ಹುಬ್ಬಳ್ಳಿ:ಶ್ರೇಯಾನಗರ ನಿವಾಸಿಗಳ ಸಂಘದ ಸಹಯೋಗದಲ್ಲಿ ದಿವ್ಯಚೇತನ ಯೋಗ ಇದರ ವತಿಯಿಂದ ಶ್ರೇಯಾನಗರದ ಉದ್ಯಾನವನದಲ್ಲಿ 9ನೇ ಅಂತಾರಾಷ್ಟ್ರೀಯ ವಿಶ್ವಯೋಗ ದಿನ ಆಚರಿಸಲಾಯಿತು.
ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಅಧ್ಯಕ್ಷೆ ಪ.ಪೂ. ಮಾತಾಜಿ ತೇಜೋಮಯಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯನಿಗೆ ಪಂಚೇಂದ್ರಿಯಗಳು ಅತೀ ಮುಖ್ಯವಾದವು. ಆದರೆ ಅವುಗಳನ್ನು ನಿಯಂತ್ರಿಸುವುದು ಮನಸ್ಸು. ಈ ಮನಸ್ಸನ್ನು ಸದೃಢವಾಗಿ ಸೌಖ್ಯವಾಗಿ ಇಟ್ಟುಕೊಳ್ಳಲು ಯೋಗ ಅತಿ ಮುಖ್ಯ. ಪ್ರತಿ ನಿತ್ಯ 20 ನಿಮಿಷ ಯೋಗ, 10 ನಿಮಿಷ ಧ್ಯಾನ ಮಾಡುವುದರಿಂದ ನಾವು ಶಾರೀರಿಕವಾಗಿ, ಬೌದ್ಧಿಕವಾಗಿ ಸದೃಢರಾಗಲು ಸಾದ್ಯ ಎಂದರು.
ನಿಮ್ಮ ಮಕ್ಕಳಿಗೆ ನೀವೇ ಆದರ್ಶ. ಅದ್ಭುತವಾದ ಚಾರಿತ್ರ್ಯ ಸೇವಾ ಮನೋಭಾವದ ಜತೆಗೆ ಶಕ್ತಿಯುತವಾದ ಮಕ್ಕಳನ್ನು ಸಮಾಜಕ್ಕೆ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದೇ ನಿಜವಾದ ದೇಶ ಸೇವೆ ಎಂದು ಪ.ಪೂ. ಮಾತಾಜಿ ತೇಜೋಮಯಿ ತಿಳಿಸಿದರು.
ದಿವ್ಯಚೇತನ ಯೋಗದ ನಾಗರಾಜ ಜಾಲಿಹಾಳ ಯೋಗಾಸಕ್ತರಿಗೆ ನಿತ್ಯ ಯೋಗದ ಮಹತ್ವ ವಿವರಿಸುತ್ತಾ ಯೋಗಾಭ್ಯಾಸ ಮಾಡಿಸಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಜೆ.ಎಂ. ಕಲಿಮಿರ್ಚಿ, ಠಾಣಾ ಸಿಬ್ಬಂದಿ, ರೋಟರಿ ಕ್ಲಬ್– ಪಶ್ಚಿಮ ಇದರ ಸದಸ್ಯರು ಭಾಗವಹಿಸಿದ್ದರು. ಶ್ರೇಯಾನಗರ ನಿವಾಸಿಗಳ ಸಂಘದ ಅಧ್ಯಕ್ಷ ಪ್ರಕಾಶ ತೋಟದ, ಸ್ವಾಗತಿಸಿದರು. ಶ್ರೇಯಾನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ದಿನಾಚರಣೆಯ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nine =
Remember me
