| ಆನಂದ ಅಂಗಡಿ ಹುಬ್ಬಳ್ಳಿ
ಬಹುದಿನಗಳ ಬೇಡಿಕೆಯಾದ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗದ ಡಬಲ್ ಲೈನ್ ರಚನೆಗೆ ಸರ್ವೆ ನಡೆಸಲು ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.
ಹುಬ್ಬಳ್ಳಿಅಂಕೋಲಾ ರೈಲು ಮಾರ್ಗದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದೀಗ ಹಸಿರು ನ್ಯಾಯಾಧಿಕರಣ ಪೀಠದ ಮುಂದಿದೆ. ಇದರ ಮಧ್ಯೆಯೇ ರೈಲ್ವೆ ಸಚಿವಾಲಯ ದ್ವೀಪಥ ಮಾರ್ಗ ನಿಮಾಣಕ್ಕೆ ನೀಡಿರುವ ಸೂಚನೆ ಇಲ್ಲಿನ ವ್ಯಾಪಾರಸ್ಥರು, ಉದ್ಯಮಿಗಳು ಸೇರಿ ಸಾರ್ವಜನಿಕರಲ್ಲಿ ಹೊಸ ಆಶಯ ಹುಟ್ಟಿಸಿದೆ.
ಹುಬ್ಬಳ್ಳಿ-ಅಂಕೋಲಾ ಮಧ್ಯೆ ಏಕಪಥ ರೈಲು ಮಾರ್ಗ ನಿರ್ವಿುಸಿದರೆ ವೇಗ ಹಾಗೂ ಸರಳ ಸಂಚಾರಕ್ಕೆ ಅಡಚಣೆ ಆಗುತ್ತದೆ. ಹೀಗಾಗಿ ಒಂದೇ ಬಾರಿಗೆ ದ್ವಿಪಥ ರೈಲು ಮಾರ್ಗ ನಿರ್ವಿುಸಿದರೆ ಮೇಲಿಂದ ಮೇಲೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಕಾರ್ಯ, ರೈಲ್ವೆ ಕಾಮಗಾರಿಯಿಂದ ಎರಡೆರೆಡು ಬಾರಿ ಆಗುವ ತೊಂದರೆ ತಪ್ಪುತ್ತದೆ. ಹೀಗಾಗಿ, ಒಂದೇ ಬಾರಿಗೆ ದ್ವಿಪಥ ಮಾರ್ಗದ ಸರ್ವೆ ನಡೆಸುವಂತೆ ರೈಲ್ವೆ ಸಚಿವಾಲಯವು ನೈಋತ್ಯ ರೈಲ್ವೆಗೆ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಸಭೆ ನಡೆಸುವಂತೆ ಹಾಗೂ ಸರ್ವೆ ಕಾರ್ಯಕ್ಕೆ ಬೇಕಾದ ವಿಸõತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ರೈಲ್ವೆ ಸಚಿವಾಲಯವು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
1996- 97ರಲ್ಲಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ನಿಮಾಣ ಯೋಜನೆ ಮಂಜೂರಾಗಿತ್ತು. ಆಗ ಯೋಜನೆಯ ಮೊತ್ತ 483 ಕೋಟಿ ರೂ. ಸಹ ಮಂಜೂರು ಮಾಡಲಾಗಿತ್ತು. ಆದರೆ, ಪರಿಸರವಾದಿಗಳು ನ್ಯಾಯಾಲಯ ದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಒಟ್ಟು 167 ಕಿಮೀ ಉದ್ದದ ಹುಬ್ಬಳ್ಳಿಅಂಕೋಲಾ ರೈಲು ಮಾರ್ಗದಲ್ಲಿ 2006ರವರೆಗೆ ಹುಬ್ಬಳ್ಳಿಕಲಘಟಗಿ ಮಧ್ಯೆ 46 ಕಿಮೀ ಮಾರ್ಗಕ್ಕಾಗಿ ಭೂಮಿ ವಶಪಡಿಸಿಕೊಂಡು ರೈಲ್ವೆ ಇಲಾಖೆ ಕಾಮಗಾರಿ ಪ್ರಾರಂಭಿಸಿತ್ತು. ಇದೀಗ ದ್ವಿಪಥ ರೈಲು ಮಾರ್ಗ ನಿಮಾಣದ ಬಗ್ಗೆ ಸರ್ವೆ ನಡೆಸುವಂತೆ ರೈಲ್ವೆ ಸಚಿವಾಲಯ ನೀಡಿರುವ ಸೂಚನೆಯಿಂದಾಗಿ ಈ ಭಾಗದ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಲಯದಲ್ಲಿ ಹೊಸ ಆಶಯಗಳು ಗರಿಗೆದರಿವೆ. ಈ ಯೋಜನೆಯಿಂದ ಅಭಿವೃದ್ಧಿಗೂ ವೇಗ ದೊರೆಯಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅರಣ್ಯ ಮಧ್ಯದಲ್ಲಿ ಸಂಚಾರ:ಮೇ 15ರಂದು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. 167 ಕಿಮೀ ಉದ್ದದ ಹುಬ್ಬಳ್ಳಿಅಂಕೋಲಾ ರೈಲು ಮಾರ್ಗವು ಅರಣ್ಯ ಮಧ್ಯದಲ್ಲಿ ಹಾದುಹೋಗಲಿದೆ. ಎರಡೆರಡು ಸಲ ಅರಣ್ಯಭೂಮಿ ಸ್ವಾಧೀನಪಡಿಸಿಕೊಳ್ಳುವ ತೊಂದರೆ ತಪ್ಪಿಸಲು ಡಬಲ್ ಲೈನ್ ಸರ್ವೆಗಾಗಿ ಡಿಪಿಆರ್ ಸಿದ್ಧಪಡಿಸಬೇಕು. ಈ ಬಗ್ಗೆ ಎನ್​ಎಚ್​ಎಐ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಜಂಟಿ ಸಭೆ ನಡೆಸಬೇಕು ಎಂದು ಸಹ ಅಧಿಕಾರಿಗಳಿಗೆ ಸೂಚಿಸಿದೆ.
ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + nine =
Remember me
