ಬೆಳಗಾವಿ/ಗದಗ:ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿತ ಜೋರಾಗಿದೆ. ರಾಜ್ಯಾದ್ಯಂತ ಪೊಲೀಸ್​ ಇಲಾಖೆಯಿಂದ ಚೆಕ್​ಪೋಸ್ಟ್​ಗಳು ನಿರ್ಮಾಣವಾಗಿದ್ದು, ಈವರೆಗೂ ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಬೆಳಗಾವಿ, ಗದಗ ಮತ್ತು ಚಿಕ್ಕೋಡಿಯಲ್ಲಿ ಲಕ್ಷಾಂತರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.
ಆ್ಯಕ್ಟೀವ್ ಹೋಂಡಾದಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ 13 ಲಕ್ಷ ರೂಪಾಯಿ ಹಣವನ್ನು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಪೋರ್ಟ್ ರಸ್ತೆಯ ಪಿಂಪಲಕಟ್ಟಾ ಬಳಿ ದಾಳಿ ನಡೆಸಿ ಹಣ ವಶಪಡಿಸಿಕೊಳ್ಳಲಾಗಿದೆ. ಕಪಿಲೇಶ್ವರ ಕಾಲೋನಿ ನಿವಾಸಿ ಮಂಗಲ್‌ಬೈ ಪ್ರಜಾಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಆಸಿಸ್​ ವಿರುದ್ಧದ 3 ಪಂದ್ಯದಲ್ಲೂ ಗೋಲ್ಡನ್​ ಡಕ್! ಕಳಪೆ ದಾಖಲೆ ಪಟ್ಟಿಗೆ ಸೇರಿದ ಸೂರ್ಯಕುಮಾರ್​
ಗದಗ ಜಿಲ್ಲೆಯಲ್ಲಿ ರಾತ್ರೋರಾತ್ರಿ ದಾಖಲೆ ಇಲ್ಲದ 4.43 ಲಕ್ಷ ರೂ. ಹಣ ಸೀಜ್​ ಮಾಡಲಾಗಿದೆ. ಗದಗ ನಗರದ ಹೊರವಲಯದ ದಂಡಿನ್ ದುರ್ಗಮ್ಮ ದೇವಸ್ಥಾನ ಬಳಿಯ ಚೆಕ್ ಪೋಸ್ಟ್​ನಲ್ಲಿ ಹಣ ವಶಕ್ಕೆ ಪಡೆಯಲಾಗಿದೆ. ಗಜೇಂದ್ರಗಢ ಪಟ್ಟಣದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರಿನಲ್ಲಿ ಹಣ ಸಾಗಿಸುವಾಗ ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 9.35 ಲಕ್ಷ ರೂ ಹಣವನ್ನು ಬೆಳಗಾವಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್​ಗಳಲ್ಲಿ ಹಣ ಸೀಜ್ ಮಾಡಿದ್ದಾರೆ. ಹುಕ್ಕೇರಿ ತಾಲೂಕಿನ ಬುಗಟೆ ಆಲೂರು ಚೆಕ್ ಪೋಸ್ಟ್​ನಲ್ಲಿ 1.9 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿ ಚೆಕ್ ಪೋಸ್ಟ್​ನಲ್ಲಿ 4 ಲಕ್ಷ ರೂ. ಹಾಗೂ ಅಥಣಿ ತಾಲೂಕಿನಲ್ಲಿ 3.45 ಲಕ್ಷ ರೂ. ಅನ್ನು ವಶಕ್ಕೆ ಪಡೆಯಲಾಗಿದೆ.(ದಿಗ್ವಿಜಯ ನ್ಯೂಸ್)
ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಆಸಿಸ್​ ವಿರುದ್ಧದ 3 ಪಂದ್ಯದಲ್ಲೂ ಗೋಲ್ಡನ್​ ಡಕ್! ಕಳಪೆ ದಾಖಲೆ ಪಟ್ಟಿಗೆ ಸೇರಿದ ಸೂರ್ಯಕುಮಾರ್​

ಶಿವಸೇನೆ ನಾಯಕಿಯಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಅಪಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 4 =
Remember me
