ಹುಬ್ಬಳ್ಳಿ:ನಾವು ನಮ್ಮ ಪುಂಗಿ ಊದುತ್ತೇವೆ. ನಮ್ಮ ಪುಂಗಿ ಮುಂದ ನಿಮ್ಮ ಪುಂಗಿ ನಡಿಯೋದಿಲ್ಲ ಎಂದು ಗಣೇಶ ಮಂಡಳಿಗಳಿಗೆ ಪೊಲೀಸ್ ಅಧಿಕಾರಿ ಶಾಮರಾವ್ ಸಜ್ಜನರ್​​ ಹೇಳಿರುವ ವಿಡಿಯೋ ವೈರಲ್ ಆಗಿದೆ.
ನಗರದ ಬೆಂಡಿಗೇರಿ ಪೊಲೀಸ್​ ಠಾಣೆಯ ಇನ್ಸ್‌ಪೆಕ್ಟರ್ ಸಜ್ಜನರ್​ ಅವರು ತಮ್ಮದೇ ಆದ ಶೈಲಿಯಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ ಹಾಕಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿರುವ ಇನ್ಸ್‌ಪೆಕ್ಟರ್ ಸಜ್ಜನರ್​ ಅವರು, ಪರೋಕ್ಷವಾಗಿ ಪೊಲೀಸರ ಎದುರು ಯಾರೂ ಏನೂ ನಡೆಯೋದಿಲ್ಲ ಎಂದು ಹೇಳಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.
ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?
Sign in to your account
Please enter an answer in digits:nine − four =
Remember me
