ಮಂಗಳೂರು: ಕರೊನಾ ಲಾಕ್‌ಡೌನ್‌ನಿಂದಾಗಿ ಕೆಲಸವೂ ಇಲ್ಲದೆ ಕೈಯಲ್ಲಿ ಕಾಸೂ ಇಲ್ಲದೆ ಕಂಗಾಲಾಗಿರುವ ಬಡವರನ್ನು ಹಾದಿ ತಪ್ಪಿಸಿ ಇನ್ನಷ್ಟು ಕಂಗೆಡಿಸುವ ದುರುಳತನದ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ.
ಅಂತಹುದೇ ಒಂದು ಘಟನೆ ಮಂಗಳೂರು ನಗರದ ಹೊರವಲಯದ ಕೂಳೂರು ಎಂಬಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
‘‘ಕಾರ್ಮಿಕ ಇಲಾಖೆಯವರು ಅಸಂಘಟಿತ ವಲಯದ ಕಾರ್ಮಿಕರ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್ ಸಂಗ್ರಹಿಸುತ್ತಾರೆ. ಅವರ ಖಾತೆಗೆ ತಲಾ 2000 ರೂ. ಹಾಕುತ್ತಾರೆ’’ ಎಂಬ ಸುದ್ದಿ ಬುಧವಾರ ಬೆಳಗ್ಗೆ ಹರಡಿತು. ಇದನ್ನು ನಂಬಿದ 500ಕ್ಕೂ ಹೆಚ್ಚು ಕಾರ್ಮಿಕರು ಬ್ಯಾಂಕಿನ ಪಾಸ್ ಬುಕ್, ಆಧಾರ್ ಕಾರ್ಡ್ ಹಿಡಿದುಕೊಂಡು ಕೂಳೂರಿನ ಖಾಸಗಿ ಕಟ್ಟಡದ ಬಳಿ ಬಂದಿದ್ದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸರತಿ ಸಾಲಿನಲ್ಲಿ ಸೇರಿದ್ದರು. ‘‘ಯಾಕಾಗಿ ನಿಂತಿದ್ದೀರಿ’’ ಎಂದು ಕೇಳಿದರೆ ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ. ಅದಕ್ಕಾಗಿ ನಿಂತಿದ್ದೇವೆ ಎಂದು ಉತ್ತರಿಸುತ್ತಿದ್ದರು. ಆದರೆ ಯಾರು ಹಣ ಕೊಡುತ್ತಾರೆ, ತಿಳಿಸಿದವರು ಯಾರು ಎಂದು ಕೇಳಿದರೆ ಅವರ ಬಳಿ ನಿಖರವಾದ ಉತ್ತರ ಇರಲಿಲ್ಲ. ಎಲ್ಲರೂ ಊಹಾಪೋಹ ನಂಬಿ ಬಂದಿದ್ದರು.
ಮಧ್ಯಾಹ್ನ 12.30ರಿಂದ 3ಗಂಟೆಯವರೆಗೆ ಈ ಜನಸಂದಣಿ ಕಂಡುಬಂತು. ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಒಟ್ಟಿನಲ್ಲಿ ಲಾಕ್‌ಡೌನ್ ನಿಯಮದ ಸ್ಪಷ್ಟ ಉಲ್ಲಂಘನೆಯಾಯಿತು. ಪೊಲೀಸರಂತೂ ಇದು ಕಾರ್ಮಿಕ ಇಲಾಖೆಯವರ ಕ್ರಮ ಎಂದೇ ತಿಳಿದು ಕೆಲ ಕಾಲ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಜನರನ್ನು ದೂರ ನಿಲ್ಲಿಸಿದ್ದರು!ನಂತರ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರಾದರೂ ಕಾರ್ಮಿಕರ ಊಟದ ಮಾಹಿತಿಯನ್ನಷ್ಟೇ ಪಡೆದು ಹೋದರು. ನಂತರ ಹಣ ವಿತರಣೆ ಸುಳ್ಳುಸುದ್ದಿ ಎನ್ನುವುದು ಸ್ಪಷ್ಟವಾಗಿ, ಕಾರ್ಮಿಕರು ಚದುರಿದರು. ಕೊನೆಗೂ ಇದು ಕಿಡಿಗೇಡಿಗಳ ಕೃತ್ಯ ಎಂಬುದು ಸ್ಪಷ್ಟವಾಯಿತು. ಕಾವೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಇಡೀ ಜಗತ್ತಿಗೆ ಕರೊನಾ ಚಿಂತೆ; ಇವರಿಗೆ ಮಾತ್ರ ವರದಕ್ಷಿಣೆಯ ಚಿಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 12 =
Remember me
