ಹುಬ್ಬಳ್ಳಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿಜಯವಾಣಿ ಹಾಗೂ ದಿಗ್ವಿಜಯ 24X7 ನ್ಯೂಸ್ ಆಯೋಜಿಸಿರುವ ವಿವಿಧ ಸ್ಪರ್ಧೆಗಳ ವಿವರಗಳುಳ್ಳ ಫ್ಲಯರ್ ಅನ್ನು ರಾಬರ್ಟ್ ಚಿತ್ರದ ನಾಯಕಿ ಅಶಾ ಭಟ್ ಅವರು ಬಿಡುಗಡೆ ಮಾಡಿದರು.
ಮಾ. 7ರಂದು ಮಹಿಳೆಯರಿಗಾಗಿ ವಿವಿಧ ಸೃಜನಾತ್ಮಕ ಸ್ಪರ್ಧೆಗಳನ್ನು ಹುಬ್ಬಳ್ಳಿ ನಗರದಲ್ಲಿ ಆಯೋಜಿಸಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಜರುಗಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಮುಂಚಿತವಾಗಿಯೇ ಮೊಬೈಲ್ ಫೋನ್ ಸಂಖ್ಯೆ 88844 32170 ಅಥವಾ 88844 32253 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿ ಸ್ಪರ್ಧೆಗೂ ಮೂರು ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಗಳ ವಿವರ ಈ ರೀತಿ ಇವೆ.

ಡ್ರೀಮ್ ಹೌಸ್ (ಕನಸಿನ ಮನೆ) ಸ್ಪರ್ಧೆ:ಅಚ್ಚುಕಟ್ಟಾದ, ಸೊಗಸಾದ ಮನೆ ನಿರ್ಮಾಣ ಮಹಿಳೆಯರಿಗೆ ಅತಿ ದೊಡ್ಡ ಕನಸು. ಮನೆಯ ಒಪ್ಪ ಓರಣ, ಅಂದ ಚಂದದ ನಿರ್ವಹಣೆಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕನಸಿನ ಮನೆಯ ಮಾದರಿ ನಿರ್ಮಿಸುವ ಸ್ಪರ್ಧೆಯನ್ನು ಮಹಿಳೆಯರಿಗೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 2*2 ಚದರ ಅಡಿ ಮನೆ ನಿರ್ಮಿಸಬೇಕು. ಕಾರ್ಡ್‌ಬೋರ್ಡ್, ಫೋಮ್, ಥರ್ಮಾಕೋಲ್, ಕಾಟನ್ ಬಾಕ್ಸ್, ಪ್ಲಾಸ್ಟಿಕ್ ಸಹಾಯದಿಂದ ಸ್ಥಳದಲ್ಲಿಯೇ ತಯಾರಿಸಬೇಕು. ಈ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು. ಸ್ಪರ್ಧೆಯಲ್ಲಿ ಗರಿಷ್ಠ 50 ಜನರಿಗೆ ಪ್ರವೇಶ ಅವಕಾಶವಿದೆ. ಮಾ. 7ರಂದು ಬೆಳಗ್ಗೆ 10 ಗಂಟೆಗೆ ಈ ಸ್ಪರ್ಧೆ ನಡೆಯಲಿದೆ.
ಫ್ಯಾನ್ಸಿ ಡ್ರೆಸ್ ಸ್ಪರ್ಧೆ:ಯಾವುದೇ ಒಬ್ಬ ಪ್ರಖ್ಯಾತ ಮಹಿಳೆಯ ವೇಷಭೂಷಣ ಸ್ಪರ್ಧೆ ಇದಾಗಿದೆ. ಗರಿಷ್ಠ 50 ಜನರಿಗೆ ಪ್ರವೇಶ ಅವಕಾಶವಿದೆ. ಬೆಳಗ್ಗೆ 9.30ಕ್ಕೆ ಸ್ಪರ್ಧೆ ನಡೆಯಲಿದೆ.
3 ಜಿ ಎಥ್ನಿಕ್ ಡ್ರೆಸ್ ಫ್ಯಾಶನ್ ಶೋ:ಒಂದೇ ಕುಟುಂಬದ ಮೂರು ತಲೆಮಾರುಗಳ ಜನರು (ಉದಾ: ಅತ್ತೆ, ಸೊಸೆ, ಮೊಮ್ಮಗಳು) ಪಾಲ್ಗೊಳ್ಳುವ ವಿಶೇಷ ಸ್ಪರ್ಧೆ ಇದಾಗಿದೆ. ಒಂದೇ ಕುಟುಂಬಕ್ಕೆ ಸೇರಿದ ಮೂರು ತಲೆಮಾರುಗಳ ಜನರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಗಮನ ಸೆಳೆಯಲು ಇಲ್ಲಿ ಅವಕಾಶ ಇರುತ್ತದೆ. ಗರಿಷ್ಠ 30 ಕುಟುಂಬಕ್ಕೆ ಪ್ರವೇಶ ಅವಕಾಶವಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಬೆಳಗ್ಗೆ 9.30ಕ್ಕೆ ಹಾಜರಿರಬೇಕು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 4 =
Remember me
