ಹುಬ್ಬಳ್ಳಿ:ಸುಮಾರು 11 ವರ್ಷಗಳ ಹಿಂದೆ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ಕೆಲ ಸದಸ್ಯರು ವಿವಾದಕ್ಕೆ ಸಿಲುಕಿದ್ದು ಈಗಲೂ ವಿವಾದದ ಬಿಸಿ ಆರಿಲ್ಲ. ಈ ಸಂದರ್ಭದಲ್ಲಿ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಆದೇಶ ನೀಡುವುದಕ್ಕೂ ಮುನ್ನವೇ ಸಿನಿಮಾ ನಿರ್ಮಾಣ ಮಾಡಲು ಕೆಲವರು ಮುಂದಾಗಿರುವುದನ್ನು ನೆನೆಸಿಕೊಳ್ಳಬಹುದು.
ಇದನ್ನೂ ಓದಿ:ಸೌಜನ್ಯಾ ಪ್ರಕರಣ ಬಳಸಿಕೊಂಡು ಶ್ರೀಕ್ಷೇತ್ರದ ಪಾವಿತ್ರ್ಯತೆ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ: ಡಾ| ವೀರೇಂದ್ರ ಹೆಗ್ಗಡೆ
ಇದೀಗ ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿರುವ ಜೈನ ಮುನಿ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕ ಶಾಂತಿಯ ತೋಟ. ಇಂತಹ ರಾಜ್ಯದಲ್ಲಿ ಹಿಂಸಾ ಕೃತ್ಯ ನಡೆಯಬಾರದಿತ್ತು. ಅಹಿಂಸಾ ತತ್ವದಿಂದ ನಮ್ಮ ದೇಶ ಸ್ವಾತಂತ್ರ್ಯಗೊಂಡಿದೆ. ಕಳೆದ ಕೆಲ ವರ್ಷಗಳ ಹಿಂದೆ ಒಂದು ದುರ್ಘಟನೆ ನಡದಿದೆ
ಸೌಜನ್ಯ ಮರ್ಡರ್ ಕೇಸ್​ನಿಂದಾಗಿ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಯಾರೂ ಮರ್ಡರ್ ಮಾಡಬಾರದು. ಆದರೆ ಯಾರು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಲೇಬೇಕು. ಅವರ ಮನಪರಿವರ್ತನೆ ನಡೆದು ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಆದ್ರೆ ಇದನ್ನು ಇಟ್ಟುಕೊಂಡು ಧರ್ಮಾಧಿಕಾರಿ ಹೆಗಡೆ ಅವರ ಬಗ್ಗೆ ಯಾರು ಮಾತನಾದ್ರೂ ನಾನು ಸಹಿಸಲ್ಲ.
ಇದನ್ನೂ ಓದಿ:ದ್ವೇಷಕ್ಕಾಗಿ ಧರ್ಮಸ್ಥಳದ ಹೆಸರು ದುರ್ಬಳಕೆ: ಡಾ.ವೀರೇಂದ್ರ ಹೆಗ್ಗಡೆ
ಅವರ ಅಪರಾಧಿ ಆಗಿದ್ದಲ್ಲಿ ಅವರಿಗೆ ಜೈಲಾಗಲಿ. ಅವರು ಅಪರಾಧಿ ಎಂದು ಯಾರೂ ನಿರ್ಧಾರ ಮಾಡೋಕೆ ಸಾಧ್ಯ ಇಲ್ಲ. ಅದಕ್ಕೆ ಆದರದೇ ಆದ ತನಿಖೆ ಇದೆ. ನಮಗೆ ಗೃಹ ಸಚಿವರು ಪೊಲೀಸರು ಮೇಲೆ ನಂಬಿಕೆ ಇದೆ. ಒಳ್ಳೆ ಆಡಳಿತ ನೀಡಿದ ಸಿದ್ದರಾಮಯ್ಯ ಇದಾರೆ ಅವರ ಮೇಲೆ ನಂಬಿಕೆ ಇದೆ
ಸೌಜನ್ಯ ಗೆ ನ್ಯಾಯ ಸಿಗಬೇಕು,ಆದ್ರೆ ಮುಖವಾಡ ಹೊತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡಬಾರದು. ಧರ್ಮಸ್ಥಳಕ್ಕೆ ಎಲ್ಲ ಧರ್ಮದವರು ಹೋಗ್ತಾರೆ. ಅನ್ನ ದಾಸೋಹ ಮಾಡಿದ ದೇವಸ್ಥಾನದ ಬಗ್ಗೆ ಅಪಪ್ರಚಾರ ಸರಿ ಅಲ್ಲ. ಅವರ ಬಗ್ಗೆ ಪದೇ ಪದೇ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ಕೊಡ್ತಿದಾರೆ. ಇದೂ ಒಂದು ಹಿಂಸೆ. ದೇಹದ ನೋವಿಗಿಂತ ಮನಸ್ಸಿಗೆ ಆಗೋ ನೋವು ಹೆಚ್ಚು ನೋವು ಕೊಡುತ್ತೆ” ಎಂದು ಸ್ವಾಮೀಜಿ ಹೇಳಿದ್ದಾರೆ.
ಇನ್ನು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಟಾರ್ಗೆಟ್​ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, “ಆಧಾರ ರಹಿತವಾಗಿ ಟಾರ್ಗೆಟ್ ಮಾಡೋದು ಸರಿ ಅಲ್ಲ. ಪದೇ ಪದೇ ಟಾರ್ಗೆಟ್ ಮಾಡೋದು ಮಾನಸಿಕ ಹಿಂಸೆ ನೀಡುತ್ತದೆ” ಎಂದು ಪರೋಕ್ಷವಾಗಿ ವೀರೇಂದ್ರ ಹೆಗ್ಗಡೆ ಅವರಿಗೆ ಮಾನಸಿಕ ಹಿಂಸೆ ಕೊಡಲಾಗುತ್ತಿದೆ” ಎಂದು ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ:ಬದುಕಿನ ಅವಿಭಾಜ್ಯ ಅಂಗ ಜಲಮೂಲಕ್ಕೆ ಕೃತಜ್ಞತೆ ಸಲ್ಲಿಸಬೇಕು; ಡಾ.ಡಿ ವೀರೇಂದ್ರ ಹೆಗ್ಗಡೆ
ಇನ್ನು ವೀರೇಂದ್ರ ಹೆಗ್ಗಡೆಯವರ ಜತೆಗೂ ಮಾತನಾಡಿರುವುದಾಗಿ ಸ್ವಾಮೀಜಿ ಹೇಳಿದ್ದು ಈ ಕುರಿತಾಗಿಯೂ ಮಾಹಿತಿ ನೀಡಿದ್ದಾರೆ. ಅವರು, “ನಾನು ಸರ್ಕಾರಕ್ಕೆ ಮನವಿ ಮಾಡ್ತೀನಿ,ಅಪಪ್ರಚಾರ ಆಗಬಾರದು. ನಾನು ವೀರೇಂದ್ರ ಹೆಗಡೆ ಅವರ ಜೊತೆ ಮಾತಾಡಿದ್ದೇನೆ. ಅವರು ಕೂಡ ‘ನನಗೆ ಪದೇ ಪದೇ ಟಾರ್ಚರ್ ಕೊಡ್ತೀದಾರೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡ್ತಿದಾರೆ.
ಇದನ್ನೂ ಓದಿ:ಕೃಷಿ ಇಲ್ಲದೇ ನಮ್ಮೆಲ್ಲರ ಜೀವನ ಸಾಗಲ್ಲ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಹೇಳಿಕೆ
ಇನ್ನು ಧರ್ಮಸ್ಥಳಕ್ಕೆ ಹೋಗಲ್ಲ ಅನ್ನೋ ಮಾತಿನ ವಿಚಾರವಾಗಿ ಪ್ರತಿಕ್ರಿತಯೆ ನೀಡಿದ ಸ್ವಾಮೀಜಿಗಳು, “ಧರ್ಮ ಬೇರೆ ನ್ಯಾಯಾಂಗ ಬೇರೆ. ಮಂಜುನಾಥ ಸ್ವಾಮಿ ಏನೂ ತಪ್ಪು ಮಾಡಿಲ್ಲ. ನಾವು ಬೇಕಾಗಿ ದೇವರ ಹತ್ರ ಹೋಗ್ತೀವಿ,ದೇವರ ಏನು ಬಾ ಅನ್ನಲ್ಲ. ಹೋಗೋರು ಹೋಗಬಹುದು,ಬಿಟ್ಟರೆ ಬಿಡಬಹುದು” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
