ಹುಬ್ಬಳ್ಳಿ:ಲಾಕ್​ಡೌನ್​ನಿಂದ ಮದ್ಯ ಸಿಗದೆ ಸ್ಯಾನಿಟೈಸರ್​ ಕುಡಿದಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.
ಬಸವರಾಜ ವೆಂಕಪ್ಪ ಕುರುವಿನಕೊಪ್ಪ (45 ವರ್ಷ) ಮೃತ ವ್ಯಕ್ತಿ. ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ನಿವಾಸಿಯಾಗಿದ್ದ ಬಸವರಾಜ ಮದ್ಯದ ದಾಸನಾಗಿದ್ದ. ಮಹಾಮಾರಿ ಕರೊನಾ ವೈರಸ್​ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ಎಲ್ಲಿಯೂ ಮದ್ಯ ಸಿಗದೆ ಪರದಾಡಿದ್ದ ಆತ ಸ್ಯಾನಿಟೈಸರ್​ ಕುಡಿದಿದ್ದ.
ಮೂರು ದಿನಗಳ ಹಿಂದೆಯೇ ಸ್ಯಾನಿಟೈಸರ್​ ಕುಡಿದು ಅಸ್ವಸ್ಥಗೊಂಡಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವಿಗೀಡಾಗಿದ್ದಾರೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಹಲವರು ಮದ್ಯ ಸಿಗದ ಕಾರಣ ಸ್ಯಾನಿಟೈಸರ್​ ಮೊರೆ ಹೋಗಿದ್ದಾರೆಂಬ ವಿಷಯವು ಬಹಿರಂಗವಾಗಿದೆ.
ವಿಷ ಕಾರುವವರ ಮಧ್ಯೆ ಸಿಎಂ ಯಡಿಯೂರಪ್ಪ ಸತ್ಯದ ಪರ ನಿಂತಿದ್ದಾರೆ, ಅವರಿಗೆ ಮನದಾಳದ ಧನ್ಯವಾದ ಎಂದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + twenty =
Remember me
