್ತೆ ಸಂಕಷ್ಟ ಸಿಲುಕಿದ್ದಾರೆ. ಹಲವೆಡೆ ಕಲುಷಿತ ಕುಡಿವ ನೀರಿನಿಂದ ಸಾವು-ನೋವುಗಳು ಸಂಭವಿಸಿವೆ. ಬಾಧಿತ ಪ್ರದೇಶ ಹಾಗೂ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಮಾಹಿತಿ ಸಂಗ್ರಹ. ಆಧಾರ, ಪುರಾವೆ ಸಹಿತ ಸರ್ಕಾರದ ವೈಫಲ್ಯ ಬಹಿರಂಗಪಡಿಸಲು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ರಾಹುಲ್ ಗಾಂಧಿಗೆ ಹಾಲಿವುಡ್​​ನಿಂದ ಪ್ರಪೋಸಲ್ಸ್​ ಇವೆ, ಅವರ್ಯಾಕೆ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ಕೊಡ್ತಾರೆ?: ಸಾರಿಕಾ ಪಾಸ್ವಾನ್

ವೈದ್ಯರು ಜನರಿಕ್ ಔಷಧ ಬರೆಯುವುದು ಕಡ್ಡಾಯ, ತಪ್ಪಿದರೆ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
