ಬೆಂಗಳೂರು:ಕಳೆದ ಸೋಮವಾರ(ಮೇ.01) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಲಖನೌ ಸೂಪರ್​ ಜೈಂಟ್ಸ್​ ನಡುವೆ ನಡೆದ ಹಣಾಹಣಿ ಆಟಗಾರರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮ್ಯಾನ್​ ವಿರಾಟ್​ ಕೊಹ್ಲಿ ಹಾಗೂ ಲಖನೌ ತಂಡದ ಮೆಂಟರ್​ ಗೌತಮ್​ ಗಂಭೀರ್​ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದೀಗ ಈ ವಿಷಯವನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಜನರಿಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಪೊಲೀಸ್, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಇನ್ನಿತರ ತುರ್ತು ಸೇವೆಗಳಿಗೆ 112 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದರೆ ಸ್ಪಂದನೆ ದೊರಕುತ್ತದೆ.
ಇದೀಗ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಕೊಹ್ಲಿ ಹಾಗೂ ಗಂಭೀರ್ ನಡುವಿನ ಮಾತಿನ ಚಕಮಕಿ ಫೋಟೋ ಬಳಸಿ ಟ್ವೀಟ್ ಮಾಡಿದ್ದು, ಯಾವುದೇ ‘ಗಂಭೀರ’ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ. ‘ವಿರಾಟ’ ರೂಪದಲ್ಲಿ ಸಹಾಯ ಮಾಡಲು ಹು-ಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ ಎಂದು ಹೇಳಿಕೊಂಡಿದೆ.

ಅಂತಾ ಟೈಮ್ ನ್ಯಾಗ ನೀವ ನಮ್ಮ#ERSS112ಗ ಕಾಲ್ ಮಾಡ್ಬೇಕಿತ್ರೀ..ಯಾವುದೇ#ಗಂಭೀರಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112incase of any emergency..!#RCBVSLSG#ViratKohli@RCBTweetspic.twitter.com/efvrz7PXFo
ಹು-ಧಾ ನಗರ ಪೊಲೀಸರು ಮಾಡಿರುವ ಜಾಗೃತಿಯ ಟ್ವೀಟ್ ಇದೀಗ ಸಾರ್ವಜನಿಕರ ಗಮನ ಸೆಳೆದಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದರೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಿ, ಅಗತ್ಯ ನೆರವು ನೀಡುತ್ತದೆ.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಆರ್​ಎಸ್ 112 ಎರಡು ತ್ರೈಮಾಸಿಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. 2022ರ ಜುಲೈ-ಸೆಪ್ಟೆಂಬರ್ ಮತ್ತು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕ್ರಮವಾಗಿ ಸಾರ್ವಜನಿಕರು ಕರೆ ಮಾಡಿದ ಸರಾಸರಿ 5 ನಿಮಿಷಗಳ ಒಳಗಾಗಿ ಸ್ಪಂದಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
