ಹುಬ್ಬಳ್ಳಿ:ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಅಸಹ್ಯಕರ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದ ಕಿರಾತಕರು, ಇದೀಗ ಬಿಜೆಪಿ ನಾಯಕರಾದ ಮೋದಿ, ಯೋಗಿ ಆದಿತ್ಯನಾಥ್ ಮುಂತಾದವರು ಟಿಪ್ಪುವಿಗೆ ತಲೆ ಬಾಗುತ್ತಿರುವಂತೆ ಫೋಟೊಗಳನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಬೆನ್ನೆಲ್ಲೇ ಮತ್ತೊಂದು ವಿಡಿಯೋವನ್ನು ಕಿರಾತಕರು ವೈರಲ್ ಮಾಡಿದ್ದು ಇದು ಪ್ರಚೋದನಕಾರಿ ವಿಡಿಯೋ ಆಗಿದೆ.
ಇದನ್ನೂ ಓದಿ:ಹಿಂದೂ ಯುವತಿಯರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್​ ಮಾಡಿ ಪೋಸ್ಟ್ ಮಾಡಿದ ವಿದ್ಯಾರ್ಥಿ! ಹುಬ್ಬಳ್ಳಿ ಪೊಲೀಸರಿಗೆ ಚಾಲೆಂಜ್ ಮಾಡಿದ ಕಿರಾತಕ…
ಇವರ ವಿರುದ್ಧ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಬಳಸಿಕೊಂಡು ಅಸಹ್ಯಕರ ವಿಡಿಯೊ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಕ್ಕೆ ಪ್ರಕರಣ ದಾಖಲಾಗಿದೆ. ಆದರೂ ಇದೀಗ ಪ್ರಚೋದನಾಕಾರಿ ವಿಡಿಯೋಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು 8 ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಈ ವಿಡಿಯೋಗಳ ತುಣಕುಗಳನ್ನು ಪರಿಶೀಲನೆಗೆಂದು ಸೈಬರ್ ಪ್ರಯೋಗಾಲಯಕ್ಕೂ ಪೊಲೀಸರು ಕಳಿಸಿದ್ದಾರೆ.
ಇದನ್ನೂ ಓದಿ:Hubballi Women Starts Crying In Front Of CM Siddaramaiah | ಸಿಎಂ ಸಿದ್ರಾಮಯ್ಯ ಮುಂದೆ ಅಳಲು ತೋಡಿಕೊಂಡ ಹುಬ್ಬಳ್ಳಿ ಮಹಿಳೆಯರು
ಇದೆಲ್ಲದರ ಮಧ್ಯೆಯೂ ಈ ಕಿರಾತಕರು, ತಾಕತ್ತಿದ್ದರೆ ಹಿಡಿಯಿರಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೇ ಇವರು, ಭಾರತೀಯ ನೋಟುಗಳ ಮೇಲಿನ ಮಹಾತ್ಮಾ ಗಾಂಧಿ ಫೋಟೊವನ್ನು ಎಡಿಟ್ ಮಾಡಿ ತೆಗೆದು, ಟಿಪ್ಪುವಿನ ಭಾವಚಿತ್ರ ಹಾಕಿ ಎಡಿಟ್ ಮಾಡಿದ್ದಾರೆ. ಆರೋಪಿ ಉದ್ದೇಶ ಏನು ಎನ್ನುವುದು ಇನ್ನೂ ಬಯಲಾಗದೇ ಇದ್ದು ಇದು ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
