ಹುಬ್ಬಳ್ಳಿ:ಪ್ರೀತಿಸಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪಾಗಲ್ ಪ್ರೇಮಿಯೊಬ್ಬ ಯುವತಿಯ ತಲೆಗೆ ಮಚ್ಚಿನಿಂದ ಹಲ್ಲೆಗೈದ ಘಟನೆ ದೇಶಪಾಂಡೆ ನಗರದ ಪ್ರವಾಸಿ ಮಂದಿರದ ಬಳಿ ಸೋಮವಾರ ನಡೆದಿದೆ.
ದೇಶಪಾಂಡೆ ನಗರದ ಆಶಾ ದೋಬಿ ಅಕ್ಸರ (21) ಹಲ್ಲೆಗೀಡಾದ ಯುವತಿ. ರಾಮಾಪುರ ಗ್ರಾಮದ ಇಸ್ಮಾಯಿಲ್ ಕುಂಕೂರ ಹಲ್ಲೆ ನಡೆಸಿದ ಪಾಗಲ್ ಪ್ರೇಮಿ. ಮೂಲತಃ ಮೊರಬ ಗ್ರಾಮದ ಆಶಾ 10 ವರ್ಷದಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ನಗರದ ಸೀಮಾ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ‌.
ಇದನ್ನೂ ಓದಿ:ಅಕ್ಕನಿಂದಲೇ 15 ವರ್ಷದ ತಂಗಿಯ ಮೇಲೆ ನಿರಂತರ ರೇಪ್​: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆ ಇದು!
ನಿತ್ಯ ಆಶಾಳನ್ನು ಅಂಗಡಿಗೆ ಡ್ರಾಪ್ ಮಾಡುತ್ತಿದ್ದ ಇಸ್ಮಾಯಿಲ್ ಇಂದು ಆಕೆ ನಡೆದುಕೊಂಡು ಹೊರಟಿದ್ದಾಗ ಮಚ್ಚಿನಿಂದ ಹೊಡೆದಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿ, ಆಶಾಳನ್ನು ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿ ಪ್ರಜ್ಞಾವಸ್ಥೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!
ಹೆಸರು ತಂದಿಟ್ಟ ಗ್ರಹಚಾರ: ಜಾಮೀನು ಸಿಕ್ಕರೂ ಎಂಟು ತಿಂಗಳು ಮಾಡಲಿಲ್ಲ ಬಿಡುಗಡೆ!

ಐದೇ ದಿನದಲ್ಲಿ ಎರಡು ಮದುವೆಯಾಗಿ ಟೆಕ್ಕಿ ಪರಾರಿ: ರಹಸ್ಯ ಮದ್ವೆ ಬಯಲಾದ ಕತೆಯೇ ರೋಚಕ!

ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
