ಹುಬ್ಬಳ್ಳಿ:ಯುವತಿ ಮೇಲೆ ಪಾಗಲ್ ಪ್ರೇಮಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬುರಾಮ್ ಸಿಂಗ್, ಯುವಕ-ಯುವತಿ ನಡುವೆ ಹಿಂದಿನಿಂದಲೂ ಪರಿಚಯವಿತ್ತು ಎಂದಿದ್ದಾರೆ.
ಯುವತಿ ಮನೆ ಹತ್ತಿರವೇ ಬೆಳಿಗ್ಗೆ 10 ಗಂಟೆಗೆ ಹಲ್ಲೆ ಆಗಿದೆ. ಆರೋಪಿ ಇಸ್ಮಾಯಿಲ್ ಯುವತಿಯ ಮನೆ ಹತ್ತಿರ ಕಾಯ್ದು ನಿಂತು ಅವಳು ಬರುತ್ತಿದುದ್ದನ್ನು ನೋಡಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ನಿತ್ಯ ನರಕ ಅನುಭವಿಸ್ತಿದ್ದ ಯುವತಿಯನ್ನು ದತ್ತು ಪಡೆದು ಮದ್ವೆ ಮಾಡಿಕೊಟ್ಟು ಮಾನವೀಯತೆ ಮೆರೆದ ದಂಪತಿ!
ಸದ್ಯ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದೇವೆ ಎಂದು ಲಾಬುರಾಮ್​ ಸಿಂಗ್​ ಹೇಳಿದರು.
ಘಟನೆ ಹಿನ್ನೆಲೆದೇಶಪಾಂಡೆ ನಗರದ ಆಶಾ ದೋಬಿ ಅಕ್ಸರ (21) ಮೇಲೆ ರಾಮಾಪುರ ಗ್ರಾಮದ ಇಸ್ಮಾಯಿಲ್ ಕುಂಕೂರ ಇಂದು ಬೆಳಗ್ಗೆ ಹಲ್ಲೆ ನಡೆಸಿದ್ದಾನೆ. ಮೂಲತಃ ಮೊರಬ ಗ್ರಾಮದ ಆಶಾ 10 ವರ್ಷದಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ನಗರದ ಸೀಮಾ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ‌. ನಿತ್ಯ ಆಶಾಳನ್ನು ಅಂಗಡಿಗೆ ಡ್ರಾಪ್ ಮಾಡುತ್ತಿದ್ದ ಇಸ್ಮಾಯಿಲ್ ಇಂದು ಆಕೆ ನಡೆದುಕೊಂಡು ಹೊರಟಿದ್ದಾಗ ಮಚ್ಚಿನಿಂದ ಹೊಡೆದಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ಬಂಧಿಸಿ, ಆಶಾಳನ್ನು ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಅಕ್ಕನಿಂದಲೇ 15 ವರ್ಷದ ತಂಗಿಯ ಮೇಲೆ ನಿರಂತರ ರೇಪ್​: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆ ಇದು!
ಪ್ರೀತಿಸಲು ನಿರಾಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯಿಂದ ಯುವತಿಗೆ ಮಚ್ಚಿನೇಟು: ಸ್ಥಳೀಯರಿಂದ ರಕ್ಷಣೆ!

ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
